ಹಲವು ಜಿಲ್ಲೆಗಳಲ್ಲಿವೆ ಶಾರ್ಪ್ ಶೂಟರ್ ರಫೀಕ್ ಬೇಟೆಗಾರರ ಗ್ಯಾಂಗ್

ಚಿಕ್ಕಮಗಳೂರಿನ ಭದ್ರಾ ಅರಣ್ಯದಲ್ಲಿ ಕಡವೆ ಬೇಟೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ರಫೀಕ್ ಅಹ್ಮದ್ ವೃತ್ತಿಪರ ಬೇಟೆಗಾರನಾಗಿದ್ದು, ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಚಿಕ್ಕಮಗಳೂರಿನ ಭದ್ರಾ ಅರಣ್ಯದಲ್ಲಿ ಕಡವೆ ಬೇಟೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ  ಆರೋಪಿ ರಫೀಕ್ ಅಹ್ಮದ್ ವೃತ್ತಿಪರ ಬೇಟೆಗಾರನಾಗಿದ್ದು, ಬೇಟೆಯಾಡಲು ಹಲವು ಜಿಲ್ಲೆಗಳಲ್ಲಿ ತನ್ನದೇ ಗ್ಯಾಂಗ್ ಇಟ್ಟುಕೊಂಡಿದ್ದಾನೆ ಎಂದು ತನಿಖೆ ವೇಳೆ ಬಹಿರಂಗವಾಗಿದೆ.

ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿರುವ ಬೇಟೆಗಾರರ ತಂಡದೊಂದಿಗೆ ಹಾಗೂ ರಾಜಕಾರಣಿಗಳೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

2012 ರಲ್ಲಿ ರಫೀಕ್ ವಿರುದ್ಧ ಚಿತ್ರದುರ್ಗದ ಹಿರಿಯೂರು ತಾಲೂಕಿನ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬೆಂಗಳೂರು ಮತ್ತು ತುಮಕೂರಿನ ಸ್ನೇಹಿತರೊಡನೆ ಸೇರಿ ಹೊಸಕೆರೆ ಬೆತ್ತೂರು ರಸ್ತೆಯಲ್ಲಿರುವ ಬೆತ್ತೂರು ಗ್ರಾಮದಲ್ಲಿ ಕೃಷ್ಣಮೃಗ ಬೇಟೆ ಆರೋಪದಲ್ಲಿ ಈತನ ವಿರುದ್ಧ ದೂರು ದಾಖಲಾಗಿತ್ತು.

ಬೇಟೆಗಾಗಿ ಸಂಚು ರೂಪಿಸುತ್ತಿದ್ದ ಸಮಯದಲ್ಲಿ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ಸಂಬಂಧ ಜುಲೈ 14 2012 ರಂದು ದೂರು ದಾಖಲಾಗಿತ್ತು, ನಂತರ ಪೊಲೀಸರು ಅದಕ್ಕೆ ಬಿ- ರಿಪೋರ್ಟ್ ಹಾಕಿ ಪ್ರಕರಣ ಕ್ಲೋಸ್ ಮಾಡಿದ್ದರು.

ಚಿಕ್ಕಮಗಳೂರಿನಲ್ಲಿ ಕಡವೆ ಬೇಟೆಯಾಡಿ ಸಿಕ್ಕಿಕೊಂಡ ನಂತರ ರಫೀಕ್ ಗ್ಯಾಂಗ್ ನ ಕೃತ್ಯಗಳೆಲ್ಲಾ ಬಯಲಾಗಿವೆ. ಪ್ರಾಣಿಗಳನ್ನು ಹೇಗೆ ಕೊಲ್ಲುವುದು ಎಂಬ ಬಗ್ಗೆ ರಫೀಕ್ ತರಬೇತಿ ನೀಡುತ್ತಿದ್ದ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬೇಟೆಗಾರರ  ತಂಡವನ್ನು ಸೃಷ್ಟಿಸಿದ್ದಾನೆ. ಜೊತೆಗೆ ಈತನಿಗೆ ರಾಷ್ಟ್ರ ಮಟ್ಟದಲ್ಲಿ ಬೇಟೆಗಾರರ ಜೊತೆ ಸಂಬಂಧವಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com