ಬೆಂಗಳೂರು: 'ಯಾರು ಮಹಾತ್ಮ?' ಸೇರಿ 3 ಪುಸ್ತಕಗಳ ಬಿಡುಗಡೆ

ಲೇಖಕ ರಾಜೇಶ್ ರಾವ್ ಅವರ ಯಾರು ಮಹಾತ್ಮ? ಪುಸ್ತಕ ಏ.11 ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ.
ಯಾರು ಮಹಾತ್ಮ ಪುಸ್ತಕ ಬಿಡುಗಡೆ
ಯಾರು ಮಹಾತ್ಮ ಪುಸ್ತಕ ಬಿಡುಗಡೆ
Updated on
ಬೆಂಗಳೂರು: ಲೇಖಕ ರಾಜೇಶ್ ರಾವ್ ಅವರ ಯಾರು ಮಹಾತ್ಮ? ಪುಸ್ತಕ ಏ.11 ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. 
ವಿಆರ್ ಎಲ್ ಮಾಧ್ಯಮ ಸಂಸ್ಥೆಯ ಕಚೇರಿಯಲ್ಲಿ ಅಂಕಣಕಾರ, ವಿದ್ವಾಂಸರಾದ ಕೆಎಸ್ ನಾರಾಯಣಾಚಾರ್ಯರ ನಿಜವಾಗಿ ಗಾಂಧಿಯನ್ನು ಕೊಂದವರು ಯಾರು? ಪುಸ್ತಕದ ಆಂಗ್ಲ ಅನುವಾದಿತ ಪುಸ್ತಕ ಹಾಗೂ ಮನ್ ಕೀ ಬಾತ್" ಪುಸ್ತಕಗಳ ಲೋಕಾರ್ಪಣೆ ನಡೆದಿದೆ. 
ವಿಆರ್ ಎಲ್ ಸಂಸ್ಥೆಯ ಮುಖ್ಯಸ್ಥ ವಿಜಯ ಸಂಕೇಶ್ವರ, ವಿಜಯವಾಣಿ ಪತ್ರಿಕೆ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ಮನ್ ಕೀ ಬಾತ್ ಅನುವಾದಿತ ಪುಸ್ತಕದ ಕರ್ತೃ ಶಶಿಧರ್ ನರೇಂದ್ರ ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
ಖ್ಯಾತ ಅಂಕಣಕಾರ, ವಿಶ್ಲೇಷಕ, ಸಂದೀಪ್ ಬಾಲಕೃಷ್ಣ ಅವರು ಬೆನ್ನುಡಿ ಬರೆದಿರುವ ಯಾರು ಮಹಾತ್ಮ? ರಾಜೇಶ್ ರಾವ್ ಅವರ ಚೊಚ್ಚಲ ಪುಸ್ತಕವಾಗಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com