ಹೆಚ್ಚಿನ ಪ್ರಮಾಣದಲ್ಲಿ ಅರಿವಳಿಕೆ ಮದ್ದು: ನಾಗರಹೊಳೆಯಲ್ಲಿ ಹೆಣ್ಣುಹುಲಿ ಸಾವು

ಅರಿವಳಿಕೆ ಚುಚ್ಚುಮದ್ದನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿದ ಪರಿಣಾಮ 9 ವರ್ಷದ ಹೆಣ್ಣು ಹುಲಿ ನಾಗರಹೊಳೆ ಕಾಡಿನಲ್ಲಿ ಇಂದು ಬೆಳಗಿನ ಜಾವ...
ಸಾವನ್ನಪ್ಪಿದ ಹೆಣ್ಣು ಹುಲಿ
ಸಾವನ್ನಪ್ಪಿದ ಹೆಣ್ಣು ಹುಲಿ

ಮೈಸೂರು: ಅರಿವಳಿಕೆ ಚುಚ್ಚುಮದ್ದನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿದ ಪರಿಣಾಮ 9 ವರ್ಷದ ಹೆಣ್ಣು ಹುಲಿ ನಾಗರಹೊಳೆ ಕಾಡಿನಲ್ಲಿ ಇಂದು ಬೆಳಗಿನ ಜಾವ ಸಾವನ್ನಪ್ಪಿದೆ.

ಹುಲಿ ಸಾವಿಗೆ ಹೆಚ್ಚಿನ ಪ್ರಮಾಣದಲ್ಲಿ ಅರವಳಿಕೆ ಚುಚ್ಚು ಮದ್ದು ನೀಡಿದ್ದೇ ಕಾರಣ ಎಂದು ಆರೋಪಿಸಲಾಗಿದೆ.

ನಾಗರಹೊಳೆಯ ಡಿ.ಬಿ. ಕುಪ್ಪೆ ಅರಣ್ಯ ಪ್ರದೇಶದಿಂದ ಆಹಾರಕ್ಕಾಗಿ ಹುಲಿ ನಾಡಿನತ್ತ ಆಗಾಗ್ಗೆ ಬರುತ್ತಿತ್ತು. ಹಲವು ಬಾರಿ ಗಂಡೆತ್ತೂರು ಗ್ರಾಮದ ಸಾಕು ಪ್ರಾಣಿಗಳ ಕೊಂದು ತಿನ್ನುತ್ತಿತ್ತು.

ಗ್ರಾಮಸ್ಥರ ಮನವಿ ಮೇರೆಗೆ ಹುಲಿಗೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿ, ಬೋನಿನ್ನಲ್ಲಿ ಹಾಕಲು ಅಧಿಕಾರಿಗಳು ಯೋಜನೆ ರೂಪಿಸಿದ್ದರು. ಅದರಂತೆ ಗ್ರಾಮದ ಗಣೇಶ್‌ ಎಂಬುವರ ಬಾಳೆ ತೋಟದಲ್ಲಿ ಸೋಮವಾರ ಇಡೀ ದಿನ ಕಾರ್ಯಾಚರಣೆ ನಡೆದಿತ್ತು. ಆದರೂ ಹುಲಿ ಅಧಿಕಾರಿಗಳ ಧಿಕ್ಕುತಪ್ಪಿಸಿತ್ತು. ಸಂಜೆ 5 ಸುಮಾರಿಗೆ ಕಣ್ಣಿಗೆ ಬಿದ್ದ ಹುಲಿಗೆ ತಜ್ಞರು ಬಂದೂಕಿನ ಮೂಲಕ ಅರವಳಿಕೆ ನೀಡಿದರು.

ಬಳಿಕ ಹುಲಿಯನ್ನು ನಾಗರಹೊಳೆ ಕಾಡಿಗೆ ತಂದು ಬಿಡಲಾಯಿತು. ಹುಲಿ ಎರಡು ಮರಿಗಳಿಗೆ ಹಾಲುಣಿಸುತ್ತಿದ್ದ ಕಾರಣ ಅರಿವಳಿಕೆ ಮದ್ದಿನ ಪ್ರಮಾಣದಲ್ಲಿ ವ್ಯತ್ಯಯ ಉಂಚಾಗಿದ್ದರಿಂದ ಸಾವನ್ನಪ್ಪಿದೆ ಎಂದು ನಾಗರಹೊಳೆ ಅರಣ್ಯ ಸಂರಕ್ಷಕ ಎಸ್. ಮಣಿಕಂಠನ್ ಹೇಳಿದ್ದಾರೆ.

ಮೊದಲ ಬಾರಿಗೆ ಅರವಳಿಕೆ ಮದ್ದಿನ ಇಂಜೆಕ್ಷನ್ ನೀಡಲಾಗಿದೆ, ಆದರೆ ಈ ವೇಳೆ ಹುಲಿ ಎಲ್ಲಿಯೂ ಪತ್ತೆಯಾಗಿಲ್ಲ, ಮತ್ತೆ ಮಧ್ಯರಾತ್ರಿ ವೇಳೆಗೆ ಬಾಳೆತೋಟದಲ್ಲಿ ಹುಲಿ ಕಂಡಿದೆ. ಹೀಗಾಗಿ ಮತ್ತೆ ಇಂಜೆಕ್ಷನ್ ಶೂಟ್ ಮಾಡಿದ್ದಾರೆ. ನಂತರ ಹುಲಿ ಸಿಕ್ಕಿದೆ. ಹುಲಿಯನ್ನು ತಂದು ಬೋನಿನಲ್ಲಿ ಇಡಲಾಗಿತ್ತು. ಮುಂಜಾನೆ 4.30 ರ ವೇಳೆಗೆ ಹುಲಿ ಸಾವನ್ನಪ್ಪಿರುವುದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com