ಡಾ ಫರ್ನಾಂಡಿಸ್ ತನ್ನ ತರುಣದಲ್ಲಿಯೇ ಹಲವಾರು ಸಾಧನೆ ಮಾಡಿದ್ದಾರೆ. ಅವರು ಸಿಎಚ್ ಡಿ ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು, ಟಾಸ್ಕ್ ಫೋರ್ಸ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂ ಎ) ಸದಸ್ಯರಾಗಿದ್ದಾರೆ. ಅವರು ಸೆಮಿನಾರ್ ಗಳನ್ನು ನಡೆಸುವಲ್ಲಿ ತೊಡಗಿಸಿಕೊಂಡಿದ್ದಾರೆ, ದುರಂತ ನಿರ್ವಹಣೆ ಮತ್ತು ಜಾಗತಿಕ ಆರೋಗ್ಯದ ಸಾಮರ್ಥ್ಯ ನಿರ್ಮಾಣ ತರಬೇತಿಗಳನ್ನು ನಡೆಸುತ್ತಾರೆ. ಮಂಗಳೂರಿನಲ್ಲಿ ವಾಹನಗಳಲ್ಲಿ ಸೀಟ್ ಬೆಲ್ಟ್ ಕಡ್ಡಾಯ ಮಾಡುವ ನಿರ್ಧಾರದ ಹಿಂದೆ ಇವರ ಸಿಎಚ್ ಡಿ ಕೆಲಸ ಮಾಡಿತ್ತು.