ಎಂಬಸಿ ಮಾನ್ಯತಾ ಪಾರ್ಕ್ ಬಳಿ ಎಸ್ಕಲೇಟರ್ ಸ್ಕೈವಾಕ್ ಉದ್ಘಾಟನೆ

ನಾಗವಾರ ಜಂಕ್ಷನ್ ಬಳಿ ಹೊರವರ್ತುಲ ರಸ್ತೆಯಲ್ಲಿ ಎಂಬಸಿ ಮಾನ್ಯತಾ ಬ್ಯುಸಿನೆಸ್ ಪಾರ್ಕ್ ಎದುರು ಎಂಬಸಿ ಗ್ರೂಪ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದಲ್ಲಿ...
ಎಂಬಸಿ ಮಾನ್ಯತಾ ಪಾರ್ಕ್ ಬಳಿ ಎಸ್ಕಲೇಟರ್ ಸ್ಕೈವಾಕ್ ಉದ್ಘಾಟನೆ

ಬೆಂಗಳೂರು: ನಾಗವಾರ ಜಂಕ್ಷನ್ ಬಳಿ ಹೊರವರ್ತುಲ ರಸ್ತೆಯಲ್ಲಿ ಎಂಬಸಿ ಮಾನ್ಯತಾ ಬ್ಯುಸಿನೆಸ್ ಪಾರ್ಕ್ ಎದುರು ಎಂಬಸಿ ಗ್ರೂಪ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದಲ್ಲಿ ನಿರ್ಮಿಸಲಾಗಿರುವ ಎಸ್ಕಲೇಟರ್ ಸ್ಕೈವಾಕ್ ಅನ್ನು ಇಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಶ್ರೀ ಕೆ.ಜೆ.ಜಾರ್ಜ್ ಅವರು ಉದ್ಘಾಟಿಸಿದರು. ಕೃಷಿ ಸಚಿವ ಮತ್ತು ಬ್ಯಾಟರಾಯನಪುರ ಶಾಸಕ ಶ್ರೀ ಕೃಷ್ಣ ಬೈರೇಗೌಡ ಹಾಗೂ ಮೇಯರ್ ಶ್ರೀಮತಿ ಪದ್ಮಾವತಿ ಹಾಗೂ ಎಂಬಸಿ ಗ್ರೂಪ್‍ನ ಸಿಎಂಡಿ ಶ್ರೀ ಜಿತ್ತು ವಿರ್ವಾನಿ ಉಪಸ್ಥಿತರಿದ್ದರು. ಈ ಸ್ಕೈವಾಕ್ ನಿರ್ಮಾಣದ ವೆಚ್ಚ 7 ಕೋಟಿ ರೂ.ಗಳಾಗಿದ್ದು ಇದನ್ನು ಪೂರ್ಣವಾಗಿ ಎಂಬಸಿ ಗ್ರೂಪ್ ಭರಿಸಿದೆ.

ಎಂಬಸಿ ಮಾನ್ಯತಾ ಬ್ಯುಸಿನೆಸ್ ಪಾರ್ಕ್‍ನಲ್ಲಿ 95000ಕ್ಕೂ ಹೆಚ್ಚು ಉದ್ಯೋಗಿಗಳು ಅಲ್ಲಿನ 60 ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವರಲ್ಲಿ 15000 ಮಂದಿ ಪ್ರತಿನಿತ್ಯ ಈ ಜಂಕ್ಷನ್ ದಾಟುತ್ತಾರೆ. ಪ್ರತಿಯೊಬ್ಬರಿಗೂ ಈ ಎಸ್ಕಲೇಟರ್ ಸ್ಕೈವಾಕ್ ಅತ್ಯಂತ ನಿರಾಳ ತಂದಿದೆ. ಹೊರವರ್ತುಲ ರಸ್ತೆಯ ಈ ಭಾಗ ರಸ್ತೆಯನ್ನು ದಾಟುವ ಪಾದಚಾರಿಗಳಿಗೆ ಅದರಲ್ಲೂ ಕೆಲಸದ ಅವಧಿಯಲ್ಲಿ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿತ್ತು. ಶುಕ್ರವಾರದಂದು ಈ ಜಂಕ್ಷನ್‍ನಲ್ಲಿ 19000 ಮಂದಿ ರಸ್ತೆ ದಾಟುತ್ತಿದ್ದರು. ಈ ಪ್ರಾಜೆಕ್ಟ್ ವಿನ್ಯಾಸವನ್ನು ಬಿಡಿಎ ನವೆಂಬರ್ 2015ರಲ್ಲಿ ಅನುಮೋದಿಸಿದ್ದು ಜನವರಿ 2016ರಂದು ನಿರ್ಮಾಣ ಪ್ರಾರಂಭವಾಯಿತು. ಸ್ಕೈವಾಕ್ ಅನ್ನು ಬಿಡಿಎ ಮತ್ತು ಮೆ.ನಾಗೇಶ್ ಕನ್ಸಲ್ಟೆಂಟ್ಸ್ ವಿನ್ಯಾಸಗೊಳಿಸಿದ್ದು ಎಸ್‍ಟಿಎಡಬ್ಲ್ಯೂಆರ್ ಕನ್ಸಲ್ಟೆಂಟ್ಸ್ ಪರಿಶೀಲಿಸಿತ್ತು. ಸಿನರ್ಜಿ ಪ್ರಾಪರ್ಟಿ ಡೆವಲಪ್‍ಮೆಂಟ್ ಸರ್ವೀಸಸ್ ಈ ಪ್ರಾಜೆಕ್ಟ್ ನಿರ್ವಹಿಸಿತ್ತು.

