ಡೈರಿ ಸರ್ಕಲ್ ರಸ್ತೆ; ಪಾದಾಚಾರಿಗಳಿಗೆ ದುಃಸ್ವಪ್ನ!

ಇದು ಡೈರಿ ವೃತ್ತದ ಸುತ್ತಲಿನ ರಸ್ತೆಯ ವಾಸ್ತು! ಇಲ್ಲಿ ನ್ನೀವು ನಡೆದಾಡುವ ವೇಳೆ ಪ್ರತಿ ಹೆಜ್ಜೆ ಗೊಮ್ಮೆ ದಾರಿ ನೋಡಿಕೊಳ್ಳಬೇಕು. ಫುಟ್ ಪಾತ್ ಎಲ್ಲಿದೆ ಎನ್ನುವುದೇ ತಿಳಿಯುವುದಿಲ್ಲ.
ಡೈರಿ ಸರ್ಕಲ್
ಡೈರಿ ಸರ್ಕಲ್
ಬೆಂಗಳುರು: ಇದು ಡೈರಿ ವೃತ್ತದ ಸುತ್ತಲಿನ ರಸ್ತೆಯ ವಾಸ್ತು! ಇಲ್ಲಿ ನ್ನೀವು ನಡೆದಾಡುವ ವೇಳೆ ಪ್ರತಿ ಹೆಜ್ಜೆ ಗೊಮ್ಮೆ ದಾರಿ ನೋಡಿಕೊಳ್ಳಬೇಕು. ಫುಟ್ ಪಾತ್ ಎಲ್ಲಿದೆ ಎನ್ನುವುದೇ ತಿಳಿಯುವುದಿಲ್ಲ. ಕಲ್ಲುಗಳ ನಡುವೆ ದೊಡ್ಡ ಹೊಂಡಗಳಿದ್ದು ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಯಲ್ಲಿಯೇ ನಡೆಯಬೇಕಾಗಿದೆ. ಇನ್ನು ಅತಿ ಹೆಚ್ಚಿನ ವಾಹನ ದಟ್ಟಣೆ ಇರುವ ಈ ಸ್ಥಳ ಯಾರೊಬ್ಬರ ಜೀವವನ್ನು ಅಪಾಯಕ್ಕೆ ಒಡ್ಡಬಹುದಾಗಿದೆ.
ಹೊಸೂರುಗೆ ಸಂಪರ್ಕಿಸುವ ಮುಖ್ಯ ರಸ್ತೆಯ ಉದ್ದಕ್ಕೂ, ರಸ್ತೆ ಮಟ್ಟದಲ್ಲಿಯೇ ಇರುವ ಪಾದಚಾರಿ ಮಾರ್ಗವು ಅಪಾಯಕ್ಕೆ ಆಹ್ವಾನಿಸುತ್ತದೆ. ಪಾದಚಾರಿ ಮಾರ್ಗದ ಕಲ್ಲು ಹಾಸುಗಳು ಬಾಯ್ತೆರೆದುಕೊಂಡಿದ್ದು ನೀವು ಒಂದು ಸೆಕೆಂಡ್ ಸಹ ದೃಷ್ಟಿಯನ್ನು ಅತ್ತಿತ್ತ ಹೊರಳಿಸಿದರೆ ಸಾಕು, ನಿಮ್ಮನ್ನು ನೇರವಾಗಿ ಒಳಗಿನ ಡ್ರೈನೇಜ್ ಗುಂಡಿಗೆ ಎಳೆದೊಯ್ಯುತ್ತವೆ. ಕಳಪೆ ನಿರ್ವಹಣೆಯ ಕಾಲುದಾರಿಗಳು ನಗರದಾದ್ಯಂತ ಹಲವಾರು ದುರ್ಘಟನೆಗಳಿಗೆ ಕಾರಣವಾಗಿರುವುದನ್ನು ನಾವು ನೋಡಿದ್ದೇವೆ. ಇತ್ತೀಚೆಗೆ 25 ವರ್ಷದ ವ್ಯಕ್ತಿ ಶೇಶಾದ್ರಿಪುರದ ಬಳಿ ಗುಂಡಿಗೆ ಬಿದ್ದಿರುವ ಘಟನೆ ನಮ್ಮ ಕಣ್ಣ ಮುಂದಿದೆ.
"ಮೊದಲನೆಯದಾಗಿ, ಪಾದಚಾರಿಗಳ ಸಂಖ್ಯೆಯು ಹೆಚ್ಚಾಗಿದೆ. ಆದರೆ ಪಾದಚಾರಿ ಮಾರ್ಗ ಕಿರಿದಾಗಿದೆ. ರಸ್ತೆಯು ಕಳಪೆ ಸ್ಥಿತಿಯಲ್ಲಿದೆ ಮತ್ತು ಗುಂಡಿಗಳಿಂದಲೇ ತುಂಬಿದೆ. " ಪ್ರತಿ ನಿತ್ಯ ಅದೇ ರಸ್ತೆಯನ್ನು ಬಳಸುವ ಜಯನಗರ ನಿವಾಸಿಯಾದ ಪದ್ಮಾಕ್ಷ ರಮೇಶ್ ಹೇಳಿದರು. 
ರೋಶ್ ಕೆ ಜಾಯ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳುವಂತೆ, "ಕ್ರೈಸ್ಟ್, ಕಾಲೇಜು ಸ್ಲಾಬ್ ಗಳನ್ನು ಸರಿಪಡಿಸಲು ಕೋರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮನವಿಯನ್ನು ಸಲ್ಲಿಸಿದೆ ನಾವು ಮನವಿ ಸಲ್ಲಿಸಿದ ನಂತರ, ಕಾಲೇಜು ಕ್ಯಾಂಪಸ್ ಮುಂಭಾಗದ ಸ್ಲಾಬ್ ಗಳನ್ನು ಬದಲಾಯಿಸಲಾಯಿತು" 
"ಟೆಲಿಕಾಂ ಇಲಾಖೆಯವರು ಆಪ್ಟಿಕಲ್ ಫೈಬರ್ ಕೇಬಲ್ ಗಳನ್ನು ಹಾಕಲು ಚಪ್ಪಡಿಗಳನ್ನು ತೆಗೆದಿದ್ದರು ಅವುಗಳನ್ನು ಹಾಕಿದ ಬಳಿಕ ಪುನಃ ಅದೇ ಚಪ್ಪಡಿಗಳನ್ನು ಹಾಕಿದ್ದಾರೆ. ಅವುಗಳನ್ನು ಬದಲಿಸಲಿಲ್ಲ.  ಇದು ಜನರ ಜೀವಕ್ಕೆ ಅಪಾಯ ತರುತ್ತದೆ ನಮಗೆ ಈ ರಸ್ತೆಯ ಮೇಲೆ ನಡೆಯಲೇ ಆಗುತ್ತಿಲ್ಲ" ಹೆಸರು ಹೇಳಲಿಚ್ಚಿಸದ ಓರ್ವ ನಾಗರಿಕರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com