ರಾಣಿ ಚೆನ್ನಮ್ಮ, ಒನಕೆ ಓಬವ್ವ ವಿರುದ್ಧ ಹೇಳಿಕೆ: ಕನ್ನಡ ವೆಬ್‏ಸೈಟ್ ವಿರುದ್ಧ ಎಫ್ಐಆರ್ ದಾಖಲು

ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಲಾಗಿದೆ ಎಂದು ವೆಬ್ ಸೈಟ್ ವೊಂದರ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಲಾಗಿದೆ ಎಂದು ವೆಬ್ ಸೈಟ್ ವೊಂದರ ವಿರುದ್ಧ ದೂರು ದಾಖಲಿಸಿದ್ದು ಟ್ವಿಟ್ಟರ್ ನಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಪೋಸ್ಟ್ ಕಾರ್ಡ್ ಕನ್ನಡ.ಕಾಂ ಎಂಬ ವೆಬ್ ಸೈಟ್ ನಲ್ಲಿ ಇತಿಹಾಸಕಾರರಾದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಒನಕೆ ಓಬವ್ವ ಅವರ ವಿರುದ್ಧ ಅವಹೇಳನಕಾರಿಯಾಗಿ ಬರೆಯಲಾಗಿದೆ ಎಂದು ಕನವ ಬಸವಕುಮಾರ್ ಎಂಬುವವರು ದೂರು ನೀಡಿದ್ದರು. ಈ ವಿಷಯ ಟ್ವಿಟ್ಟರ್ ನಲ್ಲಿ ಚರ್ಚಾ ವಿಷಯವಾಗಿತ್ತು.
ಬಸವಕುಮಾರ್ ತಮ್ಮ ದೂರಿನಲ್ಲಿ, ವೆಬ್ ಸೈಟ್ ನ ಅನಾಮಧೇಯ ಅಡ್ಮಿನಿಸ್ಟ್ರೇಟರ್, ಕಿತ್ತೂರು ರಾಣಿ ಚೆನ್ನಮ್ಮ ಅವರಿಗೆ ಬ್ರಿಟಿಷರ ಜೊತೆ ಅಕ್ರಮ ಸಂಬಂಧವಿತ್ತು ಮತ್ತು ಒನಕೆ ಓಬವ್ವ ಹೈದರ್ ಆಲಿಯ ಜೊತೆ ಹಾಸಿಗೆ ಹಂಚಿಕೊಂಡಿದ್ದರು. ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಈ ಇಬ್ಬರು ಮಹಿಳೆಯರ ಅನುಯಾಯಿಗಳು ಮತ್ತು ಈ ಸಮುದಾಯದ ನಾಯಕರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರು ಸಲ್ಲಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ.
ದೂರಿನ ಪ್ರಕಾರ, ವಿ ಸಪೋರ್ಟ್ ಪೋಸ್ಟ್ ಕಾರ್ಡ್ ಹ್ಯಾಶ್ ಟಾಗ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದೆ. ಅದಕ್ಕೆ 5,000ಕ್ಕೂ ಅಧಿಕ ಟ್ವೀಟ್ ಗಳು ಬಂದಿವೆ. ಹಲವರು ವೆಬ್ ಸೈಟ್ ಗೆ ಬೆಂಬಲ ಸೂಚಿಸಿದ್ದಾರೆ. ಐಪಿಸಿ ಸೆಕ್ಷನ್ 295 ಎಯಡಿ ದೂರು ದಾಖಲಿಸಲಾಗಿದೆ. ಇದೊಂದು ದುರುದ್ದೇಶಪೂರಿತ ಕ್ರಮವಾಗಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com