ಈ ಸ್ಕೈವಾಕ್ ಎಸ್ಕಲೇಟರ್ ಉದ್ಘಾಟಿಸಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, `ಅತ್ಯಂತ ಒತ್ತಡದ ನಾಗವಾರ ಜಂಕ್ಷನ್‍ನಲ್ಲಿ ಸ್ಕೈವಾಕ್ ಎಸ್ಕಲೇಟರ್ ಉದ್ಘಾಟಿಸುವುದು ನನಗೆ ಬಹಳ ಸಂತೋಷ ನೀಡಿದೆ. ಇದು ಕಛೇರಿಗೆ ತೆರಳುವವರಿಗೆ, ಸ್ಥಳೀಯ ನಿವಾಸಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಒದಗಿಸಿದೆ. ಇದರಿಂದ ಪೊಲೀಸರಿಗೂ ಟ್ರಾಫಿಕ್ ನಿರ್ವಹಣೆ ಸುಲಭವಾಗುತ್ತದೆ ಎನ್ನುವುದು ನನ್ನ ನಂಬಿಕೆ. ಎಂಬಸಿ ಗ್ರೂಪ್ ಈ ಪ್ರಾಜೆಕ್ಟ್‍ಗೆ ಸಂಪೂರ್ಣ ಹಣ ಭರಿಸಿದಂತೆಯೇ ಹೆಚ್ಚು ಕಾರ್ಪೊರೇಟ್ ಸಂಸ್ಥೆಗಳು ಸರ್ಕಾರದೊಂದಿಗೆ ಸಾಮಾಜಿಕ ಮೂಲಸೌಕರ್ಯದ ಯೋಜನೆಗಳನ್ನು ಜಾರಿಗೊಳಿಸಲು ಮತ್ತು ಬೆಂಗಳೂರಿನಲ್ಲಿ ವಾಸಿಸುವುದು ಮತ್ತು ಪ್ರಯಾಣಿಸುವುದು ಸುರಕ್ಷಿತ ಮತ್ತು ತಡೆರಹಿತವಾಗಿಸಲು ಉತ್ತೇಜಿಸುತ್ತೇನೆ' ಎಂದರು.

