ಮೈಸೂರು: ಕೊನೆಗೂ ಬೋನಿಗೆ ಬಿತ್ತು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ

ಸಿದ್ದರಾಮನ ಹುಂಡಿ, ಹೊಸಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಶನಿವಾರ ರಾತ್ರಿ ಬೋನಿಗೆ ಬಿದ್ದಿದೆ. ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಮೈಸೂರು: ಸಿದ್ದರಾಮನ ಹುಂಡಿ, ಹೊಸಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಶನಿವಾರ ರಾತ್ರಿ ಬೋನಿಗೆ ಬಿದ್ದಿದೆ. 
ಮೈಸೂರು ತಾಲೂಕಿನ ಮೇಗಳಾಪುರ ಹೊಸಳ್ಳಿ ಬಳಿ ಚಿರತೆಯನ್ನು ಬೋನಿಗೆ ಬೀಳಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.ಕಳೆದ ಒಂದು ತಿಂಗಳಿಂದ ಚಿರತೆ ಮೇಗಳಾಪುರ ಗ್ರಾಮದ ಸುತ್ತಮುತ್ತ ನಾಯಿ, ಕುರಿ, ಮೇಕೆ ಸೇರಿದಂತೆ ವಿವಿಧ ಪ್ರಾಣಿಗಳನ್ನು ಕೊಂದು ಪರಾರಿಯಾಗುತ್ತಿತ್ತು. ಈ ದೂರಿನ ಅನ್ವಯ ಅರಣ್ಯಾಧಿಕಾರಿಗಳು ನಾಗರಾಜು ಎಂಬುವವರ ತೋಟದಲ್ಲಿ ಬೋನು ಇರಿಸಿದ್ದರು
ಬೋನಿನ ಒಳಗೆ ಕಟ್ಟಿ ಹಾಕಲಾಗಿದ್ದ ನಾಯಿಯನ್ನು ತಿನ್ನಲು ಬೋನಿನ ಸಮೀಪ ಬಂದು ಬೋನಿಗೆ ಸಿಲುಕಿತು. ತಕ್ಷಣ ಈ ವಿಷಯವನ್ನು ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ತಿಳಿಸಿದರು.ಕೂಡಲೇ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಚಿರತೆಯನ್ನು ಸೆರೆಯಿಂದ ಹೊರತೆಗೆದು ನಾಗರಹೊಳೆ ಅರಣ್ಯಧಾಮದಲ್ಲಿ ಬಿಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com