1 ಕೋಟಿಗೂ ಹೆಚ್ಚು ನಿಷೇಧಿತ ನೋಟು ಸಾಗಣೆ; ಕಾರವಾರದಲ್ಲಿ ಓರ್ವನ ಬಂಧನ

ನಿಷೇಧಿತ 500 ಹಾಗೂ 1 ಸಾವಿರ ರೂ ನೋಟುಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಚಿತ್ತಕುಲ ಪೊಲೀಸರು ಕಾರವಾರದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿ, 1.30 ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕಾರವಾರ: ನಿಷೇಧಿತ 500 ಹಾಗೂ 1 ಸಾವಿರ ರೂ ನೋಟುಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಚಿತ್ತಕುಲ ಪೊಲೀಸರು ಕಾರವಾರದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿ, 1.30 ಕೋಟಿ ರೂ ಹಣವನ್ನು ವಶ ಪಡಿಸಿಕೊಂಡಿದ್ದಾರೆ.
ಕಾರವಾರ ತಾಲೂಕಿನ ಗೋವಾ- ಕರ್ನಾಟಕ ಗಡಿ ಭಾಗದ ಚೆಕ್ ಪೋಸ್ಟ್ ನಲ್ಲಿ ರಾಜ್ಯ ಸಾರಿಗೆ ಬಸ್ ತಪಾಸಣೆ ನಡೆಸಿದಾಗ ಬಸ್ ನಲ್ಲಿ 1 ಕೋಟಿ 30 ಲಕ್ಷದ 40 ಸಾವಿರ ರು ಮೌಲ್ಯದ ಹಳೇಯ ನೋಟುಗಳನ್ನು ಸಾಗಿಸಲಾಗುತ್ತಿತ್ತು. ಈ ಸಂಬಂಧ ವನಿ ಪ್ರಭು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೋವಾದ ಮಡಗಾವ್ ನಿಂದ ನಿಷೇಧಿತ ನೋಟು ಸಾಗಿಸುತ್ತಿದ್ದ ಆರೋಪ ಮೇಲೆ ಶನಿವಾರ ಚಿತ್ತಕುಲ ಪೊಲೀಸರು ಜಯಶ್ರೀ, ಭವಾನಿ ರಮೇಶ್ ನಾಯಕ್ ಮತ್ತು ಮೀನಾಕ್ಷಿ ನಾಯಕ್ ಎಂಬುವರನ್ನು ಬಂಧಿಸಿದ್ದಾರೆ. ಹಣ ತರಲು ಅವರ ಗೋವಾಗೆ ತೆರಳಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾರೆ. 
ವನಿ ಪ್ರಭು ಎಂಬಾತನ ಸೂಚನೆಯಂತೆ ತಾವು ಗೋವಾಗೆ ತೆರಳಿ ಹಣ ಪಡೆದು ವಾಪಸ್ ಬರುತ್ತಿದ್ದುದ್ದಾಗಿ ಮೂವರು ಮಹಿಳೆಯರು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಅವರ ಹೇಳಿಕೆಯ ಆಧಾರದ ಮೇಲೆ ವನಿ ಪ್ರಭು ಎಂಬಾತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ರಾವ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com