ಶಿಕ್ಷಣ ಹಕ್ಕು ಕಾಯ್ದೆ: 1.29 ಲಕ್ಷ ಸೀಟುಗಳಿಗೆ 2.1 ಲಕ್ಷ ಆರ್ ಟಿಇ ಅರ್ಜಿಗಳು

ಶಿಕ್ಷಣ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲು ಮೊನ್ನೆ 15 ಕೊನೆಯ ದಿನವಾಗಿದ್ದು ಸಾರ್ವಜನಿಕ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲು ಮೊನ್ನೆ 15 ಕೊನೆಯ ದಿನವಾಗಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆಗೆ 2.1 ಲಕ್ಷ ಅರ್ಜಿಗಳು ಬಂದಿವೆ. ಮೊದಲ ಸುತ್ತಿನ ಪರಿಶೀಲನೆ ನಂತರ ಅರ್ಜಿಗಳ ಸಂಖ್ಯೆ 1.76 ಲಕ್ಷಕ್ಕೆ ಇಳಿದಿದೆ.
ಹಲವು ಪೋಷಕರು ಶಿಕ್ಷಣ ಹಕ್ಕು ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರಬಹುದು. ವಿಶೇಷ ಅಗತ್ಯಗಳ ಮಕ್ಕಳು ಕೂಡ ಆರ್ ಟಿಇಯಡಿ ಅರ್ಜಿ ಹಾಕಿದ್ದಾರೆ. ಈ ಕಾಯ್ದೆಯಡಿ ಒಟ್ಟು 1.29 ಲಕ್ಷ ಸೀಟುಗಳು ಲಭ್ಯವಿದ್ದು ಅರ್ಜಿಗಳನ್ನು ಇನ್ನೊಂದು ಸುತ್ತು ಪರಿಶೀಲನೆಗೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು ಮತ್ತು ಹೆಚ್ ಐವಿ ಪೀಡಿತರ ಮಕ್ಕಳು ಹಾಕಿರುವ ಅರ್ಜಿಗಳು 3,500ಕ್ಕೂ ಹೆಚ್ಚು ಇವೆ ಎಂದು ಹೇಳಿದರು.
ನಾವು ಎಲ್ಲಾ ಅರ್ಜಿಗಳನ್ನು ಪರಿಶೀಲಿಸುತ್ತಿದ್ದು ಈ ವರ್ಗದಲ್ಲಿ ಬರದಿದ್ದರೆ ಸಾಮಾನ್ಯ ವರ್ಗಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com