ರಾಜ್ಯದ ಯಾವುದೇ ಸರ್ಕಾರಿ ಕಾಲೇಜಿಗಿಲ್ಲ ನ್ಯಾಕ್ ರ್ಯಾಂಕಿಂಗ್

ರಾಜ್ಯದ ಯಾವುದೇ ಒಂದು ಸರ್ಕಾರಿ ಪದವಿ ಕಾಲೇಜು ರಾಷ್ಟ್ರೀಯ ಪರೀಕ್ಷೆ ಮತ್ತು ಮಾನ್ಯತಾ ಸಂಸ್ಥೆ ಮಾನ್ಯತೆ ಪಡೆದಿಲ್ಲ.
ಎನ್ ಎಸಿಸಿ
ಎನ್ ಎಸಿಸಿ

ಬೆಂಗಳೂರು: ರಾಜ್ಯದ ಎಲ್ಲಾ  ಸರ್ಕಾರಿ ಪದವಿ ಕಾಲೇಜು ರಾಷ್ಟ್ರೀಯ ಪರೀಕ್ಷೆ ಮತ್ತು ಮಾನ್ಯತಾ ಸಂಸ್ಥೆ ಮಾನ್ಯತೆ ಪಡೆಯುವಲ್ಲಿ ವಿಫಲವಾಗಿವೆ.

ರಾಜ್ಯದ 179 ಸರ್ಕಾರಿ ಪದವಿ ಕಾಲೇಜುಗಳು ರಾಷ್ಟ್ರೀಯ ಪರೀಕ್ಷೆ ಮತ್ತು ಮಾನ್ಯತಾ ಸಂಸ್ಥೆ (NAAC) ಮಾನ್ಯತೆಗೆ ಅರ್ಜಿ ಹಾಕಿದ್ದವು, ಆದರೆ ಯಾವುದೇ ಒಂದು ಕಾಲೇಜು ಮಾನ್ಯತೆ ಪಡೆಯುವಲ್ಲಿ ವಿಫಲವಾಗಿದೆ.

ಕೇವಲ 9 ಕಾಲೇಜುಗಳು ಮಾತ್ರ ಎ ಗ್ರೇಡ್ ಪಡೆಯುವಲ್ಲಿ ಸಫಲವಾಗಿವೆ, 4 ಕಾಲೇಜುಗಳು ಬಿ+ + ಪಡೆದಿವೆ. 12 ಕಾಲೇಜುಗಳು ಬಿ+ ಪಡೆದಿವೆ. ಉಳಿದ 138 ಕಾಲೇಜುಗಳು ಬಿ ಗ್ರೇಡ್ ಗಷ್ಟೇ ತೃಪ್ತಿ ಪಟ್ಟುಕೊಂಡಿವೆ. ಯಾವುದೇ ಕಾಲೇಜು ಎ++ ಇಲ್ಲವೇ+ ಪಡೆದಿಲ್ಲ.

ಬುಧವಾರ ನ್ಯಾಕ್ ತನ್ನ ಮಾನ್ಯತೆ ಫಲಿತಾಂಶ ರಿಲೀಸ್ ಮಾಡಿದ್ದು, ಕಾಲೇಜು ಶಿಕ್ಷಣ ಇಲಾಖೆಯ ವೆಬ್ ಸೇಟ್ ನಲ್ಲಿ ಈ ಮಾಹಿತಿಯನ್ನು ಅಪ್ ಲೋಡ್ ಮಾಡಲಾಗಿದೆ. ನ್ಯಾಕ್ ನೀಡುವ ನಿಯತಾಂಕಗಳನ್ನು ತಲುಪುವಲ್ಲಿ ಸರ್ಕಾರಿ ಕಾಲೇಜುಗಳು ವಿಫಲವಾಗಿವೆ.

ರಾಜ್ಯ ಸರ್ಕಾರಿ ಕಾಲೇಜುಗಳ ಈ ಕಳಪೆ ಸಾಧನೆಗೆ ಹಿರಿಯ ಸಿಬ್ಬಂದಿ ವರ್ಗ ಅಸಮಾಧಾನ ವ್ಯಕ್ತ ಪಡಿಸಿದೆ. ಕಾಲೇಜುಗಳಲ್ಲಿ ಮೂಲ ಸೌಕರ್ಯ ಕೊರತೆ ಹಾಗೂ ಪ್ರಾಂಶುಪಾಲರ ನೇಮಿಸದಿದ್ದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ.

ಇರುವ 412 ಕಾಲೇಜುಗಳಲ್ಲಿ ಕೇವಲ 30 ಕಾಲೇಜುಗಳಲ್ಲಿ ಮಾತ್ರ ನಿಯಮಿತವಾಗಿ ಪ್ರಾಂಶುಪಾಲರನ್ನು ನೇಮಿಸಲಾಗಿದೆ. ಆದರೆ ನ್ಯಾಕ್ ಗ್ರೇಡ್ ನೀಡುವಾಗ ಈ ಎಲ್ಲಾ ಅಂಶಗಳನ್ನು ಪರಿಗಣಿಸಬೇಕು ಎಂದು ಆರ್ ಸಿ ಕಾಲೇಜಿನ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com