ರಾಜ್ಯ ಸರ್ಕಾರದ 'ಅಭಿವೃದ್ಧಿ ಪರ್ವ' ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಚಾಲನೆ

ರಾಜ್ಯ ಸರ್ಕಾರದ ಒಂದು ತಿಂಗಳ ಅವಧಿಯ ಅಭಿವೃದ್ಧಿ ಪರ್ವ ನಿನ್ನೆ ಆರಂಭವಾಗಿದ್ದು....
ಬೀದರ್ ನಲ್ಲಿ ನಿನ್ನೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೀದರ್ ನಲ್ಲಿ ನಿನ್ನೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Updated on: 
ಬೀದರ್: ರಾಜ್ಯ ಸರ್ಕಾರದ ಒಂದು ತಿಂಗಳ ಅವಧಿಯ ಅಭಿವೃದ್ಧಿ ಪರ್ವ ನಿನ್ನೆ ಆರಂಭವಾಗಿದ್ದು, ಇದರ ಅಂಗವಾಗಿ ಬೀದರ್ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಸವ ಕಲ್ಯಾಣದಲ್ಲಿ ನಿನ್ನೆ ಚಾಲನೆ ನೀಡಿದರು.
ಕೂಡಲಸಂಗಮ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ, ಬಸವ ಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣ ಕುರಿತಂತೆ ಬರುವ ಆಯವ್ಯಯದಲ್ಲಿ ಹಣ ಮೀಸಲಿಡಲಾಗುವುದು ಎಂದು ಹೇಳಿದರು.
ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ್ ಮಾತನಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ರಾಜ್ಯಸರ್ಕಾರ ಹೆಚ್ಚು ಒತ್ತು ನೀಡಿದ್ದು, ನೀರಾವರಿ ಯೋಜನೆಗಳಿಗೆ ಹೆಚ್ಚು ಸಂಪನ್ಮೂಲ ನಿಗದಿಯಾಗಿದೆ, ಯೋಜನೆಗಳು ಪ್ರಗತಿಯಲ್ಲಿವೆ ಎಂದರು.
ಸಚಿವರಾದ ಈಶ್ವರ್ ಖಂಡ್ರೆ, ಎಂ. ಬಿ. ಪಾಟೀಲ್, ರೋಷನ್ ಬೇಗ್ , ಎಚ್. ಆಂಜನೇಯ ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com