ಕೊಹ್ಲಿಯನ್ನು ಜೆಟ್ ಪೈಲಟ್ ಆಗಿಸಲು ಹೇಗೆ ಮನವೊಲಿಸುವುದು ಎಂಬ ಬಗ್ಗೆ ಚಿಂತಿಸುತ್ತಿದ್ದೇವೆ: ಯುಕೆ ಸಚಿವ
ಬೆಂಗಳೂರು: ಭಾರತದಲ್ಲಿ ಕ್ರಿಕೆಟ್ ಗೆ ಭಾರೀ ಮಾರುಕಟ್ಟೆಯಿದೆ, ಹೀಗಾಗಿ ವಿರಾಟ್ ಕೊಹ್ಲಿಯನ್ನು ಹೇಗೆ ಜೆಟ್ ಪೈಲಟ್ ಮಾಡಬೇಕು ಎಂಬುದರ ಬಗ್ಗೆ ಚಿಂತಿಸುತ್ತಿದ್ದೇವೆ ಎಂದು ಯುಕೆ ರಕ್ಷಣಾ ಸಚಿವ ಹ್ಯಾರಿಯೆಟ್ ಬಾಲ್ಡ್ ವಿನ್ ತಿಳಿಸಿದ್ದಾರೆ.
ಏರೋ ಇಂಡಿಯಾದ 11ನೇ ವೈಮಾನಿಕ ಪ್ರದರ್ಶನದಲ್ಲಿ ಮಾತನಾಡಿದ ಅವರು, ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸಾಧನೆ ಕುರಿತು ಮಾತನಾಡಿದ ಅವರು, ರಕ್ಷಣಾ ವಿಭಾಗದಲ್ಲಿ ಸಂಶೋಧನೆ, ತರಬೇತಿ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಹಾಗೂ ಯುಕೆ ದೇಶಗಳು ಪರಸ್ಪರ ಹಂಚಿಕೊಳ್ಳುವ ವಿಷಯಗಳು ಹಲವು ಇವೆ ಎಂದು ಹೇಳಿದ್ದಾರೆ.
ಮೇಕ್ ಇನ್ ಇಂಡಿಯಾದಲ್ಲಿ ಯುಕೆ ಪಾಲುದಾರನಾಗಿದ್ದು, ಭಾರತದ ಖಾಸಗಿ ವಲಯದ 20 ಉದ್ಯೋಗಗಳಲ್ಲಿ 1 ಯುಕೆಗೆ ನೀಡುವ ಒಪ್ಪಂದಕ್ಕೆ ಕಳೆದ ಗುರುವಾರ ಎರಡು ದೇಶಗಳು ಸಹ ಮಾಡಿವೆ. ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಎರಡು ದೇಶಗಳು ಮುಂದಾಗಿವೆ ಎಂದು ತಿಳಿಸಿದ್ದಾರೆ. ಐರೋಪ್ಯ ಒಕ್ಕೂಟದಿಂದ ಹೊರಬರಲು ಯುಕೆ ಸಿದ್ಧತೆ ನಡೆಸುತ್ತಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
ಸಣ್ಣ ಯೋಜನೆಗಳು ದೊಡ್ಡದ್ದನ್ನು ಮಾಡಲು ನೆರವಾಗುತ್ತವೆ ಎಂದು ಭಾರತ್ ಫೋರ್ಜ್ ಲಿಮಿಟೆಡ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಬಾಬಾ ಕಲ್ಯಾಣಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