ನಾನು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಹುಟ್ಟಿದ್ದೇನೆ: ಸಿದ್ದರಾಮಯ್ಯ

"ನಾನು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಹುಟ್ಟಿದ್ದೇನೆ. ಇದೇ ಜಾತಿಯಲ್ಲಿ ಹುಟ್ಟಬೇಕೆಂದು ಯಾರೂ ಅರ್ಜಿ ಹಾಕಿಕೊಳ್ಳಲ್ಲ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: "ನಾನು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಹುಟ್ಟಿದ್ದೇನೆ. ಇದೇ ಜಾತಿಯಲ್ಲಿ ಹುಟ್ಟಬೇಕೆಂದು ಯಾರೂ ಅರ್ಜಿ ಹಾಕಿಕೊಳ್ಳಲ್ಲ. ಅವಕಾಶ ವಂಚಿತರಿಗೆ ಅವಕಾಶ ಒದಗಿಸಬೇಕು. ಎಲ್ಲಾ ಧರ್ಮ , ಜಾತಿಯವರಿಗೂ ನಾನು ಮುಖ್ಯಮಂತ್ರಿ." ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 
ಅರಮನೆ ಮೈದಾನದಲ್ಲಿ ನಡೆದ ಕುರುಬರ ಸಂಘದ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ "ನನ್ನನ್ನು ಕೆಲವರು ಅಹಿಂದ ವರ್ಗಕ್ಕೆ ಮಾತ್ರ ಸಿಎಂ ಎಂದು ವ್ಯಂಗ್ಯ ಮಾಡುತ್ತಾರೆ. ಆದರೆ ನಾನು ಎಲ್ಲಾ ವರ್ಗದ ಪರವಾಗಿ ಕೆಲಸ ಮಾಡಿದ್ದೇನೆ. ನನಗೆ ಅಹಿಂದ ನಾಯಕ ಎನ್ನಿಸಿಕೊಳ್ಳುವುದಕ್ಕೆ ಮುಜುಗರವಿಲ್ಲ. ಹಿಂದುಳಿದ ಮತ್ತು ಶೋಷಿತ ವರ್ಗದ ಪರವಾಗಿ ನಾನು ಕೆಲಸ ಮಾಡುತ್ತಿದ್ದೇನೆ' ಎಂದರು. 
ರಾಯಣ್ನ ಬ್ರಿಗೇಡ್ ಬಗೆಗೆ ವ್ಯಂಗ್ಯವಾಡಿದ ಮುಖ್ಯಮಂತ್ರಿ "ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಂಚಾಲಕ, ವೆಂಕಟೇಶ ಮೂರ್ತಿ ಇಲ್ಲೆ ಇದ್ದಾನೆ. ಬ್ರಿಗೇಡ್ ಹೆಸರಲ್ಲಿ ಭಾರೀ ಕೆಲಸ ಮಾಡುವುದಾಗಿ ಹೊರಟರು. ಆದರೆ ಏನೂ ಆಗಲಿಲ್ಲ. ಸಂಗೊಳ್ಳಿ ರಾಯಣ್ನ ಹೆಸರಿನಲ್ಲಿ ನಾನು ಅನುದಾನ ನೀಡಿದ್ದೇನೆ" ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com