ಬೆಂಗಳೂರು: ಕೊಳಗೇರಿಗಳಲ್ಲಿ ವಾಸಿಸುವ ಮಹಿಳೆಯರಿಗೆ ಕಿರುಕುಳದ ಕಾಟ

ತುಬರಹಳ್ಳಿ ಮುಖ್ಯ ರಸ್ತೆಯಲ್ಲಿ ವಾಸಿಸುವ ಕೊಳಚೆ ನಿವಾಸಿಗಳಿಗೆ ತಮ್ಮ ಬದುಕು ನಿಜಕ್ಕೂ ನಿತ್ಯ ಯಾತನೆ...
ತುಬರಹಳ್ಳಿ ಕೊಳಗೇರಿಯ ನಿವಾಸಿಗಳು
ತುಬರಹಳ್ಳಿ ಕೊಳಗೇರಿಯ ನಿವಾಸಿಗಳು
ಬೆಂಗಳೂರು: ತುಬರಹಳ್ಳಿ ಮುಖ್ಯ ರಸ್ತೆಯಲ್ಲಿ ವಾಸಿಸುವ ಕೊಳಚೆ ನಿವಾಸಿಗಳಿಗೆ ತಮ್ಮ ಬದುಕು ನಿಜಕ್ಕೂ ನಿತ್ಯ ಯಾತನೆ. ದಾರಿಯ ಎರಡೂ ಬದಿಯ ಹಾದಿಯಲ್ಲಿ ಎತ್ತರತ್ತೆ ನಿಂತಿರುವ ಅಪಾರ್ಟ್ ಮೆಂಟ್ ಗಳು ಈ ಕೊಳಚೆ ನಿವಾಸಿಗಳ  ಗುಡಿಸಲುಗಳನ್ನು ಮರೆಮಾಚುತ್ತವೆ. ಇಲ್ಲಿ ಬಶೀರ್ ಎಂಬಾತ ವಿದ್ಯುತ್ ತಗುಲಿ ಕೊಲ್ಲಲ್ಪಟ್ಟನು. ಆತನ ಇಬ್ಬರು ಸ್ನೇಹಿತರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಮೊನ್ನೆ ಗುರುವಾರ 20ರ ಆಸುಪಾಸಿನ ಇಬ್ಬರು ಮಹಿಳೆಯರಿಗೆ ಬೈಕಿನಲ್ಲಿ ಬಂದ ಇಬ್ಬರು ಪುರುಷರು ಕಿರುಕುಳ ನೀಡಿದ್ದಾರೆ.ಮಹಿಳೆಯರಿಗೆ ಕಿರುಕುಳ ನೀಡಲು ಯತ್ನಿಸಿದ ಬಗ್ಗೆ ಆರ್.ಖಲೀಮುಲ್ಲಾ ಎಂಬ ಕಾರ್ಯಕರ್ತರಿಗೆ ದೂರವಾಣಿ ಕರೆ ಬಂತು. ಇಬ್ಬರು ಪುರುಷರಲ್ಲಿ ಒಬ್ಬ ಮಹಿಳೆಯನ್ನು ಅಪಹರಿಸಲು ಯತ್ನಿಸಿದರೆ ಮತ್ತೊಬ್ಬ ಮಹಿಳೆ ಕಾರ್ಯಕರ್ತರಿಗೆ ಫೋನ್ ಮಾಡಿ ತಿಳಿಸಿದಳು.
ಕಾರ್ಯಕರ್ತರು ಬರುವುದು ಗೊತ್ತಾಗಿ ಇಬ್ಬರು ಕೂಡ ಅಲ್ಲಿಂದ ತಪ್ಪಿಸಿಕೊಂಡರು.
ಇಬ್ಬರು ಪುರುಷರ ಮುಖ ಮುಚ್ಚಲಾಗಿದ್ದು ಅವರನ್ನು ಗುರುತಿಸಿರಲಿಲ್ಲ. ಇಂತಹ ಘಟನೆಗಳು ಕೊಳಗೇರಿಗಳಲ್ಲಿ ನಡೆಯುವುದು ಸಾಮಾನ್ಯ. ಪ್ರತಿ ಗುಡಿಸಲಿಗೆ ಸುಮಾರು 500 ರೂಪಾಯಿ ಬಾಡಿಗೆ ನೀಡಿ ಖಾಲಿ ಭೂಮಿಯಲ್ಲಿರುವ ಗುಡಿಸಲುಗಳಲ್ಲಿ ವಾಸಿಸುತ್ತಿರುತ್ತಾರೆ. ಆ ಭೂಮಿಯ ಮಾಲಿಕರು ಮತ್ತು ಅವರ ಸ್ನೇಹಿತರು ಬಂದು ಕಿರುಕುಳ ಕೊಡುತ್ತಿರುತ್ತಾರೆ. ಕೆಲವೊಮ್ಮೆ ಹೊಡೆದು ಮಹಿಳೆಯರ ಕೈಯಿಂದ ಹಣ ಕೀಳುತ್ತಾರೆ ಎಂದು ಖಲೀಮುಲ್ಲಾ ತಿಳಿಸುತ್ತಾರೆ. 
ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಪತ್ರಿಕೆ ಪ್ರತಿನಿಧಿಗೆ ಮಾಹಿತಿ ನೀಡಿ, ಪುರುಷರು ಬೆಳಗ್ಗೆ ಕೆಲಸಕ್ಕೆ ಹೋದ ನಂತರ ಮಹಿಳೆಯರಿಗೆ ಈ ರೀತಿ ಬಂದು ಕಿರುಕುಳ ನೀಡುತ್ತಾರೆ. ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದರಿಂದ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎನ್ನುತ್ತಾರೆ. ಈ ಮಹಿಳೆಯರು ಪಶ್ಚಿಮ ಬಂಗಾಳದ ನಡಿಯಾ ಮತ್ತು ಧನಂಜಯ್ ಪುರ್ ಜಿಲ್ಲೆಯವರಾಗಿದ್ದು, ಸ್ಥಳೀಯರು ಒತ್ತಾಯ ಮಾಡಿದ ಮೇಲೆ ಮಾಧ್ಯಮದ ಮುಂದೆ ತಮ್ಮ ಸಂಕಷ್ಟವನ್ನು ತೋಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com