ಚಿಕ್ಕಮಗಳೂರು ಕಡವೆ ಹಂತಕರು ವೃತ್ತಿಪರ ಬೇಟೆಗಾರರು: ತನಿಖಾಧಿಕಾರಿಗಳು

ಹೊಸ ವರ್ಷದ ವೇಳೆ ಚಿಕ್ಕಮಗಳೂರಿನಲ್ಲಿ ಸಿಕ್ಕಿಬಿದ್ದ ಕಡವೆ ಬೇಟೆ ಆರೋಪಿಗಳು ಪೊಲೀಸರು ಕಸ್ಟಡಿಯಲ್ಲಿದ್ದು ವಿಚಾರಣೆ ...
ಪ್ರಮುಖ ಆರೋಪಿ ರಫೀಕ್ ಮಹ್ಮದ್
ಪ್ರಮುಖ ಆರೋಪಿ ರಫೀಕ್ ಮಹ್ಮದ್

ಬೆಂಗಳೂರು: ಹೊಸ ವರ್ಷದ ವೇಳೆ ಚಿಕ್ಕಮಗಳೂರಿನಲ್ಲಿ ಸಿಕ್ಕಿಬಿದ್ದ ಕಡವೆ ಬೇಟೆ ಆರೋಪಿಗಳು ಪೊಲೀಸರು ಕಸ್ಟಡಿಯಲ್ಲಿದ್ದು ವಿಚಾರಣೆ ಮುಂದುವರಿದಿದೆ.

ಬೇಟೆಗಾರರ ಜಾಲ ರಾಜ್ಯಾದಂತ ವಿಸ್ತರಿಸಿದ್ದು, ಈ ಸಂಬಂಧ ತನಿಖಾಧಿಕಾರಿಗಳು ಹೆಚ್ಚಿನ ಮಾಹಿತಿಗಾಗಿ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ 11 ಆರೋಪಿಗಳು ಜನವರಿ 10 ರವರೆಗೂ ಅರಣ್ಯ ಇಲಾಖೆ ಅಧಿಕಾರಿಗಳ ವಶದಲ್ಲಿರಲಿದ್ದಾರೆ.

ತನಿಖೆ ದಾರಿ ತಪ್ಪಿಸಲು ಹಾಗೂ ಆರೋಪಿಗಳನ್ನು ರಕ್ಷಿಸಲು ರಾಜಕಾರಣಿಗಳ ಒತ್ತಡದ ನಡುನೆಯೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶರಣು ಬಸಪ್ಪ ತಂಡ 11 ಆರೋಪಿಗಳ ವಿಚಾರಣೆ ಆರಂಭಿಸಿದ್ದಾರೆ. ಗುರುವಾರ ರಾತ್ರಿ ಮತ್ತಿಬ್ಬರನ್ನು ಬಂಧಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ರಫೀಕ್ ಅಹ್ಮದ್ ಎಲ್ಲೆಲ್ಲಿ, ಯಾರ್ಯಾರ ಜೊತೆ ನಂಟು ಹೊಂದಿದ್ದಾನೆ ಎಂಬುದರ ವಿಚಾರಣೆಗೆ ಉನ್ನತ ಮಟ್ಟದ ತನಿಖೆ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾವೇರಿ ವನ್ಯಜೀವಿ ಅಭಯಾರಣ್ಯ, ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ, ಬಂಡಿಪುರ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲೂ ಈತನ ವಿರುದ್ಧ ಬೇಟೆ ಕೇಸುಗಳು ದಾಖಲಾಗಿವೆ.

ಕಡವೆ ಹಂತಕರು ವೃತ್ತಿಪರ ಬೇಟೆಗಾರರಾಗಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಪ್ರಮುಖ ಆರೋಪ್ ರಫೀಕ್ ಅಹಮದ್ ಮತ್ತು ಆತನ ಸಹಚರರು ವೃತ್ತಿಪರ ಬೇಟೆಗಾರರಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆದಿರುವ ಅಕ್ರಮ ಬೇಟೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ರಫೀಕ್ ಬೇಟೆಗಾಗಿ ಅಗತ್ಯವಿರು ಆಯುಧಗಳನ್ನು ಹೊರಗಡೆಯಿಂದ ಖರೀದಿಸಿದ್ದಾನೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಜೈನ್ ಪಿಯುಸಿ ಕಾಲೇಜಿನ 18 ವರ್ಷದ ವಿದ್ಯಾರ್ಥಿ ಮಿರ್ ನಜೀಬ್ ಅಲಿ, ಗನ್ ಹಿಡಿದು ಕೊಂಡು ಬೇಟೆಗಾರನಾಗಿದ್ದಾನೆ. ಈ ಬೇಟೆಗಾರರಿಗೆ ಸ್ಥಳೀಯರು ಕೂಡ ನೆರವು ನೀಡಿದ್ದಾರೆ.

ಬಂಧಿತ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಲು ಚಿಕ್ಕಮಗಳೂರು ನ್ಯಾಯಾಲಯ ನಿರಾಕರಿಸಿದೆ. ಜನವರಿ 1 ರಿಂದ ಪ್ರಕರಣದ ಪ್ರಮುಖ ಆರೋಪಿ ರಫೀಕ್ ತಲೆ ಮರೆಸಿಕೊಂಡಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com