ಕರ್ನಾಟಕ: 2,500ಕ್ಕೂ ಹೆಚ್ಚು ಶಾಲೆಗಳಿಗೆ ಪೂರೈಕೆಯಾಗದ ಸರ್ಕಾರದ ಉಚಿತ ಶೂ, ಸಾಕ್ಸ್

ಈ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆಯಿತು. ಆದರೆ ಕೆಲವು ಸರ್ಕಾರಿ ಶಾಲೆಗಳಲ್ಲಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಈ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆಯಿತು. ಆದರೆ ಕೆಲವು ಸರ್ಕಾರಿ ಶಾಲೆಗಳಲ್ಲಿ ಇನ್ನೂ ಕೂಡ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಸರ್ಕಾರದ ವತಿಯಿಂದ ಸಿಕ್ಕಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಸುಮಾರು 48,000 ಸರ್ಕಾರಿ ಶಾಲೆಗಳಲ್ಲಿ 2,500ಕ್ಕೂ ಹೆಚ್ಚು ಶಾಲೆಗಳ ಮಕ್ಕಳಿಗೆ ಸರ್ಕಾರದ ಉಚಿತ ಶೂ ಮತ್ತು ಸಾಕ್ಸ್ ಸಿಗಬೇಕಿದೆ.
ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕೇವಲ ಶೇಕಡಾ 72.78 ಮತ್ತು ಶೇಕಡಾ 78.69 ಶಾಲೆಗಳಿಗೆ ಮಾತ್ರ ಶೂ ಮತ್ತು ಸಾಕ್ಸ್ ಪೂರೈಕೆಯಾಗಿವೆ. ಕಳೆದ ವರ್ಷ ಕೂಡ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿದ್ದರಿಂದ ಪೂರೈಕೆ ವಿಳಂಬವಾಗಿತ್ತು. ಈ ವರ್ಷ ಶಾಲೆಗಳು ಆರಂಭವಾಗುವ ಮುನ್ನವೇ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಿಸಿದರೂ ಕೂಡ ಕೆಲವು ಕಡೆ ವಿಳಂಬವಾಗಿದೆ. 
ಆರಂಭದಲ್ಲಿ ಈ ವಿತರಣೆ ಜವಾಬ್ದಾರಿಯನ್ನು ಯಾರಿಗೆ ನೀಡಬೇಕೆಂದು ಗೊಂದಲವುಂಟಾಗಿತ್ತು. ಕೊನೆಗೆ ಶಾಲೆಯ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಗೆ(ಎಸ್ ಡಿಎಸ್ ಸಿ) ನೀಡಲು ನಿರ್ಧರಿಸಲಾಯಿತು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಈ ಶೈಕ್ಷಣಿಕ ವರ್ಷದಲ್ಲಿ ಶೂ ಮತ್ತು ಸಾಕ್ಸ್ ವಿತರಣೆಗೆ ಸರ್ಕಾರ 128 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ದಾಖಲೆ ಹೇಳುತ್ತದೆ. ಹಾಗಾದರೆ ವಿಳಂಬ ಏಕೆ ಎಂದು ಕೇಳಿದರೆ, ಹಣ ಇನ್ನೂ ನಮಗೆ ಸಿಗಬೇಕಿದೆ. ಹೀಗಾಗಿ ವಿಳಂಬವಾಗಿದೆ ಎಂದು ಎಸ್ ಡಿಎಂಸಿ ಅಧಿಕಾರಿಗಳು ಹೇಳುತ್ತಾರೆ. ನಾವು ಟೆಂಡರ್ ಕರೆಯಬೇಕಾಗಿದೆ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com