ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ನೌಕರರಾಗಿರುವ 12 ಮಂದಿ ತಂಡ ಕಳೆದ ರಾತ್ರಿ 2 ಗಂಟೆ ಸುಮಾರಿನಲ್ಲಿ ಬೆತ್ತಿಚೌಕದಲ್ಲಿ ಬೇಟೆಗೆ ತೆರಳಿ 1 ಗಂಡು ಮತ್ತು 1 ಹೆಣ್ಣು ಕಡವೆಯನ್ನು ಬೇಟೆಯಾಡಿದ್ದಾರೆ. ಬೇಟೆಯಾಡಿ ಮರಳಿ ಬರುವಾಗ ಅರಣ್ಯಾಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಇದರಲ್ಲಿ ಪ್ರವಾಸಿ ತಂಡಕ್ಕೆ ಸಹಾಯಕನಾಗಿದ್ದ ಸ್ಥಳೀಯನಾದ ರಫೀಕ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ.