ಕಾರಿಗೆ ಬೆಂಕಿ ಹಚ್ಚಿರುವುದು
ರಾಜ್ಯ
ಕಾರವಾರ ಬಂದ್: ಕುಮಟಾದಲ್ಲಿ ಉದ್ವಿಗ್ನ ಪರಿಸ್ಥಿತಿ, ಐಜಿಪಿ ನಿಂಬಾಳ್ಕರ್ ಕಾರಿಗೆ ಬೆಂಕಿ
ಪರೇಶ್ ಮೇಸ್ತಾ ನಿಗೂಢ ಸಾವು ಖಂಡಿಸಿ ಬಿಜೆಪಿ ಸೋಮವಾರ ಕಾರವಾರ ಬಂದ್ ಕರೆ ನೀಡಿದ್ದು, ಕುಮಟ, ಭಟ್ಕಳ, ಮುಂಡಗೋಡ ಹಾಗೂ ಹೊನ್ನಾವರ...
ಕಾರವಾರ: ಪರೇಶ್ ಮೇಸ್ತಾ ನಿಗೂಢ ಸಾವು ಖಂಡಿಸಿ ಬಿಜೆಪಿ ಸೋಮವಾರ ಕಾರವಾರ ಬಂದ್ ಕರೆ ನೀಡಿದ್ದು, ಕುಮಟ, ಭಟ್ಕಳ, ಮುಂಡಗೋಡ ಹಾಗೂ ಹೊನ್ನಾವರ ಸೇರಿದಂತೆ ಜಿಲ್ಲೆಯ ಹಲವು ಕಡೆ ಬಸ್ ಸಂಚಾರ, ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಪ್ರತಿಭಟನಾ ಮೆರವಣಿಗೆ ನಡೆಯುತ್ತಿದೆ.
ಈ ಮಧ್ಯೆ, ಕುಮಟಾದಲ್ಲಿ ಬಿಜೆಪಿ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರ ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಘಟನೆಯಲ್ಲಿ ನಿಂಬಾಳ್ಕರ್ ವಾಹನದ ಚಾಲಕ ಗಾಯಗೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಕುಮಟಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಸಹ ನಡೆಸಿದೆ. ಅಲ್ಲದೆ ಕುಮಟಾ ಮಣಕಿ ಮೈದಾನದ ಬಳಿ ಗಲಾಟೆ ಜೋರಾಗಿದ್ದು, ಪೋಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಕೆಲ ಪೊಲೀಸರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

