ಅರಿವಳಿಕೆ ಅಧಿಕ ಡೋಸ್ ನ ಶಂಕೆ: 6 ವರ್ಷದ ಬಾಲಕ ಸಾವು

ಇಲ್ಲಿನ ಹೆಚ್ ಎಸ್ಆರ್ ಲೇ ಔಟ್ ನ ಖಾಸಗಿ ಆಸ್ಪತ್ರೆಯಲ್ಲಿ ಅನಸ್ತೇಶಿಯಾದ ಓವರ್ ಡೋಸ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಇಲ್ಲಿನ ಹೆಚ್ ಎಸ್ಆರ್ ಲೇ ಔಟ್ ನ ಖಾಸಗಿ ಆಸ್ಪತ್ರೆಯಲ್ಲಿ ಅನಸ್ತೇಷಿಯಾದ ಓವರ್ ಡೋಸ್ ನಿಂದ 6 ವರ್ಷದ ಬಾಲಕ ಮೃತಪಟ್ಟ ಘಟನೆ  ನಿನ್ನೆ ನಡೆದಿದೆ. ಬಾಲಕನಿಗೆ ಚಿಕಿತ್ಸೆ ನೀಡುತ್ತಿದ್ದ ಅಣ್ಣಯ್ಯ ಹೆಲ್ತ್ ಕೇರ್ ನ ವೈದ್ಯರ ವಿರುದ್ಧ ಪೋಷಕರು ಕೇಸು ದಾಖಲಿಸಿದ್ದಾರೆ. ಇದೇ ರೀತಿಯ ಘಟನೆ 2013ರಲ್ಲಿ ಇದೇ ಆಸ್ಪತ್ರೆಯಲ್ಲಿ ನಡೆದಿದ್ದು 3 ವರ್ಷದ ಬಾಲಕ ಮೃತಪಟ್ಟಿದ್ದ.
ಮೃತ ಬಾಲಕನನ್ನು ಸಂತೋಷ್ ಎಂದು ಗುರುತಿಸಲಾಗಿದ್ದು ನಿತ್ಯಾನಂದ ಮತ್ತು ಮಹೇಶ್ವರಿಯವರ ಮಗನಾಗಿದ್ದಾನೆ. ಅವರು ತಮಿಳುನಾಡು ಮೂಲದವರಾಗಿದ್ದು ಕೋರಮಂಗಲದ ಈಜಿಪುರದಲ್ಲಿ ವಾಸಿಸುತ್ತಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ನಿತ್ಯಾನಂದ, ಸಂತೋಷ್ ಗೆ ಉಸಿರಾಟದ ತೊಂದರೆಯಿತ್ತು. ಇಲ್ಲಿಗೆ ದಾಖಲಿಸುವ ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಮೂರು ತಿಂಗಳ ಚಿಕಿತ್ಸೆ ಪಡೆಯುವಂತೆ ವೈದ್ಯರು ಹೇಳಿದ್ದರು. ಇತ್ತೀಚೆಗೆ ಸಂತೋಷ್ ಮತ್ತೆ ಉಸಿರಾಟದ ತೊಂದರೆಯಿದೆ ಎನ್ನುತ್ತಿದ್ದ.  ಸಣ್ಣ ಆಪರೇಶನ್ ಮಾಡಿಸಬೇಕೆಂದು ವೈದ್ಯರು ಹೇಳಿದ್ದರು.
ಅಣ್ಣಯ್ಯ ಆಸ್ಪತ್ರೆಯ ಡಾ.ಧನರಾಜ್ ಇಂದು ಆಪರೇಶನ್ ಮಾಡಿಸಲು ಸೂಚಿಸಿದ್ದರು. ಆದರೆ ಮತ್ತೆ ವೈದ್ಯರು ಕರೆ ಮಾಡಿ ಶುಕ್ರವಾರವೇ ಕರೆದುಕೊಂಡು ಬರಲು ಹೇಳಿದ್ದರು. ನಿನ್ನೆ ಬೆಳಗ್ಗೆ 8.30ಕ್ಕೆ ಸಂತೋಷ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.  ವೈದ್ಯರು 12.30ಕ್ಕೆ ಆಪರೇಶನ್ ಆರಂಭಿಸಿದರು. ಸಾಯಂಕಾಲ 4.30ರ ಸುಮಾರಿಗೆ ಆಪರೇಶನ್ ಯಶಸ್ವಿಯಾಗಿದೆಯೆಂದು ವಾರ್ಡಿಗೆ ಸಾಯಂಕಾಲ 6 ಗಂಟೆ ಸುಮಾರಿಗೆ ವರ್ಗಾಯಿಸಲಾಗುವುದೆಂದು ಹೇಳಿದರು. ಆದರೆ ನಂತರ ವೈದ್ಯರು ಸಂತೋಷ್ ನ ಉಸಿರಾಟ ಕ್ಷೀಣಿಸಿದ್ದು ಹೃದಯಾಘಾತವಾಗಿದೆ ಎಂದರು.
ನಂತರ ನಾರಾಯಣ ಹೃದಯಾಲಯಕ್ಕೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ನಾರಾಯಣ ಹೃದಯಾಲಯಕ್ಕೆ ಕರೆದುಕೊಂಡು ಹೋಗಬೇಕೆನ್ನುವಷ್ಟರಲ್ಲಿ ವೈದ್ಯರು ಸೈಂಟ್ ಜಾನ್ಸ್ ಆಸ್ಪತ್ರೆಗೆ ತಕ್ಷಣ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ವೈದ್ಯರು ಸಂತೋಷ್ ಮೃತಪಟ್ಟನೆಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com