ಇಂದಿರಾ ಕ್ಯಾಂಟೀನ್ ಗೆ ಉತ್ತಮ ಪ್ರತಿಕ್ರಿಯೆ; ಆಹಾರ ಕೊರತೆ

ರಿಯಾಯಿತಿ ದರದಲ್ಲಿ ಆಹಾರ ನೀಡುವ ಇಂದಿರಾ ಕ್ಯಾಂಟೀನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವು ಪ್ರದೇಶಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡು ಬಂದಿದ್ದು, ಆಹಾರ ಕೊರತೆಯೂ ಎದುರಾದ ಘಟನೆಗಳು ವರದಿಯಾಗಿವೆ.
ಇಂದಿರಾ ಕ್ಯಾಂಟೀನ್
ಇಂದಿರಾ ಕ್ಯಾಂಟೀನ್
ಬೆಂಗಳೂರು: ರಿಯಾಯಿತಿ ದರದಲ್ಲಿ ಆಹಾರ ನೀಡುವ ಇಂದಿರಾ ಕ್ಯಾಂಟೀನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವು ಪ್ರದೇಶಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡು ಬಂದಿದ್ದು, ಆಹಾರ ಕೊರತೆಯೂ ಎದುರಾದ ಘಟನೆಗಳು ವರದಿಯಾಗಿವೆ. 
ಆ.17 ರಂದು ಬೆಳಿಗ್ಗೆ ಉದ್ಘಾಟನೆಯಾದ ಇಂದಿರಾ ಕ್ಯಾಂಟೀನ್ ಗಳಲ್ಲಿಯೂ ಇದೇ ಸಮಸ್ಯೆ ಎದುರಾಗಿದ್ದು, ಉದ್ಘಾಟನೆಯಾದ ಬಳಿಕ ಆಹಾರ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿದ್ದು, ಗ್ರಾಹಕರು ಕಾದುಕುಳಿತಿದ್ದರು. ಹಲವೆಡೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ಆಹಾರ ಕೊರತೆ ಎದುರಾಗಿದ್ದು, ನಿರ್ವಾಹಕರು ಸಕಾಲಕ್ಕೆ ಊಟವನ್ನು ಜನರಿಗೆ ತಲುಪಿಸಬೇಕು ಎಂದು ಗ್ರಾಹಕರು ಮನವಿ ಮಾಡಿದ್ದಾರೆ. 
ಕೆಆರ್ ಪುರಂ ನಲ್ಲಿಯೂ ಇದೇ ರೀತಿಯ ಘಟನೆ ನಡೆದಿದ್ದು, ಮೇಡಳ್ಳಿಯಲ್ಲಿ ಇಂದು ಬೆಳಿಗ್ಗೆ ಉದ್ಘಾಟನೆಯಾದ ಇಂದಿರಾ ಕ್ಯಾಂಟೀನ್ ನಲ್ಲಿ ಮಧ್ಯಾಹ್ನ 2:೦೦ ಗಂಟೆಯದರೂ ಆಹಾರ ಸಿಗದೇ ಕಾದು ಕುಳಿತಿದ್ದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com