ಬೆಳ್ಳಂದೂರು ಕೆರೆ ರಕ್ಷಣೆಗೆ 12 ಹೋಮ್ ಗಾರ್ಡ್ಸ್ ನೇಮಕ:ಬಿಬಿಎಂಪಿ

ಕಸಕಡ್ಡಿ, ಗೊಬ್ಬರ, ಕೊಳೆತ ಪದಾರ್ಥಗಳನ್ನು ಯಾರೂ ಹಾಕದಂತೆ ಕೆರೆಯನ್ನು ರಕ್ಷಿಸಲು ಬೃಹತ್ ...
ಬೆಳ್ಳಂದೂರು ಕೆರೆ
ಬೆಳ್ಳಂದೂರು ಕೆರೆ
ಬೆಂಗಳೂರು: ಕಸಕಡ್ಡಿ, ಗೊಬ್ಬರ, ಕೊಳೆತ ಪದಾರ್ಥಗಳನ್ನು ಯಾರೂ ಹಾಕದಂತೆ ಕೆರೆಯನ್ನು ರಕ್ಷಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಳ್ಳಂದೂರು ಕೆರೆಯ ಸುತ್ತ 12 ಹೋಮ್ ಗಾರ್ಡ್ಸ್ ಗಳನ್ನು ಶಿಫ್ಟ್ ಮಾದರಿಯಲ್ಲಿ ನೇಮಿಸಲಿದೆ. ರಾತ್ರಿ ವೇಳೆ ಗಸ್ತು ವಾಹನ ಕೂಡ ಸಂಚರಿಸಲಿದೆ. ಈ ಎಲ್ಲಾ ಕಾರ್ಯಗಳು ಇಂದಿನಿಂದ ಆರಂಭವಾಗಲಿದೆ.
ಕಳೆದ ಶುಕ್ರವಾರ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಪಾಲಿಕೆ ಸಂಸ್ಥೆಗಳ ಜೊತೆ ಸಭೆ ನಡೆಸಿ ಬೆಳ್ಳಂದೂರು ಕೆರೆಯ ಪುನಶ್ಚೇತನಕ್ಕೆ ನೀಲಿನಕ್ಷೆ ತಯಾರಿಸಿದೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ ತಲಾ ನಾಲ್ವರು ಹೋಮ್ ಗಾರ್ಡ್ಸ್ ಮೂರು ಶಿಫ್ಟ್ ಗಳಲ್ಲಿ ಕೆಲಸ ಮಾಡಲಿದ್ದಾರೆ. ಈಗಾಗಲೇ ಕೆರೆಯ ಸುತ್ತ 5 ಸಿಸಿಟಿವಿ ಕ್ಯಾಮರಾಗಳಿದ್ದು ಅಗತ್ಯವಿದ್ದರೆ ಇನ್ನೂ ಹೆಚ್ಚು ಕ್ಯಾಮರಾಗಳನ್ನು ಅಳವಡಿಸಲಾಗುವುದು. ಬೆಳಕಿನ ಕೇಂದ್ರೀಕರಣ ಕೂಡ ನಡೆಯಲಿದೆ. ನೊರೆ ತುಂಬಿರುವುದನ್ನು ಕೂಡ ತೆಗೆಯುವ ಕಾರ್ಯ ನಡೆಯಲಿದೆ ಎಂದು ವಿವರಿಸಿದರು.
ಬಿಡಬ್ಲ್ಯುಎಸ್ಎಸ್ ಬಿ ಮತ್ತು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಭೂಮಿಯ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com