ಎಸಿಬಿ ದಾಳಿ: ತೆರಿಗೆ ಅಧಿಕಾರಿ ಮನೆಯಲ್ಲಿ 7.5 ಲಕ್ಷ ನಗದು, 1.5 ಕೋಟಿ ಮೌಲ್ಯದ ರೇಷ್ಮೆ ಸೀರೆಗಳು ಪತ್ತೆ

ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಮಂಗಳವಾರ ಬೆಳಗಾವಿ, ಹುಬ್ಬಳ್ಳಿ ಹಾಗೂ ಚಿತ್ರದುರ್ಗದಲ್ಲಿ ಏಕ ಕಾಲಕ್ಕೆ ಭ್ರಷ್ಟ ಸರ್ಕಾರಿ...
ದಾಳಿ ವೇಳೆ ಪತ್ತೆಯಾದ ಸೀರೆಗಳು
ದಾಳಿ ವೇಳೆ ಪತ್ತೆಯಾದ ಸೀರೆಗಳು
ಹುಬ್ಬಳ್ಳಿ: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಮಂಗಳವಾರ ಬೆಳಗಾವಿ, ಹುಬ್ಬಳ್ಳಿ ಹಾಗೂ ಚಿತ್ರದುರ್ಗದಲ್ಲಿ ಏಕ ಕಾಲಕ್ಕೆ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಹುಬ್ಬಳ್ಳಿಯ ವಿಶ್ವೇಶ್ವರನಗರ ನಿವಾಸಿ, ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗದ ಸಹಾಯಕ ಆಯುಕ್ತ ಕರಿಯಪ್ಪ ಕರ್ನಲ್ ಅವರ ಮನೆಯಲ್ಲಿ 7.50 ಲಕ್ಷ ನಗದು ಹಾಗೂ ಕೋಟ್ಯಾಂತರ ರುಪಾಯಿ ಮೌಲ್ಯದ ರೇಷ್ಮೆ ಸೀರೆಗಳು ಪತ್ತೆಯಾಗಿವೆ.
ಅಧಿಕಾರಿ ಕರಿಯಪ್ಪ ಕರ್ನಲ್‌ ಅವರ ಪತ್ನಿ ಶಾಂತಾ ಅವರಿಗೆ ರೇಷ್ಮೆ ಸೀರೆಗಳ ಮೇಲೆ ಎಲ್ಲಿಲ್ಲದ ವ್ಯಾಮೋಹ. ಅವರಲ್ಲಿದ್ದ ಐದು ಸಾವಿರಕ್ಕೂ ಹೆಚ್ಚು ರೇಷ್ಮೆ ಸೀರೆ ಪತ್ತೆಯಾಗಿದ್ದು, ಅವುಗಳ ಮೌಲ್ಯ 1.5 ಕೋಟಿ  ರುಪಾಯಿ ಎಂದು ಅಂದಾಜಿಸಲಾಗಿದೆ.
ರೇಷ್ಮೆ ಸೀರೆ ಮಧ್ಯದಲ್ಲಿ ಬಚ್ಚಿಟ್ಟಿದ್ದ 2,000 ರು. ಮುಖಬೆಲೆಯ 1.30 ಲಕ್ಷ ರು. ನಗದು ಸಹ ಪತ್ತೆಯಾಗಿದೆ. ಮಂಜುನಾಥ ನಗರದಲ್ಲಿನ ಬಂಗಲೆ, ಬೆಂಗಳೂರಿನಲ್ಲಿ ಒಂದು ಫ್ಲ್ಯಾಟ್, ಕೃಷಿ ಜಮೀನು, ನಿವೇಶನ, ಕಾರು, ಬೈಕ್, ಇಬ್ಬರು ಮಕ್ಕಳು ವಿದೇಶದಲ್ಲಿ ವ್ಯಾಸಂಗ, ಖಾಲಿ ನಿವೇಶನ, ಚಿನ್ನಾಭರಣ ಪತ್ತೆಯಾಗಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳು ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ಚಿತ್ರದುರ್ಗ ಸೇರಿದಂತೆ 8 ಕಡೆ ದಾಳಿ ನಡೆಸಿ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದರು. ದಾಳಿ ವೇಳೆ ಪತ್ತೆಯಾದ ಆಸ್ತಿ, ಪಾಸ್ತಿ, ನಗದು ವಿವರಗಳ ಪೂರ್ಣ ಮಾಹಿತಿಯನ್ನು ಎಸಿಬಿ ಅಧಿಕಾರಿಗಳು ನೀಡಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com