ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡ ಬೆಂಕಿ

ಬೆಳ್ಳಂದೂರು ಕೆರೆಯಲ್ಲಿ ನಿನ್ನೆ ಸಂಜೆ ಬೆಂಕಿ ಹತ್ತಿಕೊಂಡು ಸುತ್ತಮುತ್ತಲ ನಿವಾಸಿಗಳಲ್ಲಿ...
ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡು ಹೊರಬಂದ ದಟ್ಟ ಹೊಗೆ
ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡು ಹೊರಬಂದ ದಟ್ಟ ಹೊಗೆ
ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ  ನಿನ್ನೆ ಸಂಜೆ ಬೆಂಕಿ ಹತ್ತಿಕೊಂಡು ಸುತ್ತಮುತ್ತಲ ನಿವಾಸಿಗಳಲ್ಲಿ ಕೆಲ ಕಾಲ ಆತಂಕವನ್ನುಂಟುಮಾಡಿತ್ತು.
ಅತಿಯಾದ ಪ್ರಮಾಣದಲ್ಲಿ ಕೈಗಾರಿಕಾ ತ್ಯಾಜ್ಯ ಕೆರೆಗೆ ಸೇರುವುದು, ಮಿಥೇನ್ ನ ಪ್ರಮಾಣ ಹೆಚ್ಚಾಗಿ ಸೇರ್ಪಡೆಯಾಗಿರುವುದು, ಘನ ತ್ಯಾಜ್ಯ ವಸ್ತುಗಳ ಅಧಿಕ ಸೇರ್ಪಡೆಯಿಂದ ಸುತ್ತಲಿನ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿ ಬೆಂಕಿ ಹತ್ತಿಕೊಂಡು ಹೊಗೆಯುಗುಳಿತು. ಸುತ್ತಮುತ್ತಲಿನ ಆಸ್ತಿಪಾಸ್ತಿಗಳಿಗೆ ಯಾವುದೇ ನಷ್ಟವುಂಟಾಗಿಲ್ಲ.
ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆಯುಗುಳಲಾರಂಭಿಸಿದ್ದನ್ನು ಸುತ್ತಮುತ್ತಲ ನಿವಾಸಿಗಳು ನೋಡಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಅಗ್ನಿ ಶಾಮಕ ಯಂತ್ರ ಸ್ಥಳಕ್ಕೆ ತೆರಳಿತು. ಬೆಳ್ಳಂದೂರು ಕೆರೆಯಲ್ಲಿ  ಈ ಹಿಂದೆ ಕೂಡ ಎರಡು ಬಾರಿ ಬೆಂಕಿ ಕಾಣಿಸಿಕೊಂಡಿತ್ತು.
ಬೆಳ್ಳಂದೂರು ಕೆರೆಯ ಸ್ವಚ್ಛತೆ ಕಾಪಾಡುವ ಪ್ರಯತ್ನ ನಡೆಸಿದರೂ ಇದುವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. ಕೆರೆಯ ಸ್ವಚ್ಛತೆಗೆ ಒಂದೂವರೆ ವರ್ಷ ಹಿಂದೆ ಸಮಿತಿಯನ್ನು ರಚಿಸಲಾಗಿದ್ದು, ರಾಜಕೀಯ ವ್ಯಕ್ತಿಗಳ ಪ್ರವೇಶದಿಂದಾಗಿ ಏನೂ ಪ್ರಗತಿ ಹೊಂದಲು ಸಾಧ್ಯವಾಗಿಲ್ಲ ಎಂದು ನಾಗರಿಕ ಹಕ್ಕು ಹೋರಾಟಗಾರ್ತಿ ಕವಿತಾ ರೆಡ್ಡಿ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com