ಕೋಲಾರ: ಇಟ್ಟಿಗೆ ಕಾರ್ಖಾನೆಯಿಂದ 6 ಮಕ್ಕಳು ಸೇರಿ 44 ಕಾರ್ಮಿಕರ ರಕ್ಷಣೆ

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರಿನ ಇಟ್ಟಿಗೆ ಕಾರ್ಖಾನೆಯಿಂದ ಕೋಲಾರ ಜಿಲ್ಲಾಡಳಿತ 6 ಮಕ್ಕಳು ಸೇರಿ 44 ಕಾರ್ಮಿಕರನ್ನು ರಕ್ಷಣೆ ಮಾಡಿದೆ. ರಕ್ಷಣೆ ಮಾಡಲಾದ ಕಾರ್ಮಿಕರು ಒಡಿಶಾ..
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರಿನ ಇಟ್ಟಿಗೆ ಕಾರ್ಖಾನೆಯಿಂದ ಕೋಲಾರ ಜಿಲ್ಲಾಡಳಿತ 6 ಮಕ್ಕಳು ಸೇರಿ 44 ಕಾರ್ಮಿಕರನ್ನು ರಕ್ಷಣೆ ಮಾಡಿದೆ. ರಕ್ಷಣೆ ಮಾಡಲಾದ ಕಾರ್ಮಿಕರು ಒಡಿಶಾ ಮೂಲದವರಾಗಿದ್ದಾರೆ. 
ರಕ್ಷಿಸಲಾದ ಕಾರ್ಮಿಕರನ್ನು ಜೀತದಾಳುಗಳನ್ನಾಗಿ ಮಾಡಿಕೊಳ್ಳಲಾಗಿತ್ತೇ ಎಂಬ ಬಗ್ಗೆ ತನಿಖೆ ನಡೆಸುವುದಕ್ಕೆ ಕೋಲಾರ ಜಿಲ್ಲಾಧಿಕಾರಿ ಕೆವಿ ತ್ರಿಲೋಕ್ ಚಂದ್ರ ಎಸಿ ಮಂಜುನಾಥ್ ಅವರಿಗೆ ಸೂಚನೆ ನೀಡಿದ್ದಾರೆ. ಕಾರ್ಮಿಕರ ರಕ್ಷಣೆ ಬಗ್ಗೆ ಕೋಲಾರ ಜಿಲ್ಲಾಧಿಕಾರಿ ತ್ರಿಲೋಕ್ ಚಂದ್ರ ಮಾಹಿತಿ ನೀಡಿದ್ದು, ಕಾರ್ಮಿಕರು ಕೆಲಸ ಮಾಡುತ್ತಿದ್ದ ಕಾರ್ಖಾನೆಯ ಮಾಲಿಕ ಅವರನ್ನು ಒಡಿಶಾಗೆ ತೆರಳಲು ಬಿಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಒಡಿಶಾದ ಬಾಲಂಗಿರ್ ಜಿಲ್ಲಾಡಳಿತ ಅವರನ್ನು ರಕ್ಷಣೆ ಮಾಡುವಂತೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 
ಎಸಿ ಮಂಜುನಾಥ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಕಾರ್ಮಿಕರು ಕೆಲಸ ಮಾಡುತ್ತಿದ್ದ ಎಂಬಿಡಬ್ಲ್ಯೂ ಇಟ್ಟಿಗೆ ಕಾರ್ಖಾನೆ ಶ್ರೀನಿವಾಸಪ್ಪ ಎಂಬುವವರಿಗೆ ಸೇರಿದೆ. ರಕ್ಷಣೆ ಮಾಡಲಾದ ಕಾರ್ಮಿಕರಿಗೆ ಬಿಸಿಎಂ ಹೋಟೆಲ್ ನಲ್ಲಿ ಪುನರ್ವಸತಿ ಕಲ್ಪಿಸಲಾಗಿದ್ದು, ಒಡಿಶಾಗೆ ತೆರಳಲು ರೈಲು ಟಿಕೆಟ್ ನ್ನು ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com