ಕೊಟ್ಟೂರು ಬಸವೇಶ್ವರ ರಥ ಕುಸಿದು ಬಿದ್ದು ದುರಂತ; ಹಲವು ಭಕ್ತರಿಗೆ ಗಾಯ

ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲೂಕಿನ ಪ್ರಸಿದ್ಧ ಕೊಟ್ಟೂರು ಗುರು ಬಶವೇಶ್ವರ ಜಾತ್ರಾ ಮಹೋತ್ಸವ ವೇಳೆ ಚಕ್ರದ ಅಚ್ಚು ಮುರಿದು 60 ಅಡಿ ಎತ್ತರದ ರಥ ಕುಸಿದು...
ಕೊಟ್ಟೂರು ಗುರು ಬಶವೇಶ್ವರ ಜಾತ್ರಾ ಮಹೋತ್ಸವ
ಕೊಟ್ಟೂರು ಗುರು ಬಶವೇಶ್ವರ ಜಾತ್ರಾ ಮಹೋತ್ಸವ
ಬಳ್ಳಾರಿ: ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲೂಕಿನ ಪ್ರಸಿದ್ಧ ಕೊಟ್ಟೂರು ಗುರು ಬಶವೇಶ್ವರ ಜಾತ್ರಾ ಮಹೋತ್ಸವ ವೇಳೆ ಚಕ್ರದ ಅಚ್ಚು ಮುರಿದು 60 ಅಡಿ ಎತ್ತರದ ರಥ ಕುಸಿದು ಬಿದ್ದಿದ್ದು, ರಥದಡಿ ಸಿಲುಕು ಹಲವರು ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಇಂದು ಸಂಜೆ ರಥೋತ್ಸವ ವೇಳೆ ಲಕ್ಷಾಂತರ ಭಕ್ತರು ಸೇರಿದ ವೇಳೆ ಈ ದುರಂತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹಾವೇರಿ, ಧಾರವಾಡಸ ಗದಗ, ಶಿವಮೊಗ್ಗ, ಹಾಸನ, ಚಿತ್ರದುರ್ಗ ಹಾಗೂ ದಾವಣಗೆರೆ ಸೇರಿದಂತೆ ನಾಡಿನ ವಿವಿಧ ಮೂಲಗಳಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಇಂದಿನ ರಥೋತ್ಸವದಲ್ಲಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com