ಸದ್ಯದಲ್ಲಿಯೇ ಕೇಂದ್ರ ಮಾಹಿತಿ ಸಚಿವಾಲಯದ ವೆಬ್ ಸೈಟ್ ನಲ್ಲಿ ಕನ್ನಡ ಭಾಷೆ

ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸದ್ಯದಲ್ಲಿಯೇ ಕನ್ನಡ ಭಾಷೆಯಲ್ಲಿ ವೆಬ್ ಸೈಟ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸದ್ಯದಲ್ಲಿಯೇ ಕನ್ನಡ ಭಾಷೆಯಲ್ಲಿ ವೆಬ್ ಸೈಟ್ ವೊಂದನ್ನು ಆರಂಭಿಸಲಿದೆ.ನ್ಯಾಶನಲ್ ಇಂಟರ್ನೆಟ್ ಎಕ್ಸ್ ಚೇಂಜ್ ಆಫ್ ಇಂಡಿಯಾ(ನಿಕ್ಸಿ), ಭಾರತೀಯ ಭಾಷೆಗಳಲ್ಲಿ ವೆಬ್ ಸೈಟ್ ನಿರ್ಮಿಸುವ ಅಧಿಕೃತ ಕೇಂದ್ರವಾಗಿದ್ದು ಇದೀಗ ಕನ್ನಡದಲ್ಲಿ ತಯಾರು ಮಾಡುತ್ತಿದೆ. ನಿಕ್ಸಿ ಈ ವರ್ಷದ ಪ್ರವಾಸಿ ಭಾರತೀಯ ದಿವಸ್ ದಲ್ಲಿ ಭಾಗವಹಿಸಿತ್ತು.
ಆಧುನಿಕ ತಂತ್ರಜ್ಞಾನ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಬಹುಪಾಲು ಜನರಲ್ಲಿರುವ ಕಂಪ್ಯೂಟರ್ ಅನಕ್ಷರತೆ, ಇಂಗ್ಲಿಷ್ ಭಾಷೆಯ ಸಮಸ್ಯೆಯಿದ್ದು, ಇವೆರಡರ ನಡುವಣ ಅಂತರವನ್ನು ಕಡಿಮೆ ಮಾಡಲು ಸ್ಥಳೀಯ ಭಾಷೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದರಿಂದ ಜನರನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದತ್ತ ಹತ್ತಿರಕ್ಕೆ ತರಬಹುದು ಎನ್ನುತ್ತವೆ ನಿಕ್ಸಿಯ ಅಧಿಕಾರಿಗಳು.
ಪ್ರಸ್ತುತ 15 ಭಾರತೀಯ ಭಾಷೆಗಳಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳನ್ನು ಸದ್ಯಕ್ಕೆ ಹೊಂದಿವೆ. ನಾವು 22 ಭಾರತೀಯ ಭಾಷೆಗಳನ್ನು ಪರಿಗಣಿಸುತ್ತಿದ್ದು ಅವುಗಳಲ್ಲಿ 15 ಭಾಷೆಗಳಲ್ಲಿ ಪೂರ್ಣವಾಗಿವೆ. ಸುಮಾರು 22,000ಕ್ಕೂ ಅಧಿಕ ಮಂದಿ ದಾಖಲು ಮಾಡಿಕೊಂಡಿದ್ದಾರೆ. ನಿಕ್ಸಿ ರಾಜ್ಯ ಸರ್ಕಾರಗಳೊಂದಿಗೆ ಕೂಡ ಮಾತುಕತೆ ನಡೆಸುತ್ತಿದ್ದು ಪ್ರತಿ ರಾಜ್ಯ ಸರ್ಕಾರಗಳು ಇದನ್ನು ಬಳಸಬಹುದು ಎನ್ನುತ್ತವೆ.
ವಿಶ್ವ ಕನ್ನಡ ಸಾಫ್ಟೆಕ್ ಮತ್ತು ವಿಕಿಪೀಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯು.ಬಿ.ಪವನಜ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿ, ಇದು ಸಾಕಷ್ಟು ಮೊದಲೇ ಆಗಬೇಕಿತ್ತು. ಕನ್ನಡವನ್ನು ಪ್ರಮುಖ ಭಾಷೆಯನ್ನಾಗಿ ಪರಿಗಣಿಸಿರಲಿಲ್ಲ. ಇದಕ್ಕೆ ಕಾರಣ ರಾಜ್ಯ ಸರ್ಕಾರದ ಪ್ರತಿನಿಧಿಗಳೇ. ವರ್ಲ್ಡ್ ವೈಡ್ ವೆಬ್ ಕನ್ಸೋರ್ಟಿಯಂ ಅಥವಾ ಇತರ ಸಭೆಗಳಿಗೆ ಕರ್ನಾಟಕದಿಂದ ಸರಿಯಾದ ಪ್ರತಿನಿಧಿಗಳು ಭಾಗವಹಿಸದಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ.
ನಮ್ಮಲ್ಲಿರುವ ಯೂನಿಕೋಡ್ ಸಾಫ್ಟ್ ವೇರ್ ನ್ನು ಎಲ್ಲಾ ಮೇಲ್ ಗಳಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಳಸುತ್ತೇವೆ.ಕನ್ನಡ ಭಾಷೆಯಲ್ಲಿನ ಡೊಮೈನ್ ಹೆಚ್ಚು ಜನರಿಗೆ ತಲುಪಲು ಸಹಾಯಕವಾಗುತ್ತದೆ. ಆದರೆ ರಾಜ್ಯ ಸರ್ಕಾರದ ಅದರಲ್ಲೂ ಅಧಿಕಾರಿಗಳ ಮನೋಧರ್ಮ ಬದಲಾಗಬೇಕು. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡವನ್ನು ಬಳಸುವ ಶಾಶ್ವತ ಸಮಿತಿ ನಮ್ಮಲ್ಲಿರಬೇಕು.ನಾವು ಕಂಪ್ಯೂಟರ್ ಮತ್ತು ಮೊಬೈಲ್ ಫೋನ್ ನಲ್ಲಿ ಕನ್ನಡ ಭಾಷೆಯನ್ನು ಬಳಸುತ್ತೇವೆ. ನಮಗೆ ಈ ವಿಷಯದಲ್ಲಿ ತಜ್ಞರ ಅವಶ್ಯಕತೆಯಿದೆ ಎನ್ನುತ್ತಾರೆ ಪವನಜ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com