ಬೆಂಗಳೂರು: ರಾಜ್ಯದಲ್ಲಿ ಸಾಕಷ್ಟು ಆಂತಕ ಸೃಷ್ಟಿಸಿದ್ದ ಆರ್'ಎಸ್ಎಸ್ ಮುಖಂಡ ರುದ್ರೇಶ್ ಹತ್ಯೆ ಪ್ರಕರಣದ ಹಿಂದೆ ಉಗ್ರ ಸಂಘಟನೆಗಳ ಕೈವಾಡವಿರುವುದು ಎನ್ಐಎ ತನಿಖೆಯಿಂದ ದೃಢಪಟ್ಟಿದೆ.
ರುದ್ರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಶುಕ್ರವಾರ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ 5 ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ದೋಷರೋಪಣಾ ಪಟ್ಟಿಯಲ್ಲಿ ರುದ್ರೇಶ್ ಹಂತಕರಿಗೆ ಭಯೋತ್ಪಾದಕರ ನಂಟಿರುವುದಾಗಿ ಅಧಿಕಾರಿಗಳು ಉಲ್ಲೇಖ ಮಾಡಿದ್ದಾರೆ.
ರುದ್ರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಶುಕ್ರವಾರ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ 5 ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ದೋಷರೋಪಣಾ ಪಟ್ಟಿಯಲ್ಲಿ ರುದ್ರೇಶ್ ಹಂತಕರಿಗೆ ಭಯೋತ್ಪಾದಕರ ನಂಟಿರುವುದಾಗಿ ಅಧಿಕಾರಿಗಳು ಉಲ್ಲೇಖ ಮಾಡಿದ್ದಾರೆ.
ಐವರು ಆರೋಪಿಗಳನ್ನು ಇರ್ಫಾನ್ ಪಾಷಾ (32), ವಸೀಂ (32), ಮೊಹಮ್ಮದ್ ಸಿದ್ದಿಕ್ಕಿ (36), ಮುಜಿದ್ ಉಲ್ಲಾ (46), ಆಸೀಂ ಷರೀಫ್ (40) ಎಂದು ಗುರ್ತಿಸಲಾಗಿದ್ದು, ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐವರು ಆರೋಪಿಗಳು ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ಸದಸ್ಯರಾಗಿದ್ದು, ಆರೋಪಿಗಳಿಗೆ ರುದ್ರೇಶ್ ಮೇಲೆ ಯಾವುದೇ ರೀತಿಯ ವೈಯಕ್ತಿಕ ದ್ವೇಷವಿರಲಿಲ್ಲ. ಕೇವಲ ಆರ್'ಎಸ್ಎಸ್ ಸಂಘಟನೆಯ ನಾಯಕ ಹಾಗೂ ಸದಸ್ಯನಾಗಿದ್ದ ಕಾರಣಕ್ಕೆ ಮಾತ್ರವೇ ಹತ್ಯೆ ಮಾಡಲಾಗಿದೆ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಹೇಳಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಐಸಿಸಿ ಸೆಕ್ಷನ್ 302, 34, 120 ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ 161 (ಎ), 18, 20 ಅಡಿಯಲ್ಲಿ ಪ್ರಕರಣ ದಾಖಲಿಸಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಎನ್ಐಎ ತಿಳಿಸಿದೆ.
ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಬಲಗೊಳ್ಳುತ್ತಿದೆ. ಸಂಘಟನೆಯ ಬಲ ಕುಗ್ಗಿಸಲು ಆರ್ ಎಸ್ಎಸ್ ಕಾರ್ಯಕರ್ತನೊಬ್ಬನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಅದು ಕೂಡ ಆರ್ ಎಸ್ಎಸ್ ಪಥ ಸಂಚಲನದಲ್ಲಿ ಕನಿಷ್ಟ ಇಬ್ಬರು ಗಣವೇಷಧಾರಿಗಳು ಹತ್ಯೆ ಮಾಡಬೇಕು. ಇದರಿಂದ ಆರ್ ಎಸ್ಎಸ್ ಸಂಘಟನೆ ಸೇರುವವರಲ್ಲಿ ಭಯ, ಆತಂಕ ಹುಟ್ಟುತ್ತದೆ ಹೀಗಾಗಿ ಆರ್ ಎಸ್ಎಸ್ ಬಲ ಕಡಿಮಗೊಳ್ಳುತ್ತದೆ ಎಂದು ಆರೋಪಿಗಳು ಭಾವಿಸಿದ್ದರು.
ಈ ಹಿನ್ನಲೆಯಲ್ಲಿ ರುದ್ರೇಶ್ ಹತ್ಯೆಗೂ ಒಂದು ತಿಂಗಳ ಮುನ್ನ ಆರೋಪಿಗಳು ಪಿಎಫ್ಐ ಮತ್ತು ಎಸ್ ಡಿಪಿಐ ಸಂಘಟನೆ ಕೆಲ ನಾಯಕರೊಂದಿಗೆ ನಗರದ ಆಕ್ಸಾ ಮಸೀದಿ, ಛೋಟಾ ಚಾರ್ ಮಿನಾರ್ ಮಸೀದಿಗಳಲ್ಲಿ ಸಭೆ ನಡೆಸಿದ್ದರು ಎಂದು ಎನ್ ಐಎ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಬಂಧಿತ ಆಸೀಂ ಷರೀಫ್ ನನ್ನು ಕೆಲ ದಿನಗಳ ಹಿಂದೆ ವಶಕ್ಕೆ ಪಡೆದಿದ್ದ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಕೋರ್ಟ್ ಗೆ ಹಾಜರು ಪಡಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
2016 ಅಕ್ಟೋಬರ್ 16 ರಂದು ಮಧ್ಯಾಹ್ನ 12.40ರ ಸುಮಾರಿಗೆ ಕಮರ್ಷಿಯಲ್ ಸ್ಟ್ರೀಟ್ ನ ಶಿವಾಜಿ ಸರ್ಕಲ್ ಬಳಿಯ ಬಿಇಓ ಕಚೇರಿ ಬಳಿ ಸ್ನೇಹಿತರೊಂದಿಗೆ ಮಾತನಾಡಿಕೊಂಡು ಗಣವೇಷದಲ್ಲೇ ನಿಂತಿದ್ದ ರುದ್ರೇಶ್ ನನ್ನು ಇಬ್ಬರು ಮುಸುಕುಧಾರಿಗಳು ಬೈಕ್ ನಲ್ಲಿ ಬಂದು ಹತ್ಯೆಗೈದು ಪರಾರಿಯಾಗಿದ್ದರು.