ಬೆಂಗಳೂರು: ಡಿವಿಜಿ ರಸ್ತೆಯ 100ಕ್ಕೂ ಅಧಿಕ ವಾಣಿಜ್ಯ ಕಟ್ಟಡಗಳನ್ನು ಮುಚ್ಚಲು ಪಾಲಿಕೆ ನೊಟೀಸ್

ಇಲ್ಲಿ ವಸತಿ ಕಟ್ಟಡಗಳೇ ಇಲ್ಲ, ಆದರೂ ಕೂಡ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಡಿವಿಜಿ...
ಡಿವಿಜಿ ರಸ್ತೆಯ ಒಂದು ನೋಟ
ಡಿವಿಜಿ ರಸ್ತೆಯ ಒಂದು ನೋಟ
ಬೆಂಗಳೂರು: ಇಲ್ಲಿ ವಸತಿ ಕಟ್ಟಡಗಳೇ ಇಲ್ಲ, ಆದರೂ ಕೂಡ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ  ಡಿವಿಜಿ ರಸ್ತೆಯನ್ನು ಗುರಿಯಾಗಿಟ್ಟುಕೊಂಡು  ವ್ಯಾಪಾರಿಗಳಿಗೆ ಅಂಗಡಿ ಮುಚ್ಚಲು ನೊಟೀಸ್ ನೀಡಿರುವುದೇಕೆ ಇದು  ಅಲ್ಲಿನ ವ್ಯಾಪಾರಿಗಳ ಪ್ರಶ್ನೆ ಹಾಗೂ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನ ಗಾಂಧಿ ಬಜಾರ್ ನ ಡಿವಿಜಿ ರಸ್ತೆಯಲ್ಲಿರುವ ಸುಮಾರು 100 ವಾಣಿಜ್ಯ ಅಂಗಡಿಗಳು, ಸಂಕೀರ್ಣಗಳನ್ನು ಮುಚ್ಚುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೊಟೀಸ್ ಜಾರಿ ಮಾಡಿದೆ. 30 ಅಡಿ ಅಗಲದ ರಸ್ತೆ ವಸತಿ ವಿಭಾಗದಡಿ ಬರುತ್ತದೆ ಎಂದು ಕಾರಣ ನೀಡಿ ನೊಟೀಸ್ ಜಾರಿ ಮಾಡಲಾಗಿದೆ.
2015ರ ಬಿಬಿಎಂಪಿಯ ಮಾಸ್ಟರ್ ಪ್ಲಾನ್ ಪ್ರಕಾರ, ಕನ್ನಡದ ಖ್ಯಾತ ಬರಹಗಾರ ಡಿ.ವಿ.ಗುಂಡಪ್ಪ ಅವರ ಹೆಸರಿನ ಡಿವಿಜಿ ರಸ್ತೆ ವಸತಿ ವಲಯವಾಗಿದೆ. ಅಲ್ಲದೆ ಭೂ ಬಳಕೆ ನಿಯಮ ಪ್ರಕಾರ, ರಸ್ತೆಯ ಅಗಲ 40 ಅಡಿಗಳಿಗಿಂತ ಕಡಿಮೆಯಾದರೆ ಪ್ರಮುಖ ವಸತಿ ಪ್ರದೇಶಗಳಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಡಿವಿಜಿ ರಸ್ತೆಯ ಅಗಲ 30 ಅಡಿಗಿಂತ ಕಡಿಮೆಯಿದೆ.
ಅದಾಗ್ಯೂ ಕಳೆದ ಹಲವು ದಶಕಗಳಿಂದ ರಸ್ತೆ ವಾಣಿಜ್ಯ ಚಟುವಟಿಕೆಯ ಪ್ರದೇಶವಾಗಿ ಮಾರ್ಪಟ್ಟಿದೆ. 2015ರ ಪರಿಷ್ಕೃತ ಮಾಸ್ಟರ್ ಪ್ಲಾನ್ ಪ್ರಕಾರ, ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸಿ ನಿಯಮ ಉಲ್ಲಂಘಿಸಲಾಗಿದೆ. ಹೀಗೆ ನಿಯಮ ಉಲ್ಲಂಘನೆಯಿಂದ ಸಂಚಾರ ದಟ್ಟಣೆ, ವಾಯುಮಾಲಿನ್ಯ, ಜನರ, ವಾಹನಗಳ ಸಂಚಾರಕ್ಕೆ ತೊಂದರೆಯುಂಟಾಗುತ್ತದೆ.  
ಈ ನಿಟ್ಟಿನಲ್ಲಿ ತೊಂದರೆಯನ್ನು ನಿವಾರಿಸಲು ವಸತಿ ಪ್ರದೇಶಗಳಲ್ಲಿ ಅಕ್ರಮ ವಾಣಿಜ್ಯ  ಚಟುವಟಿಕೆಗಳನ್ನು ನಡೆಸುವುದಕ್ಕೆ ಪಾಲಿಕೆ ತಡೆ ತರಲಿದೆ ಎಂದು  ಕಳೆದ ಡಿಸೆಂಬರ್ ನಲ್ಲಿ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಸಾರ್ವಜನಿಕ ನೊಟೀಸ್ ಜಾರಿ ಮಾಡಿದ್ದರು.
ಅಲ್ಲದೆ ತಮ್ಮ ವಾಣಿಜ್ಯ ಮಳಿಗೆಗಳನ್ನು ಮುಚ್ಚಲು ವ್ಯಾಪಾರಸ್ಥರಿಗೆ ಬಿಬಿಎಂಪಿ ಸಮಯಾವಕಾಶವನ್ನು ಕೂಡ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com