
ಬೆಂಗಳೂರು: ರೂಪದರ್ಶಿ ಆಗಬೇಕೆಂದು ಬಯಸಿದ್ದ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ರಾಮಮೂರ್ತಿ ನಗರ ಪೊಲೀಸರು ಇವೆಂಟ್ ಮ್ಯಾನೇಜರ್ ನನ್ನು ಬಂಧಿಸಿದ್ದಾರೆ.
ಪ್ರಗದೀಶ್ ಕಪೂರ್ ಬಂಧಿತ ಆರೋಪಿ. ಹಾಲಿನಲ್ಲಿ ಮತ್ತು ಬರುವ ಮಾತ್ರೆಯನ್ನು ಮುಂಬೈ ಮೂಲದ ಹುಡುಗಿ ಬೆಂಗಳೂರಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು. ಆಕೆಯ ಪರಿಚಯದವರಲ್ಲಿ ವಿದ್ಯಾರ್ಥಿನಿಯ ಮೊಬೈಲ್ ನಂಬರ್ ಪಡೆದು 10 ದಿನಗಳ ಹಿಂದೆ ಆಕೆಗೆ ಕರೆ ಮಾಡಿದ್ದಾನೆ. ನಂತರ ತನ್ನ ಗೆಸ್ಟ್ ಹೌಸ್ ಗೆ ಬರಲು ತಿಳಿಸಿದ್ದ.
ಈ ವೇಳೆ ಗೆಸ್ಟ್ ಹೌಸ್ ಗೆ ಬಂದ ಆಕೆಗೆ ಹಾಲಿಗೆ ಮತ್ತು ಬರುವ ಮಾತ್ರೆ ಹಾಕಿ ಅತ್ಯಾಚಾರ ಮಾಡಿದ್ದಾನೆ. ಬಳಿಕ ಆಕೆಯ ನಗ್ನ ವೀಡಿಯೋ ತೆಗೆದಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಬಾಲಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಗ್ನ ವೀಡಿಯೋ ಮಾಡಿಕೊಂಡಿರುವುದನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡರೆ ಆತ ಮತ್ತೆ ಸೆಕ್ಸ್ ಗೆ ಕರೆಯುತ್ತಾ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಬಾಲಕಿ ಬೆಂಗಳೂರಿನ ಸ್ನೇಹಿತೆ ಬಳಿ ಹೇಳಿಕೊಂಡಿದ್ದಳು.
ಗೆಳತಿಯ ಸಹಾಯದಿಂದ ನೊಂದ ಬಾಲಕಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಳು. ದೂರಿನ ಹಿನ್ನೆಲೆಯಲ್ಲಿ ರಾಮಮೂರ್ತಿನಗರ ಪೊಲೀಸರು ಅರೋಪಿ ಪ್ರಗದೀಶ್ ಕಪೂರ್ ನನ್ನು ಬಂಧಿಸಿದ್ದಾರೆ.
ಈ ವೇಳೆ ಪ್ರಗದೀಶ್ ನ ಲ್ಯಾಪ್ ಟಾಪ್ ಸೀಜ್ ಮಾಡಿದಾಗ ಮತ್ತಷ್ಟು ಪ್ರಕರಣಗಳು ಬಯಲಾಗಿವೆ. ಆರೋಪಿ ಲ್ಯಾಪ್ ಟಾಪ್ ನಲ್ಲಿ ಅನೇಕ ಮಂದಿ ಆತ್ಯಾಚಾರ ಮತ್ತು ಮಾಡೇಲ್ಗಳ ನಗ್ನ ವಿಡೀಯೋಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದು ಬಂದಿದೆ.
Advertisement