'ಆ ಮಾರಣಾಂತಿಕ ಹತ್ಯಾಕಾಂಡ ನನ್ನ ಸ್ಮೃತಿಪಟಲದಿಂದ ಇನ್ನೂ ಮಾಸಿಲ್ಲ'

ಮಹಾತ್ಮ ಗಾಂಧಿಯವರ ಕ್ವಿಟ್ ಇಂಡಿಯಾ ಚಳವಳಿಯಿಂದ ಸ್ಪೂರ್ತಿಗೊಂಡ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರಿನ ದೇಶಭಕ್ತರು...
ಈಸೂರಿನ ದೇವಾಲಯದ ಮೇಲೆ 1942 ರಲ್ಲಿ ಧ್ವಜ ಹಾರಿಸಿದ ವೇಳೆ ಗ್ರಾಮಸ್ಥರ ಜೊತೆಯಲ್ಲಿ ಗಂಗಯ್ಯ ಹೆಗಡೆ
ಈಸೂರಿನ ದೇವಾಲಯದ ಮೇಲೆ 1942 ರಲ್ಲಿ ಧ್ವಜ ಹಾರಿಸಿದ ವೇಳೆ ಗ್ರಾಮಸ್ಥರ ಜೊತೆಯಲ್ಲಿ ಗಂಗಯ್ಯ ಹೆಗಡೆ
ಚಿಕ್ಕಮಗಳೂರು: ಮಹಾತ್ಮ ಗಾಂಧಿಯವರ ಕ್ವಿಟ್ ಇಂಡಿಯಾ ಚಳವಳಿಯಿಂದ ಸ್ಪೂರ್ತಿಗೊಂಡ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರಿನ ದೇಶಭಕ್ತರು 1942 ರ ಸೆಪ್ಟಂಬರ್ 27 ರಂದು  ನಗರದ ದೇವಾಲಯವೊಂದರ ಮೇಲೆ ತ್ರಿವರ್ಣಧ್ವಜ ಹಾರಿಸಿ ಸ್ವತಂತ್ರ್ಯ ಘೋಷಿಸಿಕೊಂಡರು.
ಐತಿಹಾಸಿಕ ವೀರಭದ್ರೇಶ್ವರ ದೇವಾಲಯದ ಮೇಲೆ ರಾಷ್ಟ್ರಧ್ವಜ ಹಾರಿಸಿ ದೇಶದ ಭೂಪಟದಲ್ಲಿ ಈಸೂರು ಎಂಬ ಪುಟ್ಟ ಗ್ರಾಮದ ಹೆಸರು ಜನಜನಿತವಾಗುವಂತೆ ಮಾಡಿದರು. 
ಉಸಿರು ಕೊಟ್ಟರು ಈಸೂರು ಕೊಡೆವು ಎಂಬ ಘೋಷಣೆಯೊಂದಿಗೆ ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದರು. ಇದು ಪರಂಗಿ ಜನರಿಗೆ ಕಿರಿಕಿರಿ ಉಂಟು ಮಾಡಿತ್ತು. ಇದರಿಂದಾಗಿ ನೂರಾರು ಗ್ರಾಮಸ್ಥರು ಭೂಗತರಾದರು, ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದವು. ಹಲವರನ್ನು ಗಲ್ಲಿಗೇರಿಸಲಾಯಿತು. 
ಕೆಲವು ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ ಜೀವಾವಧಿ ಶಿಕ್ಷೆಗೊಳಪಡಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರಾದ ಕೆ.ಗುರುಪ್ಪ, ಮಲ್ಲಪ್ಪ, ಹಾಲಪ್ಪ ಮತ್ತು ಸೂರ್ಯ ನಾರಾಯಣ ಆಚಾರ್ ಅವರನ್ನು 1943 ರಲ್ಲಿ ಗಲ್ಲಿಗೇರಿಸಲಾಯಿತು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರ ನೆನಪಿಗಾಗಿ ನಿರ್ಮಿಸಿದ ಸ್ಮಾರಗಳನ್ನು ಇಂದಿಗೂ ಕಾಣಬಹುದು.
95 ವರ್ಷದ ಚಿಕ್ಕಮಗಳೂರಿನ ಗಂಗಯ್ಯ ಹೆಗ್ಡೆ  ಅಂದಿನ ಕ್ರಾಂತಿಯ ಭಾಗವಾಗಿದ್ದರು. ಆ ದಿನಗಳ ಹೋರಾಟದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಂದಿನ ದಿನಗಳಲ್ಲಿ  ವಿದ್ಯಾರ್ಥಿಗಳು ಹಾಗೂ ವಕೀಲರ ಸಂಘಗಳು ಬಲಶಾಲಿಯಾಗಿದ್ದವು. 1942 ರಲ್ಲಿ ಈಸೂರನ್ನು ಆಕ್ರಮಿಸಿಕೊಳ್ಳಲು ಬ್ರಿಟಿಷರು ಯತ್ನಿಸಿದರು, ಗ್ರಾಮದ ಸ್ಥಿತಿಗತಿಯನ್ನು ಅಧ್ಯಯನ ಮಾಡಲು ಬಂದ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಅಮಲ್ದಾರ್ ಮತ್ತು ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ಗ್ರಾಮಸ್ಥರು ಕಟ್ಟಿಹಾಕಿ ಕೊಂದರು. 
ಇದಾದ ನಂತರ ಬ್ರಿಟಿಷರು ಗ್ರಾಮದಲ್ಲಿ ಹಿಂಸಾಚಾರ ಆರಂಭಿಸಿದರು. ಅಂದು ನಡೆದ ಆ ಮಾರಣಾಂತಿಕ ಕೊಲೆಗಳು ಇಂದಿಗೂ ನನ್ನ ನೆನಪಿನಲ್ಲಿವೆ ಎಂದು ಗಂಗಯ್ಯ ಹೆಗಡೆ ಸ್ಮರಿಸಿದ್ದಾರೆ. 
ಕಡಿದಾಳ್ ಮಂಜಪ್ಪ ಮತ್ತು ಎಸ್ ವಿ ಕೃಷ್ಣಮೂರ್ತಿ  ಅವರ ಭಾಷಣಗಳಿಂದ ಪ್ರೇರಿತರಾದ ಮಲೆನಾಡು ಯುವಕರು ಚಳವಳಿಯ ಭಾಗವಾದೆವು ಎಂದು ಅವರು ತಿಳಿಸಿದ್ದಾರೆ.  ಪ್ರತಿ ವರ್ಷ ಸೆಪ್ಟಂಬರ್ 27 ರ ದಿನಾಂಕವನ್ನು ಈಸೂರು ಹುತಾತ್ಮರ ದಿನಾಚರಣೆಯಾಗಿ ಆಚರಿಸಬೇಕೆಂದು ಹೆಗಡೆ ಅವರ ಗೆಳೆಯ ಜಿ.ಎಚ್ ಹಾಲಪ್ಪಗೌಡ ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com