ಬೆಂಗಳೂರು: ನಗರದಲ್ಲಿ ಡಿಸೆಂಬರ್ 8ರಿಂದ ಪ್ರಾರಂಭಗೊಳ್ಳಲಿರುವ ಕರ್ನಾಟಕದ ಪ್ರಮುಖ ಮೀನುಗಾರಿಕೆ ಕಾರ್ಯಕ್ರಮ ಮತ್ಸ್ಯ ಮೇಳದಲ್ಲಿ 100ಕ್ಕೂ ಹೆಚ್ಚು ವಿಲಕ್ಷಣ ಮತ್ತು ಸ್ಥಳೀಯ ಮೀನುಗಳ ಪ್ರಭೇದಗಳು ಪ್ರದರ್ಶನಗೊಳ್ಳಲಿವೆ.
ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಮುಂದಿನ ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ಮತ್ಸ್ಯ ಮೇಳ ಪ್ರಾರಂಭಗೊಳ್ಳಲಿದೆ ಎಂದು ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ. ಮೀನುಗಾರಿಕೆ ಇಲಾಖೆಯ ಆರು ದಶಕಗಳ ಪೂರ್ವಾವಧಿಯನ್ನು ಈ ಮತ್ಸ್ಯ ಮೇಳ ಪೂರ್ಣಗೊಳಿಸುತ್ತದೆ. ಜತೆಗೆ ಸಾರ್ವಜನಿಕರು, ರೈತರು ಮತ್ತು ಮೀನುಗಾರರೊಂದಿಗೆ ಕೈಗಾರಿಕೆಗಳು ಮತ್ತು ಸಂಸ್ಥೆಗಳನ್ನು ಸಂಪರ್ಕಿಸುವ ಉದ್ದೇಶವನ್ನು ಈ ಮತ್ಸ್ಯ ಮೇಳ ಹೊಂದಿದೆ ಎಂದರು.
ಈ ಮತ್ಸ್ಯ ಮೇಳದಲ್ಲಿ ಅಲಂಕಾರಿಕ ಮೀನಿನ ಗ್ಯಾಲರಿ, ಅಲಂಕಾರಿಕ ಮೀನು ಸ್ಪರ್ಧೆಗಳು, ಸಿದ್ದ ಆಹಾರ, ಮೀನಿನ ಅಡುಗೆ ಸ್ಪರ್ಧೆಗಳು ಮತ್ತು ಮೀನುಗಳ ಮಾರಾಟವನ್ನು ಮಾಡಲಾಗುವುದು ಈ ಮೇಳಕ್ಕೆ ನಾಲ್ಕು ಲಕ್ಷ ಮಂದಿ ಭೇಟಿ ನೀಡುತ್ತಾರೆ ಎಂದು ಅಂದಾಜಿಸಲಾಗುತ್ತದೆ ಎಂದರು.