ಬೆಂಗಳೂರು: ಮೂರು ಸಾವಿರ ದಾಟಿದ ಡೆಂಗ್ಯು ಪೀಡಿತರ ಸಂಖ್ಯೆ

ನಗರದಲ್ಲಿ ಡೆಂಗ್ಯು ಹರಡುವಿಕೆ ವಿಪರೀತ ಏರಿಕೆಯಾಗುತ್ತಿದ್ದು, ಜ್ವರದಿಂದ ಬಳಲುತ್ತಿರುವವರ...
ಬೆಂಗಳೂರಿನ ಕೊಳಚೆ ಪ್ರದೇಶದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಮಬ್ಬು ಹಾಕುವ ಪಾಲಿಕೆ ಸಿಬ್ಬಂದಿ
ಬೆಂಗಳೂರಿನ ಕೊಳಚೆ ಪ್ರದೇಶದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಮಬ್ಬು ಹಾಕುವ ಪಾಲಿಕೆ ಸಿಬ್ಬಂದಿ
ಬೆಂಗಳೂರು: ನಗರದಲ್ಲಿ ಡೆಂಗ್ಯು ಹರಡುವಿಕೆ ವಿಪರೀತ ಏರಿಕೆಯಾಗುತ್ತಿದ್ದು, ಜ್ವರದಿಂದ ಬಳಲುತ್ತಿರುವವರ ಸಂಖ್ಯೆ 3,000 ದಾಟಿದೆ. 
ಡೆಂಗ್ಯು ಜ್ವರಕ್ಕೆ ತುತ್ತಾದವರ ಎಲ್ಲಾ ಕೇಸುಗಳು ದಾಖಲೆಗಳಿಗೆ ಸಿಗುವುದಿಲ್ಲ. ಬೃಹತ್ ಪ್ರಮಾಣದಲ್ಲಿನ ಒಂದು ಸಣ್ಣ ಅಂಕಿಅಂಶವಷ್ಟೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು. ಬಿಬಿಎಂಪಿ ಸಾರ್ವಜನಿಕ ಆರೋಗ್ಯ ಮಾಹಿತಿ ಮತ್ತು ಎಪಿಡೆಮಿಯಾಲಾಜಿಕಲ್ ಸೆಲ್ ನ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 3,052 ಡೆಂಗ್ಯು ಕೇಸುಗಳು ವರದಿಯಾಗಿವೆ ಎಂದು ದೃಢಪಡಿಸಿದ್ದಾರೆ. 
ಅಧಿಕೃತ ಅಂಕಿಅಂಶದಲ್ಲಿ ಕೆಲವು ವ್ಯತ್ಯಾಸಗಳಿವೆ. ಏಕೆಂದರೆ ರಾಜ್ಯದ ಆರೋಗ್ಯ ಇಲಾಖೆಯ ಅಂಕಿಅಂಶ ಪ್ರಕಾರ ನಗರದಲ್ಲಿ ಡೆಂಗ್ಯು ಪೀಡಿತರ ಸಂಖ್ಯೆ ಈ ವರ್ಷ 2,443 ಆಗಿದೆ. ಬಿಬಿಎಂಪಿ ಕೇವಲ ನಗರದ ಪ್ರಮುಖ ಪ್ರದೇಶಗಳನ್ನು ಮಾತ್ರ ಪರಿಗಣಿಸುತ್ತಿದೆ. ಅಂದರೆ ಒಟ್ಟು 8 ವಲಯಗಳ ಬದಲಿಗೆ 3 ವಲಯಗಳನ್ನು ಮಾತ್ರ ಪರಿಗಣಿಸಿದೆ ಎನ್ನುತ್ತಾರೆ ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ.ಎಂ.ಎನ್. ಲೋಕೇಶ್. ಡೆಂಗ್ಯು ಪೀಡಿತರ ಸಂಖ್ಯೆ ಹೆಚ್ಚಳವಾಗಿದ್ದರೂ ಕೂಡ ಅದರಿಂದ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ ಎನ್ನುತ್ತಾರೆ ಅಧಿಕಾರಿಗಳು.
 ರಾಜಾಜಿನಗರದ ಇಎಸ್ಐಸಿ ಆಸ್ಪತ್ರೆಯ ಉಪ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ಕೆ.ಟಿ.ಪದ್ಮಜಾ, ಡೆಂಗ್ಯು ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಾಗಿದೆ. ಸರಾಸರಿ 20ರಿಂದ 30 ಕೇಸುಗಳು ಪ್ರತಿದಿನ ಬರುತ್ತವೆ. ವಿವಿಧ ವಯೋಮಾನದವರಲ್ಲಿ ಇದು ಕಂಡುಬರುತ್ತಿದೆ ಎನ್ನುತ್ತಾರೆ.
ಪ್ರತಿವರ್ಷ ಜುಲೈಯಿಂದ ಸೆಪ್ಟೆಂಬರ್ ವರೆಗೆ ಡೆಂಗ್ಯು ಜ್ವರ ಕಂಡುಬರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com