ಗಡಿ ವಿವಾದ ಇತ್ಯಾರ್ಥವಾಗುವವರೆಗೆ ಕರ್ನಾಟಕಕ್ಕೆ ಸಹಾಯ ಮಾಡಬೇಡಿ: ಮಹರಾಷ್ಟ್ರಕ್ಕೆ ಆಗ್ರಹ

ಕರ್ನಾಟಕ-ಮಹರಾಷ್ಟ್ರ ಗಡಿ ವಿವಾದ ಇತ್ಯಾರ್ಥವಾಗುವವರೆಗೆ ಮಹದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಸಹಾಯ ಮಾಡಬೇಡಿ ಎಂದು...
ಮಹದಾಯಿ ನದಿ
ಮಹದಾಯಿ ನದಿ
ಬೆಳಗಾವಿ: ಕರ್ನಾಟಕ-ಮಹರಾಷ್ಟ್ರ ಗಡಿ ವಿವಾದ ಇತ್ಯಾರ್ಥವಾಗುವವರೆಗೆ ಮಹದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಸಹಾಯ ಮಾಡಬೇಡಿ ಎಂದು ಮಹರಾಷ್ಟ್ರ ಏಕಿಕರಣ ಸಮಿತಿ(ಎಂಇಎಸ್)ಯ ಮರಾಠಿ ಯುವ ಮಂಚ್ ಸಂಘಟನೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಒತ್ತಾಯಿಸಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರದ ವಿವಾದಿತ ಪ್ರದೇಶದಲ್ಲಿ ಕರ್ನಾಟಕ ಸರ್ಕಾರ ಮಹದಾಯಿ ಯೋಜನೆ ಜಾರಿಗೊಳಿಸುತ್ತಿದೆ. ಆದರೆ ಮಹಜನ್ ಆಯೋಗದ ವರದಿಯ ಪ್ರಕಾರ ಅದು ಶೇ.100ರಷ್ಟು ಮಹಾರಾಷ್ಟ್ರಕ್ಕೆ ಸೇರಿದ ಪ್ರದೇಶವಾಗಿದೆ ಎಂದು ಮರಾಠಿ ಯುವ ಮಂಚ್ ಫಡ್ನವಿಸ್ ಗೆ ಬರೆದ ಪತ್ರದಲ್ಲಿ ತಿಳಿಸಿದೆ.
ಮಹದಾಯಿ ವಿವಾದ ಕೇವಲ ಗೋವಾ ಮತ್ತು ಕರ್ನಾಟಕ ನಡುವಿನ ವಿವಾದ ಮಾತ್ರವಲ್ಲ. ಮಹರಾಷ್ಟ್ರದ್ದು ಅದರಲ್ಲಿ ಪಾಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಉತ್ತರ ಕರ್ನಾಟಕ ಜನತೆಯ ಕುಡಿಯುವ ನೀರಿನ ಬೇಡಿಕೆ ಈಡೇರಿಸುವುದಕ್ಕಾಗಿ ರಾಜ್ಯ ಸರ್ಕಾರ ಮಹದಾಯಿ ಯೋಜನೆ ಜಾರಿಗೊಳಿಸಲು ಯತ್ನಿಸುತ್ತಿದ್ದು, ಅದಕ್ಕೆ ಗೋವಾ ವಿರೋಧ ವ್ಯಕ್ತಪಡಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com