ಬೆಂಗಳೂರು: ಆಟವಾಡುತ್ತಿದ್ದ ಮಗು ಮೂರನೇ ಮಹಡಿಯಿಂದ ಬಿದ್ದು ಸಾವು
ಬೆಂಗಳೂರು: ಆಟವಾಡುತ್ತಿದ್ದ ಮಗು ಮೂರನೇ ಮಹಡಿಯಿಂದ ಬಿದ್ದು ಸಾವು

ಬೆಂಗಳೂರು: ಆಟವಾಡುತ್ತಿದ್ದ ಮಗು ಮೂರನೇ ಮಹಡಿಯಿಂದ ಬಿದ್ದು ಸಾವು

ಬೆಂಗಳೂರಿನ ನಾಯಂದಹಳ್ಳಿಯಲ್ಲಿರುವ ವಸತಿ ಸಮುಚ್ಚಯದಲ್ಲಿನ ಮೂರನೇ ಮಹಡಿಯಿಂದ ಬಿದ್ದು ಹದಿನೈದು ತಿಂಗಳ ಮಗುವೊಂದು ಮೃತಪಟ್ಟ ಘಟನೆ ಶುಕ್ರವಾರ ಮದ್ಯಾಹ್ನ ನಡೆದಿದೆ.
Published on
ಬೆಂಗಳೂರು: ಬೆಂಗಳೂರಿನ ನಾಯಂದಹಳ್ಳಿಯಲ್ಲಿರುವ ವಸತಿ ಸಮುಚ್ಚಯದಲ್ಲಿನ ಮೂರನೇ ಮಹಡಿಯಿಂದ ಬಿದ್ದು ಹದಿನೈದು ತಿಂಗಳ ಮಗುವೊಂದು ಮೃತಪಟ್ಟ ಘಟನೆ ಶುಕ್ರವಾರ ಮದ್ಯಾಹ್ನ ನಡೆದಿದೆ.
ನಾಲ್ಕಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿ ಆಟವಾಡುತ್ತಿದ್ದ ಹೆಣ್ಣು ಮಗು ಕಟ್ಟಡದಿಂದ ಕೆಳಗೆ ಬಿದ್ದು ಮೃತಪಟ್ಟಿದೆ. ಈ ನತದೃಷ್ಟ ಮಗುವನ್ನು ಮೈತ್ರಾ ಎಂದು ಗುರುತಿಸಿದ್ದು ರೇಣುಕೇಶ್ ಹಾಗೂ ಅನಿತಾ ದಂಪತಿಗಳ ಒಬ್ಬಳೇ ಪುತ್ರಿ ಆಗಿದ್ದಳು ಕೊಳ್ಳೇಗಾಲ ಮೂಲದವರಾದ ಈ ದಂಪತಿ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಪತಿ ರೇಣುಕೇಶ್ ವಾಚ್ ಶೋ ರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದು ಅನಿತಾ ಗೃಹಿಣಿಯಾಗಿದ್ದಾರೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ 
ಮೈತ್ರಾ ಬಾಗಿಲಿನ ಬಳಿ ಆಡುತ್ತಿದ್ದಾಗ ಅವಳ ತಾಯಿ ಅನಿತಾ ಅಡಿಗೆ ತಯಾರಿಯಲ್ಲಿದ್ದರು. ಅದಾಗ ಸಮಯ ಸುಮಾರು  12.30 ಆಗಿದ್ದು  ಮಗು ಆಟವಾಡುತ್ತಾ ಬಾಲ್ಕನಿಗೆ ತೆರಳಿತು. ಅಲ್ಲಿ ಬಾಲ್ಕನಿ ಗ್ರಿಲ್ ಗಳ ನಡುವಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದೆ. ಅದಾಗ ನೆರೆ ಹೊರೆಯವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗು ಮೈತ್ರಾ ಳನ್ನು ಕಂಡು ಅವರ ತಾಯಿಗೆ ಸುದ್ದಿ ತಿಳಿಸಿದ್ದಾರೆ. ಅದೇ ತಕ್ಷಣ ಮಗುವನ್ನು ನಿಮ್ಹಾನ್ಸ್ ಗೆ ದಾಖಲಿಸಲಾಗಿತ್ತಾದರೂ ಏನೂ ಪ್ರಯೋಜನವಾಗಲಿಲ್ಲ.
ಸ್ಥಳೀಯರು ಮಗುವಿನ ತಂದೆ ಹಾಗೂ ಪೋಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಚಂದ್ರಾ ಲೇಔಟ್ ಠಾಣೆ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆರ್. ಜತೆಗೆ ಕಟ್ಟಡ ಮಾಲೀಕರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com