ಬೆಂಗಳೂರು: ಆರು ಮಂದಿ ದರೋಡೆಕೋರರ ಬಂಧನ

ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ ಆರು ಮಂದಿಯ ಗ್ಯಾಂಗನ್ನು ಬೆಂಗಳೂರು ದಕ್ಷಿಣ ವಿಭಾಗ ಪೊಲೀಸ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ ಆರು ಮಂದಿಯ ಗ್ಯಾಂಗನ್ನು ಬೆಂಗಳೂರು ದಕ್ಷಿಣ ವಿಭಾಗ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜೆ.ಪಿ.ನಗರದ ಕಾರ್ತಿಕ್, ಸುನಿಲ್, ಹಾರೋಹಳ್ಳಿಯ ರಾಹುಲ್, ಬನಶಂಕರಿಯ ಸೆಂತಿಲ್ ಕುಮಾರ್ ಮತ್ತು ನವೀನ್,ಯಡಿಯೂರಿನ ರೋಹಿತ್ ನನ್ನು ಬಂಧಿಸಲಾಗಿದೆ. ಇವರ ಬಳಿಯಿಂದ ಕಾರು, 9 ದ್ವಿಚಕ್ರ ವಾಹನಗಳು, 24 ಮೊಬೈಲ್ ಫೋನ್, 32 ಇಂಚಿನ ಎಲ್ ಇಡಿ ಟಿವಿ, 6 ಹೋಂ ಥಿಯೇಟರ್, 78 ಗ್ರಾಂನ ಬೆಳ್ಳಿಯ ಸರ, ಕಠಾರಿ, ಚಾಕುಗಳು ಮತ್ತು ಒಂದು ರಾಡ್ ನ್ನು ವಶಪಡಿಸಿಕೊಳ್ಳಲಾಗಿದೆ.

ಕದ್ದ ಬೈಕುಗಳನ್ನು ಓಡಿಸುತ್ತಿದ್ದ ಆರೋಪಿಗಳು ಔಟರ್ ರಿಂಗ್ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ನೈಸ್ ರಸ್ತೆಗಳಲ್ಲಿ ಹೋಗಿ ಅಲ್ಲಿ ಸಂಚರಿಸುವವರಿಂದ ಬೆಲೆಬಾಳುವ ವಸ್ತುಗಳನ್ನು ಕಿತ್ತು ಪರಾರಿಯಾಗುತ್ತಿದ್ದರು. ಕದ್ದ ಫೋನನ್ನು ಮಾರಾಟ ಮಾಡಿದರೆ, ಬೈಕಿನಲ್ಲಿ ಪೆಟ್ರೋಲ್ ಮುಗಿಯುವವರೆಗೆ ಓಡಿಸಿ ಅರ್ಧದಲ್ಲಿಯೇ ಬಿಟ್ಟು ಪರಾರಿಯಾಗುತ್ತಿದ್ದರು.

ಗುಂಪಿನಲ್ಲಿದ್ದ ಅತ್ಯಂತ ಚಿಕ್ಕ 16 ವರ್ಷದವನು ಹಣವನ್ನು ಆಲ್ಕೋಹಾಲ್ ಗೆ ಬಳಸುತ್ತಿದ್ದ. ಕಳೆದ ಎರಡು ತಿಂಗಳಲ್ಲಿ 17 ಕೇಸುಗಳು ದಾಖಲಾಗಿವೆ. ಹಣವನ್ನೆಲ್ಲಾ ಖರ್ಚು ಮಾಡಿದ್ದರಿಂದ ಪೊಲೀಸರಿಗೆ ವಸ್ತುಗಳು ಮಾತ್ರ ಸಿಕ್ಕಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com