ಬೆಂಗಳೂರು: ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ)ಯ ಬಸ್ ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಫೆ.21 ರ ಘಟನೆಯಿಂದ ರಾಜ್ಯ ಸರ್ಕಾರ ಎಚ್ಚೆತ್ತಂತೆ ತೋರುತ್ತಿದ್ದು, ಬಸ್, ಶಾಲಾ ವಾಹನಗಳಲ್ಲಿ ಬೆಂಕಿ ನಂದಿಸುವ ಸಾಧನವನ್ನು ಕಡ್ಡಾಯಗೊಳಿಸಿದೆ.
ಬೆಂಕಿ ನಂದಿಸುವ ಸಾಧನ ಕಡ್ಡಾಯಗೊಳಿಸಿರುವುದರ ಬಗ್ಗೆ ಕೆಎಸ್ ಆರ್ ಟಿಸಿಗೆ ರಾಜ್ಯ ಸರ್ಕಾರ ಅಗತ್ಯ ಸೂಚನೆಗಳನ್ನು ನೀಡಿದ್ದು, ಟ್ರಕ್ ಸೇರಿದಂತೆ ಸರಕು ಸಾಗಣೆ ಮಾಡುವ ವಾಹನಗಳಲ್ಲೂ ಬೆಂಕಿ ನಂದಿಸುವ ಸಾಧನವನ್ನು ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ರಾಜ್ಯದಲ್ಲಿ 24,000 ಸರ್ಕಾರಿ ಬಸ್ ಗಳಿದ್ದು, ಎಲ್ಲಾ ಬಸ್ ಗಳಲ್ಲಿಯೂ ಬೆಂಕಿ ನಂದಿಸುವ ಸಾಧನ ಅಳವಡಿಸಲು ಒಂದಷ್ಟು ಸಮಯ ಬೇಕು. ಬೆಂಕಿ ನಂದಿಸುವ ಸಾಧನ ಖರೀದಿಗೆ ಟೆಂಡರ್ ಕರೆಯಲಾಗುವುದು, ಪ್ರಕ್ರಿಯೆ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ.
ಇನ್ನು ಫೆ.21 ರಂದು ನಡೆದ ಅವಗಢಕ್ಕೆ ಪೂಜಾ ಸಾಮಗ್ರಿ (ಕರ್ಪೂರ) ವೇ ಕಾರಣ ಎಂದು ಹೇಳಲಾಗುತ್ತಿದ್ದು, ಕರ್ಪೂರದಿಂದ ಬಸ್ ಗೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದೆ.