ಅಕ್ರಮವಾಗಿ ನೀರು ತುಂಬಿಸುತ್ತಿರುವ ಟ್ಯಾಂಕರ್ ಗಳು
ಅಕ್ರಮವಾಗಿ ನೀರು ತುಂಬಿಸುತ್ತಿರುವ ಟ್ಯಾಂಕರ್ ಗಳು

ಶಿವಮೊಗ್ಗ ಅಡಿಕೆ ಬೆಳೆಗಾರರಿಗೆ ಸಂಕಷ್ಟ: 1 ಟ್ಯಾಂಕರ್ ನೀರು ಬೆಲೆ 7 ಸಾವಿರ ರು.!

ಅಡಿಕೆ ಬೆಳೆದು ಮಳೆಯಿಲ್ಲದೇ ಸಂಕಷ್ಟಕ್ಕೊಳಗಾಗಿರುವ ಅಡಿಕೆ ಬೆಳೆಗಾರರಿಗೆ ಖಾಸಗಿ ನೀರು ಪೂರೈಕೆದಾರರು ಮತ್ತಷ್ಟು ಬರೆ ಎಳೆಯುತ್ತಿದ್ದಾರೆ. ಖಾಸಗಿ ನೀರು ..
ಶಿವಮೊಗ್ಗ: ಅಡಿಕೆ ಬೆಳೆದು ಮಳೆಯಿಲ್ಲದೇ ಸಂಕಷ್ಟಕ್ಕೊಳಗಾಗಿರುವ ಅಡಿಕೆ ಬೆಳೆಗಾರರಿಗೆ ಖಾಸಗಿ ನೀರು ಪೂರೈಕೆದಾರರು ಮತ್ತಷ್ಟು ಬರೆ ಎಳೆಯುತ್ತಿದ್ದಾರೆ. ಖಾಸಗಿ ನೀರು ಪೂರೈಕೆದಾರರು ಒಂದು ಲಾರಿ ಟ್ಯಾಂಕರ್ ನೀರಿನ ಬೆಲೆ 5 ಸಾವಿರದಿಂದ 7.500 ರು  ಹಾಗೂ ಒಂದು ಟ್ರ್ಯಾಕ್ಟರ್ ಟ್ಯಾಂಕರ್ ನೀರಿಗೆ 2,500 ರಿಂದ 3 ಸಾವಿರ ರೂ ಗೆ ಮಾರಾಟ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬೆಳೆಗಾರರು, ದಾವಣಗೆರೆ, ಚಿತ್ರದುರ್ಗ, ಜಿಲ್ಲೆಗಳ ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ನೀರಿಗಾಗಿ ಪರದಾಡುತ್ತಿದ್ದಾರೆ.
ಕಳೆದ ಮೂರು ದಿನದಳಿಂದ ಭದ್ರಾ ನಾಲೆಗೆ ತೋಟಗಾರಿಕೆ ಮತ್ತು ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಬಿಡುಗಡೆ ಮಾಡಲಾಗಿದೆ. ಭದ್ರಾ ಜಲಾಶಯದಲ್ಲಿ 114 ಅಡಿ ನೀರು ಸಂಗ್ರಹವಾಗಿದೆ. ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನ ಹೀರೆಮಲಳಿ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಿಂದ  ಕಾನೂನು ಬಾಹಿರವಾಗಿ ನೀರನ್ನು ತೆಗೆದು ಅತ್ಯಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಭದ್ರಾ ಬಲದಂಡೆ ನಾಲೆಯ ಮೇಲೆ ನೀರಿನ ಟ್ಯಾಂಕರ್ ಗಳು ಸಾಲಾಗಿ ನಿಂತಿದ್ದವು ಈ ವಿಷಯವನ್ನು ಕೆಲವರು ನಮಗೆ ತಿಳಿಸಿದರು. ನಮ್ಮ ಕೆಲ ಇಂಜಿನೀಯರ್ ಗಳು ಅಲ್ಲಿಗೆ ತೆರಳಿ, ನೀರನ್ನು ಟ್ಯಾಂಕರ್ ಗೆ ತುಂಬದಂತೆ ಸೂಚನೆ ನೀಡಿದ ನಂತರ ಎಲ್ಲರೂ ಅಲ್ಲಿಂದ ಹೋಗಿದ್ದಾರೆ ಎಂದು ಭದ್ರ ಕಮಾಂಡ್ ಏರಿಯಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್,ಎಸ್ ಸುಂದರೇಶ್ ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com