ಇದರಿಂದ ಅಂಬರೀಷ್ ಮತ್ತು ಅವರ ಸಹೋದರ ಶಿರೀಶ್ ಆಕ್ರೋಶಗೊಂಡಿದ್ದಾರೆ, ಇದಾದೆ ಕೆಲವೇ ಕ್ಷಣಗಳಲ್ಲಿ ಶಿರೀಶ್ ಮತ್ತು ಆತನ ಆರು ಸಹಚರರು ಟೋಲ್ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ. ಸಂಸದರು ಪುತ್ರರು ಹಾಗೂ ಅವರ ಜೊತೆಗಿದ್ದವರೆಲ್ಲಾ ಸೇರಿ ಟೋಲ್ ಬೂತ್ ಮೇಲೆ ದಾಳಿ ನಡೆಸಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ, ದಾಳಿಯಿಂದ ಹೆದರಿದ ಟೋಲಿ ಸಿಬ್ಬಂದಿ ಅಲ್ಲಿಂದ ಓಡಿಹೋಗಿದ್ದಾರೆ,ನಂತರ ಸಂಸದನ ಪುತ್ರನ ಸಹಚರರು ಟೋಲ್ ಬೂತ್ ನ ಕಿಟಕಿ ಗಾಜು, ಕಂಪ್ಯೂಟರ್ ಗಳನ್ನೆಲ್ಲಾ ಒಡೆದು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.