ಕೃಷಿ ಸಚಿವ ಮತ್ತು ಬ್ಯಾಟರಾಯನಪುರ ಶಾಸಕ ಶ್ರೀ ಕೃಷ್ಣ ಬೈರೇಗೌಡ, `ನನ್ನ ಕ್ಷೇತ್ರದಲ್ಲಿ ಹಲವು ಐಟಿ-ಬಿಟಿ ಕಂಪನಿಗಳಿವೆ ಮತ್ತು ಇದು ಮೊದಲ ಬಾರಿಗೆ ಪ್ರತಿಯೊಬ್ಬರಿಗೂ ಅನುಕೂಲ ಒದಗಿಸುವ ಸಾಮಾಜಿಕ ಯೋಜನೆಯೊಂದನ್ನು ಕಂಪನಿಯೊಂದು ಕೈಗೊಂಡಿರುವುದು. ಈ ಜಂಕ್ಷನ್‍ನಲ್ಲಿ ವಾಹನದಟ್ಟಣೆ ಹೆಚ್ಚಾಗುತ್ತಿದ್ದು ಪಾದಚಾರಿಗಳಿಗೆ ರಸ್ತೆ ದಾಟುವುದು ಕಷ್ಟವಾಗುತ್ತಿದೆ. ಹೊಸದಾಗಿ ಪ್ರಾರಂಭವಾದ ಎಸ್ಕಲೇಟರ್ ಸ್ಕೈವಾಕ್ ಈ ಅಪಘಾತ ನಡೆಯುತ್ತಿದ್ದ ಜಂಕ್ಷನ್‍ನಲ್ಲಿ ಜನರಿಗೆ ಈ ಸೌಲಭ್ಯ ಬಳಸಲು ಅನುಕೂಲ ಒದಗಿಸಿದೆ. ಪಾದಚಾರಿಗಳು ಈ ಸ್ಕೈವಾಕ್ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂದು ಕೋರುತ್ತೇನೆ. ಎಂಬಸಿ ಗ್ರೂಪ್‍ಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಮತ್ತು ಮತ್ತಷ್ಟು ಕಾರ್ಪೊರೇಟ್ ಸಂಸ್ಥೆಗಳು ಸರ್ಕಾರದೊಂದಿಗೆ ಕೈ ಜೋಡಿಸುವ ಮೂಲಕ ನಗರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕೋರುತ್ತೇನೆ' ಎಂದರು.

ಎಸ್ಕಲೇಟರ್ ಸ್ಕೈವಾಕ್ ಅನ್ನು ಪಾದಚಾರಿಗಳು ಬಳಸಲು ಉತ್ತೇಜಿಸುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಜಂಕ್ಷನ್ ದಾಟುವವರಿಗೆ ಸುರಕ್ಷತೆ ನೀಡುವಂತೆ ರೂಪಿಸಲಾಗಿದೆ. ಸ್ಕೈವಾಕ್ ತಡೆರಹಿತ ಪರಿಹಾರವನ್ನು ಪಾದಚಾರಿಗಳಿಗೆ ನೀಡುತ್ತಿದ್ದು ಕಛೇರಿಗೆ ಹೋಗುವವರು, ಸ್ಥಳೀಯ ನಿವಾಸಿಗಳು ಮತ್ತು ಸಾರ್ವಜನಿಕರಿಗೆ ಅಡೆತಡೆ ರಹಿತ ಪರಿಹಾರ ನೀಡಿದೆ. ಸ್ಕೈವಾಕ್ ಹೊರವರ್ತುಲ ರಸ್ತೆಯ ಬಸ್ ನಿಲ್ದಾಣಕ್ಕೂ ಸುಲಭವಾಗಿ ತಲುಪುವಂತಿದೆ.

ಈ ಉದ್ಘಾಟನೆ ಕುರಿತು ಎಂಬಸಿ ಗ್ರೂಪ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿತು ವಿರ್ವಾನಿ, `ಎಸ್ಕಲೇಟರ್ ಸ್ಕೈವಾಕ್‍ನ ಯಶಸ್ವಿಯಾಗಿ ಪೂರ್ಣಗೊಳಿಸಿರುವುದಕ್ಕೆ ನಮಗೆ ಬಹಳ ಸಂತೋಷವಾಗಿದೆ. ಇದು ನಗರದ ಮೂಲಸೌಕರ್ಯ ಸುಧಾರಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಎಸ್ಕಲೇಟರ್ ಸ್ಕೈವಾಕ್ ಉದ್ಘಾಟನೆಯಿಂದ ನಗರದಲ್ಲಿ ಉತ್ತಮ ಸಾರ್ವಜನಿಕ ಮೂಲಸೌಕರ್ಯ ತರುವ ಮತ್ತು ವಿವಿಧ ಸಂಸ್ಥೆಗಳು ಹಾಗೂ ಸ್ಥಳೀಯ ಆಡಳಿತದೊಂದಿಗೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುವ ಮೂಲಕ ಬೆಂಗಳೂರು ಮತ್ತು ಹಾಗೂ ಸುತ್ತಮುತ್ತಲಲ್ಲದೆ ನಮ್ಮ ಬ್ಯುಸಿನೆಸ್ ಪಾರ್ಕ್‍ಗಳಲ್ಲಿಯೂ ವಿವಿಧ ಕಾರ್ಯಕ್ರಮಗಳಿಗೆ ಬೆಂಬಲಿಸಲಿದೆ' ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com