ಕರ್ನಾಟಕ ಸೇರಿ ದೇಶದ 8 ರಾಜ್ಯಗಳಲ್ಲಿ ಕಾಗದ ರಹಿತ ಆಡಳಿತ

ಕರ್ನಾಟಕ ವಿಧಾನ ಮಂಡಲದಲ್ಲಿ ಶೀಘ್ರವೇ ಕಾಗದ ರಹಿತ ಇ-ಆಡಳಿತ ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ ಇ-ವಿಧಾನ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕ ವಿಧಾನ ಮಂಡಲದಲ್ಲಿ  ಶೀಘ್ರವೇ ಕಾಗದ ರಹಿತ ಇ-ಆಡಳಿತ ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ ಇ-ವಿಧಾನ ಕುರಿತು ಅಧ್ಯಯನ ಆರಂಭಿಸಿದೆ. ವಿಧಾನ ಸಭೆ ಮತ್ತು ವಿಧಾನ ಪರಿಷತ್ ಗಳಲ್ಲಿ ಕಾಗದ ರಹಿತ ಆಡಳಿತ ಜಾರಿಗೆ ತರುವುದು ಇದರ ಉದ್ದೇಶವಾಗಿದೆ. 
ಕೇಂದ್ರ ಸರ್ಕಾರದ ಡಿಜಿಟಲ್ ಯೋಜನೆಯಡಿ ಕರ್ನಾಟಕ ಸೇರಿದಂತೆ ಒಟ್ಟು ದೇಶದ 8 ರಾಜ್ಯಗಳಲ್ಲಿ ಪೇಪರ್ ಲೆಸ್ ಯೋಜನೆ ಜಾರಿಗಾಗಿ ಸಿದ್ಧತೆ ನಡೆಸಲಾಗಿದೆ. ಕರ್ನಾಟಕ ವಿಧಾನ ಮಂಡಲ ಕಾರ್ಯದರ್ಶಿಗಳು ಇದಕ್ಕಾಗಿ 64 ಕೋಟಿ ರೂ, ಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ. 
ಒಮ್ಮೆ ಈ ಯೋಜನೆ ಜಾರಿಯಾದರೇ ಪ್ರತಿಯೊಬ್ಬ ಜನಪ್ರತಿನಿಧಿಗಳು ಎಲ್ಲಾ ವ್ಯವಹಾರಗಳನ್ನು ಆನ್ ಲೈನ್ ಮತ್ತು ಇ-ಮೇಲ್ ಮೂಲಕವೇ ಮಾಡಬೇಕಾಗುತ್ತದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ ಗಳಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕರು ಪೇಪರ್ ಬಳಸುವಂತಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿಯೊಂದು ಸಂಪರ್ಕ ಮತ್ತು ಸಂಹವನವನ್ನು ಕಾಗದರಹಿತವಾಗಿ ಮಾಡುವುದೇ ಇದರ ಪ್ರಮುಖ ಉದ್ದೇಶ. ನಿಗಮ ಮತ್ತು ಮಂಡಳಿಗಳು ಕೂಡ ಡಿಜಿಟಲ್ ಮಾದರಿ ಅಳವಡಿಸಲು ತಮ್ಮ ವರದಿಯನ್ನು ರವಾನಿಸಿವೆ.
ಪ್ರತಿ ವರ್ಷ ರಾಜ್ಯ ಸರ್ಕಾರ ಪತ್ರ ವ್ಯವಹಾರಗಳಿಗಾಗಿ ಸುಮಾರು 100 ಕೋಟಿ ರು ಹಣವನ್ನು ವೆಚ್ಚ ಮಾಡುತ್ತಿದೆ ಎಂದು ವಿಧಾನಸಭೆ ಕಾರ್ಯಾಲಯ ಮಾಹಿತಿ ನೀಡಿದೆ. ಸದನಗಳು ಆರಂಭವಾಗುವ ಮುನ್ನ  ಎರಡು ಸದನಗಳ ಎಲ್ಲಾ ಸದಸ್ಯರುಗಳಿಗೆ ಹಾಗೂ ಅಧಿಕಾರಿಗಳಿಗೆ ಮತ್ತು ಮಾಧ್ಯಮದವರಿಗೆ ಯಾವುದೇ ಸೂಚನೆಯಿದ್ದರೂ ಆದನ್ನೂ ಪತ್ರದ ಮೂಲಕವೇ ಮಾಡಲಾಗುತ್ತಿದೆ., ಇದರಿಂದ ಅಧಿಕ ವೆಚ್ಚ ತಗುಲುತ್ತಿದ್ದು, ಡಿಜಿಟಲ್ ವ್ಯವಸ್ಥೆ ಜಾರಿಯಾದರೇ ಹಣ ಉಳಿತಾಯವಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com