ಕರ್ನಾಟಕ ಬ್ಯಾಂಕ್ ಎಟಿಎಂನಿಂದ ರೂ. 21 ಲಕ್ಷ ದರೋಡೆ; ಹಣ ತುಂಬಿದವರಿಂದಲೇ ಕೃತ್ಯದ ಶಂಕೆ

ಮುಸುಕು ಧರಿಸಿದ್ದ ನಾಲ್ವರು ವ್ಯಕ್ತಿಗಳು ಮಂಗಳವಾರ ಮುಂಜಾನೆ 3 ಗಂಟೆಯಲ್ಲಿ ತುಮಕೂರಿನ ಗುಬ್ಬಿ ಗೇಟ್‌ ಬೈಪಾಸ್‌ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತುಮಕೂರು: ಮುಸುಕು ಧರಿಸಿದ್ದ ನಾಲ್ವರು ವ್ಯಕ್ತಿಗಳು ಮಂಗಳವಾರ ಮುಂಜಾನೆ 3 ಗಂಟೆಯಲ್ಲಿ ತುಮಕೂರಿನ ಗುಬ್ಬಿ ಗೇಟ್‌ ಬೈಪಾಸ್‌ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂ ನಿಂದ 21 ಲಕ್ಷ ರು ದರೋಡೆ ಮಾಡಿದ್ದಾರೆ.

ಮುಂಜಾನೆ ಸುಮಾರು 3 ಗಂಟೆಗೆ ಕಾವಲುಗಾರ ಗಂಗಣ್ಣ ನನ್ನು ಚಾಕುವಿನಿಂದ ಬೆದರಿಸಿ,ಕೈಕಾಲು ಕಟ್ಟಿ ಹಾಕಿ ಹಣ ದೋಚಿದ್ದಾರೆ.  2 ಸಾವಿರ ರು ನೋಟುಗಳ 11.16 ಲಕ್ಷ ಸಾವಿರ ರು.ಹಾಗೂ 100 ರು ನೋಟುಗಳ 2.8 ಲಕ್ಷ ರು. ಹಾಗೂ 500 ರು ಗಳ 7.7 ಲಕ್ಷ ರು. ಹಣವನ್ನು ದೋಚಿ ವಾಹನದಲ್ಲಿ ಪರಾರಿಯಾಗಿದ್ದಾರೆ.

ದರೋಡೆಕೋರರು ಎಟಿಎಂ ಯಂತ್ರಕ್ಕೆ ಹಾನಿಯಾಗದಂತೆ ದರೋಡೆ ಮಾಡಿರುವುದರಿಂದ ಅನುಮಾನಗೊಂಡಿರುವ ಪೊಲೀಸರು, ಎಟಿಎಂ ಕಾವಲುಗಾರರಾದ ರವೀಶ್‌, ಗಂಗಣ್ಣ ಹಾಗೂ ಎಟಿಎಂಗೆ ಸೋಮವಾರ ಸಂಜೆ ಹಣ ತುಂಬಿದ ಏಜೆನ್ಸಿಯ ಮಹೇಶ್‌, ಅಶ್ವತ್ಥ್‌  ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಎಟಿಎಂ ಕೀ ಬಳಸಲು ಪಾಸ್ ವರ್ಡ್ ಅಗತ್ಯವಿದೆ, ಪಾಸ್ ವರ್ಡ್ ಇಲ್ಲದೇ ಕೀ ಉಪಯೋಗಿಸಲು ಸಾಧ್ಯವಿಲ್ಲ, ಹೀಗಾಗಿ ತಿಳಿದಿರುವವರೇ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಶಂಕಿಸಲಾಗಿದೆ.

ಎಟಿಎಂ ಕಾವಲುಗಾರ ಹಾಗೂ ಹಣ ತುಂಬುವ ಸಿಬ್ಬಂದಿ ಒಂದೇ ಏಜೆನ್ಸಿಗೆ ಸೇರಿದವರು ಎಂದು ತಿಳಿದುಬಂದಿದೆ. ಎಟಿಎಂ ದರೋಡೆ ಪೂರ್ವ ಯೋಜಿತ ಕೃತ್ಯ ಇರಬಹುದು ಎಂದು ಬ್ಯಾಂಕ್ ನ ಹಿರಿಯ ಮ್ಯಾನೇಜರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com