ಜೋಡಿ ಕೊಲೆ ಪ್ರಕರಣದಲ್ಲಿ ಸೈಕೋ ಜೈಶಂಕರ್ ಖುಲಾಸೆ

ಕುಖ್ಯಾತ ರೌಡಿ ಸೈಕೋ ಜೈಶಂಕರ್ ಜೋಡಿ ಕೊಲೆ ಪ್ರಕರಣದಲ್ಲಿ ಖುಲಾಸೆ ಆಗಿದ್ದಾನೆ.
ಸೈಕೋ ಜೈಶಂಕರ್
ಸೈಕೋ ಜೈಶಂಕರ್
ಬೆಂಗಳುರು: ಕುಖ್ಯಾತ ರೌಡಿ  ಸೈಕೋ ಜೈಶಂಕರ್ ಜೋಡಿ ಕೊಲೆ ಪ್ರಕರಣದಲ್ಲಿ ಖುಲಾಸೆ ಆಗಿದ್ದಾನೆ. 
ಬೆಂಗಳೂರು ಗ್ರಾಮಾಂತರ  ಪ್ರಧಾನ ಸೆಷನ್ಸ್ ಕೋರ್ಟ್ ಜೈಶಂಕರ್ ನನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದೆ.
2011 ಏಪ್ರಿಲ್ 27 ರಂದು ಚಿತ್ರದುರ್ಗದ ಎಂ.ಕೆ. ಹಟ್ಟಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಸಾಕ್ಷಾಧಾರ ಕೊರತೆಯಿಂದಾಗಿ ಜೈಶಂಕರ್ ಖುಲಾಸೆಯಾಗಿದ್ದಾನೆ.
ಚಂದ್ರಮ್ಮ ಹನುಮಂತಪ್ಪ ದಂಪತಿ ಕೊಲೆ ಆರೋಪದಲ್ಲಿ ಸಾಕ್ಷಾಧಾರ ಲಭ್ಯವಾಗದೆ ಖುಲಾಸೆ  2011 ಏಪ್ರಿಲ್ 27 ರಂದು ಚಿತ್ರದುರ್ಗದ ಎಂ.ಕೆ. ಹಟ್ಟಿಯಲ್ಲಿ ಜೋಡಿ ಕೊಲೆ ಸಂಬವಿಸಿತ್ತು. 
ಚಂದ್ರಮ್ಮ ಹನುಮಂತಪ್ಪ ದಂಪತಿ ಕೊಲೆ ಆರೋಪ ಜೈಶಂಕರ್ ಮೇಲೆ ಇತ್ತು. ಚಂದ್ರಮ್ಮನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿಯೂ, ಬಳಿಕ ಸ್ಥಳಕ್ಕೆ ಆಗಮಿಸಿದ್ದ ಪತಿ ಹನುಮಂತಪ್ಪನನ್ನು ಕೊಂದ ಆರೋಪವಿತ್ತು. 
ಜೈಶಂಕರ್ ಇನ್ನೂ ಸಾಕಷ್ಟು  ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದು  ಅವನಿನ್ನೂ ಕಾರಾಗೃಹದಲ್ಲಿದ್ದಾನೆ.
ಸೈಕೋ ಜೈಶಂಕರ್ ಹಿನ್ನೆಲೆ: ತಮಿಳು ನಾಡಿನ ಸೇಲಂ ನವನಾದ ಎಂ. ಜೈಶಂಕರ್. ಅಲಿಯಾಸ್ ಸೈಕೋ ಶಂಕ್ರ. 19ಕ್ಕೂ ಹೆಚ್ಚು ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. 4 ಬಾರಿ (2009, 2011, 2013, 2015) ಜೈಲಿನಿಂದ ಪರಾರಿ ಆಗಿರುವ್ದು ಇವನ ಕುಖ್ಯಾತಿಗಳಲ್ಲಿ ಒಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com