ಬೆಂಗಳೂರು: ಅನಾಥ ಹೆಣ್ಣು ಶಿಶುವಿಗೆ ಹೊಸ ಜೀವನ ಕಲ್ಪಿಸಿ ಮಾನವೀಯತೆ ಮೆರೆದ ಪೋಲೀಸ್ ಅಧಿಕಾರಿ

ಅವಳು ಇನ್ನೂ ಒಂದು ದಿನದ ಕೂಸು, ಫುಟ್ ಪಾತ್ ಮೇಲೆ ಸಾವು, ಬದುಕಿನ ನಡುವೆ ಹೋರಾಟ ನಡೆಸಿದ್ದಳು. ಇದೀಗ ಪೋಲೀಸ್ ಅಧಿಕಾರಿಯೊಬ್ಬರ ಕೃಪೆಯಿಂದ ಅವಳ ಜೀವನಕ್ಕೊಂದು ನೆಲೆ ದೊರಕಿದೆ.
ಎಸ್. ಡಿ. ಶಶಿಧರ್
ಎಸ್. ಡಿ. ಶಶಿಧರ್
ಬೆಂಗಳುರು: ಅವಳು ಇನ್ನೂ ಒಂದು ದಿನದ ಕೂಸು, ಫುಟ್ ಪಾತ್ ಮೇಲೆ ಸಾವು, ಬದುಕಿನ ನಡುವೆ ಹೋರಾಟ ನಡೆಸಿದ್ದಳು. ಇದೀಗ ಪೋಲೀಸ್ ಅಧಿಕಾರಿಯೊಬ್ಬರ ಕೃಪೆಯಿಂದ ಅವಳ ಜೀವನಕ್ಕೊಂದು ನೆಲೆ ದೊರಕಿದೆ.
ಪ್ರಕರಣ ಹಿನ್ನೆಲೆ: ಆಗಸ್ಟ್ 28 ರಂದು, ಬೆಂಗಳೂರಿನ ಆರ್ಮುಗಂ ಸರ್ಕಲ್ ಬಳಿ ಒಂದು ದಿನದ ಅನಾಥ ಹೆಣ್ಣು ಶಿಶುವನ್ನು ಓರ್ವ ವ್ಯಕ್ತಿ ಕಂಡಿದ್ದು ಪೋಲೀಸರಿಗೆ ಮಾಹಿತಿ ನೀಡಿದ್ದರು.  ಪೋಲೀಸರು ಪರಿಶೀಲಿಸಲಾಗಿ ಮಗುವಿನ ಹುಕ್ಕಳ ಬಳ್ಳಿಯನ್ನು ಕ್ಲಿಪ್ ಹಾಕಿ ಅಂಟಿಸಲಾಗಿದ್ದು  ಮಗುವನ್ನು ಸರಿಯಾಗಿ ಶುಚಿಗೊಳಿಸಿರಲೂ ಇಲ್ಲ. ಈ ಸ್ಥಿತಿಯಲ್ಲಿ ಬಸವನಗುಡಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಸ್. ಡಿ. ಶಶಿಧರ್ ಅವರು ಆ ಹೆಣ್ಣುಮಗುವಿನ ಜವಾಬ್ದಾರಿ ವಹಿಸಿಕೊಂಡರು.
ಮೊದಲಿಗೆ ಅವರು ಆ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರು, ವೈದ್ಯರಿಗೆ ಚಿಕಿತ್ಸೆ ಪ್ರಾರಂಭಿಸುವಂತೆ ಹೇಳಿದರು. "ನನ್ನ ಬಳಿ ಆಗ ಇಪ್ಪತ್ತು ಸಾವಿರ ರೂ. ಇದ್ದು ಅದನ್ನು ಚಿಕಿತ್ಸೆಗಾಗಿ ಪಾವತಿಸಿದೆ." ಎನ್ನುವ ಪೋಲೀಸ್ ಅಧಿಕಾರಿ ಆಸ್ಪತ್ರೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿದ್ದಲ್ಲದೆ, ತಾವೂ ಆಗಾಗ ಭೇಟಿ ನೀಡುತ್ತಾ ಮಗುವಿನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು. ಹುಕ್ಕಳ ಬಳ್ಳಿಯನ್ನು ಕ್ಲಿಪ್ ನಲ್ಲಿ ಅಂಟಿಸಿದ ಕಾರಣ  ಕಾರಣ ಮಗುವಿಗೆ ತೀವ್ರವಾದ ಉಸಿರಾಟದ ತೊಂದರೆ ಹಾಗು ಸೋಂಕು ಉಂಟಾಗಿತ್ತು.
ಮಗುವಿನ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು, ಆನ್ ಲೈನ್ ಮೂಲಕ ನಾಗರಿಕರಿಗೆ ಮನವಿ ಮಾಡಲಾಯಿತು. ಅಂತಿಮವಾಗಿ ಮಗು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಅವಳನ್ನು ರಾಜ್ಯದ ಶಿಶು ನಿವಾಸಕ್ಕೆ ಕರೆತರಲಾಯಿತು. ಇದೀಗ ಮಗುವು ರಾಜ್ಯ ಸರ್ಕಾರದ ಶಿಶು ನಿವಾಸದಲ್ಲಿದೆ. "ನಾನು ಮಗುವನ್ನು ದತ್ತು ತೆಗೆದುಕೊಳ್ಳಲು ಇಷ್ಟಪಡುತ್ತೇನೆ, ಆದರೆ ನನಗೆ ಈಗಾಗಲೇ ಮಕ್ಕಳು ಇದ್ದಾರೆ,ಹೀಗಾಗಿ ನನಗೆ ಈ ಮಗುವನ್ನು ದತ್ತು ತೆಗೆದುಕೊಳ್ಳಲು ಆಗುವುದಿಲ್ಲ.  ಆದರೆ ದತ್ತು ಸ್ವೀಕಾರ ಮಾಡಲು ಬಯಸುವ ಜನರಿಂದ ನಾನು ಸುಮಾರು 70 ಕರೆಗಳನ್ನು ಸ್ವೀಕರಿಸಿದ್ದೇನೆ. " ಶಶಿಧರ್ ಹೇಳಿದ್ದಾರೆ. ಇನು ಕೆಲ ದಿನಗಳಲ್ಲಿಯೇ ಶಿಶುವು ಔಪಚಾರಿಕವಾಗಿ ದತ್ತು ಸ್ವೀಕರಿಸಲ್ಪಟ್ಟು ಪೋಷಕರ ಮಡಿಲು ಸೇರಲಿದೆ ಎಂದು ಅವರು ಭರವಸೆಯಿಂದ ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com