ಮೊದಲ ಬಾರಿಗೆ ಕಸ್ಟಮ್ಸ್ ಬಗ್ಗೆ ಸಮೀಕ್ಷೆ: ಬೆಂಗಳೂರು ಕಸ್ಟಮ್ಸ್ ಬಗ್ಗೆ ಬಹುತೇಕ ವಿದೇಶಿಯರು ಸಂತೃಪ್ತ

ಅಂತರಾಷ್ಟ್ರೀಯ ಪ್ರಯಾಣಿಕರ ಸಂತೃಪ್ತಿ ಕುರಿತಂತೆ ಇದೇ ಮೊದಲ ಬಾರಿಗೆ ಬೆಂಗಳೂರು ಕಸ್ಟಮ್ಸ್ ಇಲಾಖೆ ಸಮೀಕ್ಷೆಯೊಂದನ್ನು ನಡೆಸಿದ್ದು, ಸಮೀಕ್ಷೆಯ ವರದಿಯಲ್ಲಿ ಶೇ.87 ರಷ್ಟು ಪ್ರಯಾಣಿಕರು ಸಂತೃಪ್ತಿ ವ್ಯಕ್ತಪಡಿಸಿರುವುದು ಕಂಡುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಅಂತರಾಷ್ಟ್ರೀಯ ಪ್ರಯಾಣಿಕರ ಸಂತೃಪ್ತಿ ಕುರಿತಂತೆ ಇದೇ ಮೊದಲ ಬಾರಿಗೆ ಬೆಂಗಳೂರು ಕಸ್ಟಮ್ಸ್ ಇಲಾಖೆ ಸಮೀಕ್ಷೆಯೊಂದನ್ನು ನಡೆಸಿದ್ದು, ಸಮೀಕ್ಷೆಯ ವರದಿಯಲ್ಲಿ ಶೇ.87 ರಷ್ಟು ಪ್ರಯಾಣಿಕರು ಸಂತೃಪ್ತಿ ವ್ಯಕ್ತಪಡಿಸಿರುವುದು ಕಂಡುಬಂದಿದೆ.

ಕಸ್ಟಮ್ಸ್ ಇಲಾಖೆ ಹಾಗೂ ಆಚಾರ್ಯ ತಾಂತ್ರಿಕ ವಿದ್ಯಾಲಯ ಜೊತೆಗೂಡಿ ಈ ಸಮೀಕ್ಷೆಯನ್ನು ನಡೆಸಿದ್ದು, ನಿನ್ನಯಷ್ಟೇ ಕಸ್ಟಮ್ಸ್ ಇಲಾಖೆ ಮುಖ್ಯ ಆಯುಕ್ತ ರವಿ ಭೂಷಣ್ ತಿವಾರಿಯವರು ವರದಿಯನ್ನು ಬಿಡುಗಡೆ ಮಾಡಿದರು.

1,000 ಅಂತರಾಷ್ಟ್ರೀಯ ಪ್ರಯಾಣಿಕರನ್ನು ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿದ್ದು, ಸಮೀಕ್ಷೆಯನ್ನು ಸೆಪ್ಟೆಂಬರ್ 12 ರಿಂದ 26 ವರೆಗೆ 15 ದಿನಗಳ ಕಾಲ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಅಧ್ಯಾಯನದ ಪ್ರಮುಖ ಶಿಫಾರಸ್ಸೆಂದರೆ, ರಾತ್ರಿ ಪಾಳಿಯಲ್ಲಿ ಮಹಿಳಾ ಅಧಿಕಾರಿಗಳನ್ನು ನಿಯೋಜಿಸುವುದಾಗಿದೆ.

ವರದಿಯನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿರುವ ರವಿ ಭೂಷಣ ತಿವಾರಿಯವರು, ಪ್ರಶ್ನಾವಳಿಯನ್ನು ಫ್ರೆಂಚ್, ಜಪಾನ್ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ತಯಾರು ಮಾಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ. ಈ ಬಾರಿ ಪ್ರಯಾಣಿಕರ ಸಂತೃಪ್ತ ಮಟ್ಟ ಸಾಕಷ್ಟು ಬದಲಾಗಿದೆ ಎಂದು ಹೇಳಿದ್ದಾರೆ.

ಸೀಮಾ ಸುಂಕ ನಿಯಮಗಳು ಮತ್ತು ನಿಂಬಧನೆಗಳ ಕುರಿತು ಕಸ್ಟಮ್ಸ್ ಸಿಬ್ಬಂದಿಗೆ ಮೊದಲು ತರಬೇತಿ ನೀಡುವ ಅಗತ್ಯವಿದೆ. ಸಮೀಕ್ಷೆಯಿಂದ ನಮ್ಮ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಾಯಕವಾಗಿದೆ. ಈ ರೀತಿಯ ಸಮೀಕ್ಷೆಯನ್ನು ಮೊದಲ ಬಾರಿಗೆ ಮುಂಬೈ ಮಾಡಿತ್ತು. ಬೆಂಗಳೂರು ಇದೀಗ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಆದರೆ, ಬೆಂಗಳೂರು ನಗರ ಮಾದರೆಯೆಂದೇ ಹೇಳಬಹುದಾಗಿದೆ ಎಂದು ಹೇಳಿದರು.

ಮಹಿಳಾ ಅಧಿಕಾರಿಗಳ ಅವಶ್ಯಕತೆಗಳಿವೆ. ಬಹುತೇಕ ಮಹಿಳಾ ಅಧಿಕಾರಿಗಳನ್ನು ನಾವು ಬಿಹಾರ ಅಥವಾ ಉತ್ತರಪ್ರದೇಶದಿಂದ ಕರೆಸಿಕೊಳ್ಳುತ್ತೇವೆ. ಕೆಲಸ ಬಳಿಕ ಅವರು ಮತ್ತೆ ತವರಿಗೆ ಮರಳುತ್ತಾರೆ. ಸಂಸ್ಥೆ ಮೂಲಕ ನಾವು ನೇಮಕ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ಮೂಲಕ ಕಸ್ಟಮ್ಸ್ ಉದ್ಯೋಗವನ್ನು ಜನಪ್ರಿಯಗೊಳಿಸಲು ಮನವಿ ಮಾಡಿಕೊಳ್ಳುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕಸ್ಟಮ್ಸ್ ನಲ್ಲಿರುವ ಮಹಿಳಾಧಿಕಾರಿಗಳು ಆರಂಭದಲ್ಲೇ ತಿಂಗಳಿಗೆ ರೂ. 40,000 ಹಣವನ್ನು ಸಂಪಾದನೆ ಮಾಡುತ್ತಾರೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com