ಬೆಂಗಳೂರು: ಸುರಕ್ಷತೆ ದೃಷ್ಟಿಯಿಂದ ಮಂತ್ರಿಮಾಲ್ ಪುನರಾರಂಭ ಸದ್ಯಕ್ಕಿಲ್ಲ

ಹಿಂಬದಿಯ ಗೋಡೆ ಕುಸಿತದಿಂದಾಗಿ ಕಳೆದ 16 ರಿಂದ ಮುಚ್ಚಲ್ಪಟ್ಟಿರುವ ಮಂತ್ರಿ ಮಾಲ್ ಸದ್ಯಕ್ಕೆ ಪುನರಾರಂಭವಾಗುವ ಸಾಧ್ಯತೆಯಿಲ್ಲ....
ಮಂತ್ರಿ ಮಾಲ್
ಮಂತ್ರಿ ಮಾಲ್

ಬೆಂಗಳೂರು:  ಹಿಂಬದಿಯ ಗೋಡೆ ಕುಸಿತದಿಂದಾಗಿ ಕಳೆದ 16 ರಿಂದ ಮುಚ್ಚಲ್ಪಟ್ಟಿರುವ ಮಂತ್ರಿ ಮಾಲ್ ಸದ್ಯಕ್ಕೆ ಪುನರಾರಂಭವಾಗುವ ಸಾಧ್ಯತೆಯಿಲ್ಲ.  ತಜ್ಞರ ಸಮಿತಿ ನಡೆಸಿದ ಪರಿಶೀಲನೆಯಲ್ಲಿ ಮಾಲ್ ಒಪನ್ ಮಾಡುವುದು ಸದ್ಯಕ್ಕೆ ಸುರಕ್ಷಿತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾದ್ದರಿಂದ ಸದ್ಯಕ್ಕೆ ಪುನರಾರಂಭ ಇಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಕಳೆದ ಜನವರಿ 16 ರಂದು ಗೋಡೆ ಕುಸಿತದಿಂದಾಗಿ ಮಾಲ್ ನ ಇಬ್ಬರು ಕೆಲಸಗಾರರು ಸೇರಿದಂತೆ ನಾಲ್ವರು ಗಾಯಗೊಂಡಿದ್ದರು. ಅಂದಿನಿಂದ ಸುರಕ್ಷತೆಯ ದೃಷ್ಟಿಯಿಂದ ಮಾಲ್ ಅನ್ನು ಮುಚ್ಚಲಾಗಿದೆ.

ಕಟ್ಟಡದಲ್ಲಿ ಅಳವಡಿಸಲಾಗಿರುವ ಹವಾ ನಿಯಂತ್ರಿತ ವ್ಯವಸ್ಥೆಯಿಂದ ಬಂದ ನೀರು ಕಟ್ಟಡದ ಹಿಂಬದಿಯ ಗೋಡೆಯನ್ನು ತೀವ್ರವಾಗಿ ಹಸಿಗೊಳಿಸಿದ್ದ ಕಾರಣದಿಂದ ಆ ಗೋಡೆ ಕುಸಿದಿದೆ ಎಂದು ಆಯುಕ್ತರು ವಿವರಿಸಿದರು.

ಈ ಪ್ರಕರಣದ ನಂತರ, ಕಟ್ಟಡದ ಗುಣಮಟ್ಟವನ್ನು ಪರೀಕ್ಷಿಸಲು ಬಿಬಿಎಂಪಿ ನೇಮಿಸಿದ್ದ ತಜ್ಞರ ಸಮಿತಿ ತನ್ನ ವರದಿಯನ್ನು ಬಿಬಿಎಂಪಿಗೆ ಸಲ್ಲಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು ತಜ್ಞರ ವರದಿ ಅಂಶಗಳನ್ನು ಬಹಿರಂಗಗೊಳಿಸಲಿಲ್ಲ. ತಜ್ಞರ ವರದಿಯ ಬಗ್ಗೆ ಕೂಲಂಕಷ ಚರ್ಚೆ ನಡೆಸಿದ ನಂತರವಷ್ಟೇ ಮಂತ್ರಿ ಮಾಲ್ ಪುನರಾರಂಭಕ್ಕೆ ಅನುಮತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com