ಬೆಂಗಳೂರು: ಫೇಸ್ ಬುಕ್ ಸ್ನೇಹಿತೆಯಿಂದ ಮೋಸ, 1.5 ಲಕ್ಷ ರೂ. ವಂಚನೆ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜನರನ್ನು ವಂಚಿಸಿ ಹಣ ದೋಚುವ ಪ್ರಕರಣಗಳು ಹೆಚ್ಚುತ್ತಿವೆ.
ಫೇಸ್ ಬುಕ್ ಸ್ನೇಹಿತೆಯಿಂದ ಮೋಸ, 1.5 ಲಕ್ಷ ರೂ. ವಂಚನೆ
ಫೇಸ್ ಬುಕ್ ಸ್ನೇಹಿತೆಯಿಂದ ಮೋಸ, 1.5 ಲಕ್ಷ ರೂ. ವಂಚನೆ
ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜನರನ್ನು  ವಂಚಿಸಿ ಹಣ ದೋಚುವ ಪ್ರಕರಣಗಳು ಹೆಚ್ಚುತ್ತಿವೆ. ಇದರಲ್ಲಿಯೂ ಆನ್ ಲೈನ್ ನಲ್ಲಿ ಪರಿಚಯವಾದ ಯುವತಿಯರಿಂದ ವಂಚನೆಗೊಳಗಾಗುವ ಯುವಕರ ಸಂಖ್ಯೆ ಸಾಕಷ್ಟಿದೆ. ಇದೂ ಸಹ ಅಂತಹಾ ಪ್ರಕರಣಗಳಲ್ಲಿ ಒಂದು. 
ಬೆಂಗಳೂರಿನ ಆನಂದ್ ರಾವ್ ಎನ್ನುವಾತ ಆನ್ ಲೈನ್ ನಲ್ಲಿ ಪರಿಚಯವಾದ ಯುವತಿಯೊಬ್ಬಳಿಂದ ವಂಚನೆಗೀಡಾಗಿದ್ದಾರೆ. ಫೆಸ್ ಬುಕ್ ನಲ್ಲಿ ಪರಿಚಯವಾದ ಯುವತಿ ಆನಂದ್ ಅವರಿಂದ 1.5 ಲಕ್ಷ ರೂ. ಪಡೆದು ಯಾಮಾರಿಸಿದ್ದಾಳೆ. 
ಘಟನೆ ವಿವರ: ಫೇಸ್‍ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿ ಆನಂದ್ ರಾವ್ ಜತೆ ಚಾಟ್ ಮಾಡುತ್ತಿದ್ದಳು. ಇಬ್ಬರ ನಡುವೆ ಸ್ನೇಹ ಪ್ರಾರಂಭವಾಗಿತ್ತು. ತಾನು ಇಂಗ್ಲೆಂಡಿನಲ್ಲಿರುವುದಾಗಿ ಹೇಳಿಕೊಂಡ ಯುವತಿ ಜತೆ ಕೆಲ ದಿನಗಳ ಕಾಲ ವಾಟ್ಸ್ ಅಪ್ ಹಾಗೂ ಫೇಸ್ ಬುಕ್ ನಲ್ಲಿ ಆನಂದ್ ಚಾಟ್ ಮಾಡುತ್ತಿದ್ದರು. 
ಅದೊಮ್ಮೆ ಯುವತಿ ತಾನು ಆನಂದ್ ಅವರನ್ನು ಕಾಣಲು ಬೆಂಗಳೂರಿಗೆ ಬರಲಿದ್ದೇನೆ ಎಂದು ಸಂದೇಶ ಕಳಿಸಿದ್ದಾರೆ. ಅದಾಗಿ ಕೆಲ ಸಮಯದ ನಂತರ 'ತಾನು ದೆಹಲಿ ತಲುಪಿದ್ದೇನೆ. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನನ್ನನ್ನು ಹಿಡಿದಿದ್ದಾರೆ' ಎಂದು ಮತ್ತೆ ಸಂದೇಶ ಕಳಿಸಿದ್ದು ಆನಂದ್ ಗೆ ಒಂದೂ ವರೆ ಲಕ್ಷ ಬೇಡಿಕೆ ಇಟ್ಟಿದ್ದಾಲೆ. 'ಅಧಿಕಾರಿಗಳು ಒಂದೂವರೆ ಲಕ್ಷ ರೂ ಹಣ ಕೇಳುತ್ತಿದ್ದಾರೆ. ನೀವು ಹಣ ಕಳಿಸಿಕೊಡಿ, ನಾನು ಬೆಂಗಳೂರಿಗೆ ಬಂದೊಡನೆ ನಿಮ್ಮ ಹಣ ಮರಳಿಸುತ್ತೇನೆ' ಎಂದಿದ್ದಾಳೆ.
ಗೆಳತಿ ತೊಂದರೆಯಲ್ಲಿದ್ದಾಳೆ ಎಂದು ನಂಬಿದ ಆನಂದ್ ಯುವತಿ ಖಾತೆಗೆ ಹಣ ವರ್ಗಾಯಿಸಿದ್ದಾರೆ.ಆದರೆ ಹಣ ಕೈಗೆ ಸಿಕ್ಕೊಡನೆ ಯುವತಿ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಅವಳ ವಾಟ್ಸ್ ಅಪ್ ಹಾಗೂ ಫೇಸ್ ಬುಕ್ ಖಾತೆಗಳೂ ಡಿಲೀಟ್ ಆಗಿದೆ. ಆನಂದ್ ಗೆ ತಾನು ಮೋಸ ಹೋಗಿರುವುದರ ಅರಿವಾಗಿದೆ. ಇದೀಗ ಆನಂದ್  ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಯುವತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಪೋಲೀಸರು ಯುವತಿಯ ಶೋಧಕ್ಕೆ ತೊಡಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com