ತೀವ್ರ ವಿರೋಧದಿಂದಾಗಿ ಪ್ರತ್ಯೇಕ ನಾಡಧ್ವಜ ವಿಚಾರದಿಂದ ಹಿಂದೆ ಸರಿದ ಸರ್ಕಾರ?

ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಪ್ರಸ್ತಾವನೆಗೆ ಹಲವು ಸಂಘಟನೆಗಳು ಹಾಗೂ ತಜ್ಞರ ತೀವ್ರ ವಿರೋಧದಿಂದಾಗಿ ಸರ್ಕಾರ ಈ ವಿಷಯದಿಂದ ಹಿಂದೆ ಸರಿಯುವ
ಕರ್ನಾಟಕ ಧ್ವಜ
ಕರ್ನಾಟಕ ಧ್ವಜ
ಬೆಂಗಳೂರು: ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಪ್ರಸ್ತಾವನೆಗೆ ಹಲವು ಸಂಘಟನೆಗಳು ಹಾಗೂ ತಜ್ಞರ ತೀವ್ರ ವಿರೋಧದಿಂದಾಗಿ ಸರ್ಕಾರ ಈ ವಿಷಯದಿಂದ ಹಿಂದೆ ಸರಿಯುವ ಸಾಧ್ಯತೆಗಳು ಹೆಚ್ಚಿವೆ.
ಜೂನ್ 6 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ನಿರ್ದೇಶಕರು ರಾಜ್ಯದ ಹೊಸ ನಾಡಧ್ವಜ ವಿನ್ಯಾಸ ಮಾಡುವಂತೆ ಸಮಿತಿ ಸದಸ್ಯರಿಗೆ ಸೂಚಿಸಿತ್ತು, ಪ್ರತ್ಯೇಕ ನಾಡಧ್ವಜ ಹೊಂದುವ ಸಂಬಂಧ ಇಲಾಖೆಯ
ಪ್ರಧಾನ ನಿರ್ದೇಶಕರು 9 ಮಂದಿಯ ತಜ್ಞರ ಸಮಿತಿ ರಚಿಸಿದ್ದರು. 
ಸಮಿತಿ ರಚಿಸಿ ಮೂರು ತಿಂಗಳು ಕಳೆದಿದೆ, ಆದರೆ ಇದುವರೆಗೂ ಸಮಿತಿ ಸದ್ಯಸ್ಯರು ಒಮ್ಮೆದೂ ಭೇಟಿಯಾಗಿಲ್ಲ, ಇನ್ನೂ ಸಮಿತಿಯಲ್ಲಿ ತಮ್ಮ ಪಾತ್ರ ಏನು ಎಂಬುದರ ಬಗ್ಗೆ ಸದಸ್ಯರಿಗೆ ಇದುವರೆಗೂ ಅಧಿಕೃತ ಸ್ಪಷ್ಟೀಕರಣ ನೀಡಿಲ್ಲ ಎಂದು ಕಮ್ಮಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಹಾಗೂ ಸಮಿತಿ ಸದಸ್ಯ, ಎನ್ ವಿಶುಕುಮಾರ್ ಹೇಳಿದ್ದಾರೆ.
ನನಗೂ ಕೂಡ ಈ ಸಂಬಂಧ ಯಾವುದೇ ಅಧಿಕೃತ ಪತ್ರ ಬಂದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ್ ಹೇಳಿದ್ದಾರೆ.
ವಿವಿಧ ಪಕ್ಷಗಳ ನಾಯಕರು, ಬರಹಗಾರರು, ಕಾರ್ಯಕರ್ತರು ಮತ್ತು ತಜ್ಞರು ಪ್ರತ್ಯೇಕ ನಾಡಧ್ವಜ ಪ್ರಸ್ತಾವನೆಗೆ ವಿರೋಧ ವ್ಯಕ್ತ ಪಡಿಸಿದ್ದರು. ಒಂದೇ ರಾಷ್ಟ್ರ ಒಂದೇ ಧ್ವಜ ತತ್ವದಲ್ಲಿ ನಂಬಿಕೆ ಇಟ್ಟಿರುವುದಾಗಿ ಹೇಳಿದ್ದರು, ಇನ್ನೂ ಅಧಿಕಾರಿಗಳಿಗೆ ಈ ವಿಷಯವನ್ನು ಹೇಗೆ ಮುಂದುವರಿಸಿಕೊಂಡು ಹೋಗಬೇಕು ಎಂಬುದು ತಿಳಿದಿಲ್ಲ, ರಾಜ್ಯ ಸರ್ಕಾರ ಈ ಬಗ್ಗೆ ಮೊದಲಿನಷ್ಠು ಆಸಕ್ತಿ ತೋರುತ್ತಿಲ್ಲ, ಹೀಗಾಗಿ ಈ ಯೋಜನೆ ಕೈ ಬಿಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ, ಚಕ್ರವರ್ತಿ, ಇದುವರೆಗೂ ಯಾವುದೇ ಸಭೆ ನಡೆದಿಲ್ಲ, ಒಂದೊಮ್ಮೆ ಸಭೆ ನಡೆದರೇ ಮಾಧ್ಯಮಗಳಿಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಇನ್ನೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಅಥವಾ ಸಂವಹನ ನಡೆದಿಲ್ಲ,  ಬಹುಶಃ ಸರ್ಕಾರ ಈ ವಿಚಾರವನ್ನ ಕೈ ಬಿಟ್ಟಿರಬಹುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಸಭೆ ಕರೆದು ನಾವು ಏನು ಅನುಷ್ಠಾನಗೊಳಿಸಬೇಕು ಎಂಬುದರ ಬಗ್ಗೆ ನವೆಂಬರ್ 1ರ ರಾಜ್ಯೋತ್ಸವ ದೊಳಗೆ ತಿಳಿಸುವುದಾಗಿ ಅವರು ಹೇಳಿದ್ದಾರೆ.
ಪ್ರತ್ಯೇಕ ನಾಡಧ್ವಜ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ, ಭಾರತ ಒಂದೇ, ಧ್ವಜವೂ ಒಂದೇ, ಹೀಗಾಗಿ ಸಿದ್ದರಾಮಯ್ಯ ತಮ್ಮ ನಿರ್ಧಾರ ವಾಪಸ್ ತೆಗೆದುಕೊಳ್ಳಬೇಕೆಂದು ಅವರು ಸೂಚಿಸಿದ್ದಾರೆಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com