ಬೆಂಗಳೂರಿನಿಂದ ಮಂಗಳೂರಿಗೆ ಇಂಟರ್ ಸಿಟಿ ರೈಲು ಸೇವೆ ಸದ್ಯದಲ್ಲಿಯೇ ಆರಂಭ

ಬೆಂಗಳೂರು-ಹಾಸನ-ಮಂಗಳೂರು ನಡುವೆ ಮಾರ್ಚ್ ಮೊದಲ ವಾರದಲ್ಲಿ ಎರಡು ಇಂಟರ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರು-ಹಾಸನ-ಮಂಗಳೂರು ನಡುವೆ ಮಾರ್ಚ್ ಮೊದಲ ವಾರದಲ್ಲಿ ಎರಡು ಇಂಟರ್ ಸಿಟಿ ರೈಲುಗಳ ಸಂಚಾರ ಆರಂಭವಾಗಲಿದೆ.
 ಬೆಂಗಳೂರು-ಹಾಸನ ನಡುವೆ ಇಂಟರ್ ಸಿಟಿ ರೈಲು ಸಂಚಾರ ವೇಳಾಪಟ್ಟಿ ಸಿದ್ದಗೊಂಡಿದ್ದು ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹಾಸನದಿಂದ ಹೊರಟು ಬೆಳಿಗ್ಗೆ 9.40ಕ್ಕೆ ಯಶವಂತಪುರ ತಲುಪಲಿದೆ. ಸಂಜೆ 6 ಗಂಟೆಗೆ ಯಶವಂತಪುರದಿಂದ ಹೊರಟು ರಾತ್ರಿ 9.30ಕ್ಕೆ ಹಾಸನ ತಲುಪಲಿದೆ.
ಬೆಂಗಳೂರು-ಹಾಸನ-ಮಂಗಳೂರು ಮಧ್ಯೆ ಇಂಟರ್ ಸಿಟಿ ರೈಲು ಸಂಚಾರಕ್ಕೆ ಆ ಭಾಗದ ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರುವ ಸಾಧ್ಯತೆಯಿದೆ. ಬೆಂಗಳೂರಿನಿಂದ ಮಂಗಳೂರಿಗೆ ತುಮಕೂರು ಅರಸೀಕೆರೆ ಮಾರ್ಗ ಅಥವಾ ಮೈಸೂರು ಹೊಳೇನರಸೀಪುರ ಮಾರ್ಗದಲ್ಲಿ ಹೋಗಬೇಕಿತ್ತಾದರೂ ಇದೀಗ ನೂತನ ಮಾರ್ಗ ಪೂರ್ಣಗೊಂಡಿರುವುದರಿಂದ 9 ತಾಸಿನಲ್ಲಿ ಬೆಂಗಳೂರಿನಿಂದ ಮಂಗಳೂರು ತಲುಪಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com