ಮಕ್ಕಳ ಸಾರಿಗೆ ವ್ಯವಸ್ಥೆ: ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲಿಸದ ಸಿಬಿಎಸ್ಇ ಶಾಲೆಗಳ ವಿರುದ್ಧ ಕ್ರಮ

ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವಂತೆ ಸಾರಿಗೆ ಮಾರ್ಗಸೂಚಿಗಳನ್ನು ಪಾಲಿಸದಿರುವ ಸಿಬಿಎಸ್ಇ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವಂತೆ ಸಾರಿಗೆ ಮಾರ್ಗಸೂಚಿಗಳನ್ನು ಪಾಲಿಸದಿರುವ ಸಿಬಿಎಸ್ಇ ಶಾಲೆಗಳು ಅನುಮತಿ ರದ್ದು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಿಬಿಎಸ್ಇ ಮಂಡಳಿ ಶಾಲೆಗಳಿಗೆ ಸಾರಿಗೆ ನಿಯಮದ ಸುತ್ತೋಲೆ ಹೊರಡಿಸಿದೆ.
ಇತ್ತೀಚೆಗೆ ಶಾಲೆಯ ಬಸ್ಸೊಂದಕ್ಕೆ ಬೆಂಕಿ ಹತ್ತಿಕೊಂಡಿದ್ದು, ಅಲ್ಲಿ ಮಕ್ಕಳ ಸುರಕ್ಷತೆಯನ್ನು ಕಡೆಗಣಿಸಲಾಗಿತ್ತು. ಈ ನಿಟ್ಟಿನಲ್ಲಿ ನಿಯಮ ಬಿಗಿಗೊಳಿಸಿರುವ ಸಿಬಿಎಸ್ಇ ಮಂಡಳಿ, ಮಕ್ಕಳ ಸಾರಿಗೆ ವಿಚಾರದಲ್ಲಿ ಕೆಲವೊಂದು ಶಾಲೆಗಳು ಅಸಡ್ಡೆಯ ಧೋರಣೆ ತಳೆಯುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ಕಠಿಣ ನಿಲುವು ತಳೆಯಲು ಮುಂದಾಗಿದ್ದೇವೆ ಎಂದು ಮಂಡಳಿ ತಿಳಿಸಿದೆ.
ಶಾಲೆಗಳಲ್ಲಿ ಮತ್ತು ಶಾಲೆಗಳಿಂದ ಮನೆಗೆ ತಲುಪುವವರೆಗೆ ಮಕ್ಕಳ ಸುರಕ್ಷತೆ ಬಗ್ಗೆ ಸಿಬಿಎಸ್ಇ ಅಧಿಕಾರಿಗಳು ಸುತ್ತೋಲೆಯಲ್ಲಿ ಕಠಿಣ ನಿಯಮ ರೂಪಿಸಿದ್ದಾರೆ. ನಿಯಮಗಳನ್ನು ಮುರಿದು ಮಕ್ಕಳಿಗೆ ಏನೇ ತೊಂದರೆಯಾದರೂ ಸಿಬಿಎಸ್ಇ ಶಾಲೆಗಳ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಬೈಲಾ ಪ್ರಕಾರ ಶಾಲೆ ಹಾಗೂ ಮುಖ್ಯಸ್ಥರ ವಿರುದ್ಧ ಸರಿಯಾದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com