ಮಂಡ್ಯ: ಮುಚ್ಚುತ್ತಿರುವ ಆಲೆಮನೆಗಳು; ಉದ್ಯೋಗ ಕಳೆದುಕೊಂಡ ಸಾವಿರಾರು ಕಾರ್ಮಿಕರು

ಸಕ್ಕರೆ ನಾಡು ಮಂಡ್ಯದಲ್ಲಿ ತಲೆದೋರಿರುವ ಬರದಿಂದಾಗಿ ಕಾರ್ಖಾನೆಗಳು ಮುಚ್ಚಿವೆ. ಈಗ ಆಲೆಮನೆಗಳ ಬಾಗಿಲುಗಳು ಸಹ ಬಂದ್ ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ತಲೆದೋರಿರುವ ಬರದಿಂದಾಗಿ ಕಾರ್ಖಾನೆಗಳು ಮುಚ್ಚಿವೆ. ಈಗ ಆಲೆಮನೆಗಳ ಬಾಗಿಲುಗಳು ಸಹ ಬಂದ್ ಆಗುತ್ತಿವೆ.

ಸ್ಥಳೀಯ ಆರ್ಥಿಕ ವ್ಯವಸ್ಥೆ ಈ ಆಲೆಮನೆಗಳ ಕೊಡುಗೆ ಅಪಾರ, ಈ ಆಲೆಮನೆಗಳಿಂದ ಮಂಡ್ಯದ ಸುಮಾರು 30 ರಿಂದ 40 ಸಾವಿರ ಮಂದಿಗೆ ಉದ್ಯೋಗ ದೊರಕಿತ್ತು. ಆದರೆ ಈಗ ಇವುಗಳು ಮುಚ್ಚುತ್ತಿರುವುದರಿಂದ ಇಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಬೇರೆ ಆದಾಯದ ಮೂಲ ಇಲ್ಲದಂತಾಗಿ ತಲೆ ಮೇಲೆ ಕೈ ಹೊತ್ತು ಕೂರು ಪರಿಸ್ಥಿತಿ ಉಂಟಾಗಿದೆ.

ಜಲಾಶಯಗಳಲ್ಲಿ ತಗ್ಗಿದ ನೀರಿನ ಮಟ್ಟ ಹಾಗೂ ಮುಂಗಾರು ಕೊರತೆ ಹಿನ್ನೆಲೆಯಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಬ್ಬು ಬೆಳೆ ಇಲ್ಲದಂತಾಗಿದೆ. ಕಳೆದ ಎರಡು ವರ್ಷಗಳಲ್ಲಿ ಶೇ. 80ರಷ್ಟು ಕಬ್ಬು ಕೃಷಿ ಕಡಿಮೆಯಾಗಿದೆ.

ಐದು ಸಕ್ಕರೆ ಕಾರ್ಖಾನೆಗಳಿಗೆ ಮಂಡ್ಯ ಜಿಲ್ಲಾ ರೈತರು 75 ಲಕ್ಷ ಟನ್ ಕಬ್ಬು ಪೂರೈಸುತ್ತಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕೇವಲ 45 ಲಕ್ಷ ಟನ್ ಕಬ್ಬು ಮಾತ್ರ ಬೆಳೆಯಲಾಗುತ್ತಿದೆ. ಇದರಲ್ಲಿ 5 ಲಕ್ಷ ಟನ್ ಕಬ್ಬನ್ನು ಬಿತ್ತನೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಅದರಲ್ಲಿ 10 ಲಕ್ಷ ಟನ್ ಕಬ್ಬನ್ನು  ಬೆಲ್ಲದ ಉತ್ಪಾದನೆಗಾಗಿ ಆಲೆಮನೆಗಾಗಿ ಬಳಸಿಕೊಳ್ಳುತ್ತಾರೆ.

ಅದರಲ್ಲೂ ಕೆಲವು ರೈತರು ಪಂಪ್ ಸೆಟ್ ಬಳಸಿ ಕಬ್ಬನ್ನು ಬೆಳೆಯುತ್ತಿದ್ದಾರೆ. ಶೇ. 10 ರಿಂದ 15 ರಷ್ಟು ಆಲೆಮನೆಗಳು ಪಕ್ಕದ ಜಿಲ್ಲೆಗಳಾದ ತುಮಕೂರು ಮತ್ತು ಹಾಸನಗಳಿಂದ ಕಬ್ಬನ್ನು ಖರೀದಿಸುತ್ತಿವೆ.

ಈ ಮೊದಲು ಮಂಡ್ಯ ಎಪಿಎಂಸಿಗೆ 80 ಟ್ರಕ್ ಬೆಲ್ಲದ ಲೋಡ್ ಬರುತ್ತಿತ್ತು. ಕಬ್ಬು ಕಟಾವು, ಬೆಲ್ಲ ತಯಾರಿಕೆ, ಸಾಗಾಣಿಕೆ ಸೇರಿದಂತೆ ಹಲವು ವಿಭಾಗಗಳಲ್ಲಿ ನೂರಾರು ಜನರಿಗೆ ನೌಕರಿ ಸಿಗುತ್ತಿತ್ತು. ಆದರೆ ಈಗ ಬೆಲ್ಲ ತಯಾರಿಕಾ ಘಟಕಗಳು ಮುಚ್ಚುತ್ತಿರುವ ಕಾರಣ ಅವರೆಲ್ಲಾ ಕೆಲಸ ಇಲ್ಲದೇ ಕೂರುವಂತಾಗಿದೆ.

ಕೆಲ ಆಲೆಮನೆಗಳು ಅಕ್ಕ ಪಕ್ಕದ ಜಿಲ್ಲೆಗಳಿಂದ ಕಬ್ಬು ಖರೀದಿಸುತ್ತಿವೆ, ಆದರೆ ಬೆಲ್ಲ ತಯಾರು ಮಾಡುವ ಆಲೆಮನೆಗಳಿಗೆ ಅವಶ್ಯಕವಾಗಿರುವಷ್ಟು ನೀರು ದೊರೆಯುತ್ತಿಲ್ಲ, ಹೀಗಾಗಿ ಬೆಲ್ಲ ಉತ್ಪಾದನೆ ಇಳಿಕೆಯಾಗಿದ್ದು, ಈ ವರ್ಷದ ಕೊನೆಯಲ್ಲಿ ಬೆಲ್ಲದ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

ಈ ಮೊದಲು ಕಬ್ಬು ಕಟಾವಿಗೆ ದಿನವೊಂದಕ್ಕೆ 400 ರು. ಬೇಡಿಕೆ ಇಡುತ್ತಿದ್ದ ಕೂಲಿ ಕಾರ್ಮಿಕರು ಈಗ 250 ರು ಗೆ ಕೆಲಸ ಮಾಡಲು ತಯಾರಾಗಿದ್ದಾರೆ. ತಮ್ಮ ಜೀವನ ನಡೆಸಲು ಈ ಕೂಲಿ ಕಾರ್ಮಿಕ ಮಹಿಳೆಯರು ಉದ್ಯೋಗಕ್ಕಾಗಿ ಪ್ರತಿದಿನ ಬೆಂಗಳೂರು ಮೈಸೂರು ಗಳಿಗೆ ರೈಲಲ್ಲಿ ಸಚರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com